ಡಿ.22ರಂದು ಹಿರಿಯ ನಾಗರಿಕರ ಮತ್ತು ವಿಕಲಚೇತನರ ಸಬಲೀಕರಣ ಇಲಾಖೆ ಹಾಗೂ ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದ ವತಿಯಿಂದ ತಾಲೂಕಿನ ಕೊನಘಟ್ಟ ಗ್ರಾಮ ಪಂಚಾಯತಿಯಲ್ಲಿ ವಿಕಲಚೇತನರ ಮೌಲ್ಯಮಾಪನ ಶಿಬಿರ ಹಮ್ಮಿಕೊಳ್ಳಲಾಗಿದೆ.
ಪಂಚಾಯ್ತಿ ವ್ಯಾಪ್ತಿಯ ಎಲ್ಲಾ ವಿಕಲಚೇತನರು ತಪ್ಪದೆ ಭಾಗವಹಿಸಬೇಕೆಂದು ಹಿರಿಯ ನಾಗರಿಕರ ಮತ್ತು ವಿಕಲಚೇತನರ ಸಬಲೀಕರಣ ಇಲಾಖೆ ಮನವಿ ಮಾಡಲಾಗಿದೆ.
ಶಿಬಿರದಲ್ಲಿ ವಿಕಲಚೇತನರಿಗೆ ದೊರೆಯುವ ಸೇವೆಗಳ ಬಗ್ಗೆ ಮಾಹಿತಿ
*ತಜ್ಞರಿಂದ ವಿಕಲಚೇತನರ ವೈದ್ಯಕೀಯ ಮೌಲ್ಯಮಾಪನ
*ವಿಕಲಚೇತನರ ಯೋಜನೆಗಳ ಬಗ್ಗೆ ಮಾಹಿತಿ ನೀಡಲಾಗುವುದು
*ವಿಕಲಚೇತನರ ಕುಂದು ಕೊರತೆಗಳನ್ನು ತಿಳಿಸಬಹುದು
*ಯುಡಿಐಡಿಗೆ ಅರ್ಜಿ ಸಲ್ಲಿಸಬಹುದು
*ಸಾಧನ ಸಲಕರಣೆಗಳಿಗೂ ಅರ್ಜಿ ಸಲ್ಲಿಸಬಹುದು
ಭಾಗವಹಿಸುವ ಪ್ರತಿಯೊಬ್ಬ ವಿಕಲಚೇತನರು ತಪ್ಪದೆ ಕೆಳಗಿನ ದಾಖಲಾತಿಗಳನ್ನು ಎರಡು ಜೆರಾಕ್ಸ್ ಪ್ರತಿ ತರುವುದು
*ಯುಡಿ ಐಡಿ ಕಾರ್ಡ್
*ರೇಷನ್ ಕಾರ್ಡ್ (ಪಡಿತರ ಚೀಟಿ)
*ಆಧಾರ್ ಕಾರ್ಡ್
*ಆದಾಯ ಮತ್ತು ಜಾತಿ ಪ್ರಮಾಣ ಪತ್ರ
*2 ಫೋಟೋ
ಸ್ಥಳ:- ಕೊನಘಟ್ಟ ಸರ್ಕಾರಿ ಪ್ರಾಥಮಿಕ ಶಾಲೆ
ಸಮಯ :-ಬೆಳಗ್ಗೆ 9:30 ಕ್ಕೆ