
ಡಿ.15ರಂದು ಕಾಣೆಯಾಗಿದ್ದ 15 ವರ್ಷದ ಬಾಲಕ ಇಂದು ಶವವಾಗಿ ಪತ್ತೆಯಾಗಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಹೋಬಳಿಯ ಚಿಕ್ಕರಾಯಪ್ಪನಹಳ್ಳಿ ಮಾರ್ಗದ ಸಾಧುಮಠ ರಸ್ತೆಯಲ್ಲಿ ಸಮೀಪ ಪತ್ತೆಯಾಗಿದೆ.
ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಹೋಬಳಿಯ ದೊಡ್ಡರಾಯಪ್ಪನಹಳ್ಳಿ ನಿವಾಸಿ ನಿಶಾಂಕ್ ಎನ್(15) ಮೃತ ಬಾಲಕ.

ನಿಶಾಂಕ್ ಎನ್ ಚಿಕ್ಕಬಳ್ಳಾಪುರದಲ್ಲಿರುವ ಬೆಸ್ಟ್ ಪಿ.ಯು.ಸಿ ಕಾಲೇಜ್ ನಲ್ಲಿ ಪ್ರಥಮ ವರ್ಷದ ಪಿ.ಯು.ಸಿ ವ್ಯಾಸಂಗ ಮಾಡುತ್ತಿದ್ದನು. ಡಿ.15ರಂದು ನನ್ನ ಮಗನಿಗೆ ಹುಷಾರ್ ಇಲ್ಲದ ಕಾರಣ ಕಾಲೇಜಿಗೆ ಹೋಗದೆ ಮನೆಯಲ್ಲಿ ಇದ್ದನು, ನಾನು ನನ್ನ ಮಗನಿಗೆ ಸ್ನಾನ ಮಾಡಿಕೊ ಎಂದು ಹೇಳಿದೆ. ನನ್ನ ಮಗ ಅಂದು ಬೆಳಗ್ಗೆ 7:30 ಗಂಟೆಗೆ ಊರು ಒಳಗಡೆ ಹೋಗಿ ಬರುತ್ತೇನೆಂದು ಹೇಳಿ ಹೋದವನು ಸಂಜೆಯಾದರೂ ಮನೆಗೆ ಬಂದಿರುವುದಿಲ್ಲ, ನಂತರ ನಾನು ನನ್ನ ಮಗನ ಫೋನ್ ನಂಬರ್ 9108685205 ಗೆ ಪೋನ್ ಮಾಡದರೆ ಫೋನ್ ಸ್ಟ್ರೀಚ್ ಆಫ್ ಬಂದಿತು. ನಂತರ ನನ್ನ ಸ್ನೇಹಿತರನ್ನು ವಿಚಾರಣೆ ಮಾಡಿದೆವು ಹಾಗೂ ಸಂಬಂಧಿಕರ ಮನೆಯಲ್ಲಿ ಫೋನ್ ಮಾಡಿ ವಿಚಾರಿಸಲಾಗಿ ಅಲ್ಲಿಗೂ ಸಹ ಹೋಗಿರುವುದಿಲ್ಲ. ನಮಗೆ ನಮ್ಮ ಪಕ್ಕದ ಮನೆಯವರ ದ್ವಿಚಕ್ರ ವಾಹನ ತೆಗೆದುಕೊಂಡು ಹೋಗಿರಬಹುದೆಂಬ ಅನುಮಾನವಿರುತ್ತದೆ, ಆದ್ದರಿಂದ ಕಾಣೆಯಾಗಿರುವ ನನ್ನ ಮಗನನ್ನು ಪತ್ತೆ ಮಾಡಿಕೊಡಬೇಕೆಂದು ಡಿ.16ರಂದು ಮಹಿಳಾ ಠಾಣೆಯಲ್ಲಿ ಮೃತನ ತಂದೆ ನಾರಾಯಣಸ್ವಾಮಿ ದೂರು ನೀಡಿರುತ್ತಾರೆ..

12ದಿನಗಳ ನಂತರ ಇಂದು ಎನ್ ನಿಶಾಂಕ್ ಮೃತದೇಹ ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಹೋಬಳಿಯ ಚಿಕ್ಕರಾಯಪ್ಪನಹಳ್ಳಿ ಮಾರ್ಗದ ಸಾಧುಮಠ ರಸ್ತೆಯಲ್ಲಿ ಸಮೀಪ ಪತ್ತೆಯಾಗಿದೆ.
ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಸಲಾಗಿದೆ…..