
ಡಿ.13ರಂದು ರಾಷ್ಟ್ರೀಯ ಲೋಕ ಅದಾಲತ್ ನಡೆಯಲಿದ್ದು, ರಾಷ್ಟ್ರೀಯ ಲೋಕ ಅದಾಲತ್ ಮುಖೇನ ರಾಜೀಯಾಗುವ ಪ್ರಕರಣಗಳ ವಿಲೇವಾರಿಗೊಳಿಸುವಂತೆ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದಿಂದ ಆದೇಶ ಹೊರಡಿಸಲಾಗಿದ್ದು, ಆದ್ದರಿಂದ ಇಂದು (ನ.14) ದೊಡ್ಡಬಳ್ಳಾಪುರದ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಲಯದ ಆವರಣದಲ್ಲಿ ಹಿರಿಯ ಸಿವಿಲ್ ನ್ಯಾಯದೀಶರಾದ ಶಿಲ್ಪಾ ಅವರ ನೇತೃತ್ವದಲ್ಲಿ ರಾಜೀಯಾಗುವ ಪ್ರಕರಣಗಳ ವಿಲೇವಾರಿಗೊಳಿಸಲು ಸಭೆಯನ್ನು ನಡೆಸಲಾಯಿತು..

ರಾಷ್ಟ್ರೀಯ ಲೋಕದಲಾತ್ ನಲ್ಲಿ ಚಕ್ ಬೌನ್ಸ್ ಪ್ರಕರಣಗಳು, ಕೌಟುಂಬಿಕ ಕಲಹಗಳು, ವಿಚ್ಛೇಧನ ಪ್ರಕರಣಗಳು ಹಾಗೂ ಲೋಕದಲಾತ್ ನಲ್ಲಿ ಬಗೆಹರಿಸಬಹುದಾದ ಎಲ್ಲಾ ಪ್ರಕಾರಣಗಳ ವಿಚಾರಣೆ ನಡೆಸಲಾಗುತ್ತದೆ. ಕಾನೂನು ಸೇವೆ ಎಲ್ಲರು ಪಡೆದುಕೊಳ್ಳಬೇಕು. ಪ್ರಕರಣಗಳ ಇತ್ಯಾರ್ಥಗಳು ಆದಷ್ಟು ಬೇಗ ಮುಕ್ತಾಯವಾಗಲು ಎಲ್ಲರು ಸಹ ಈ ಕಾನೂನು ಸೇವೆಯ ಸದುಪಯೋಗ ಪಡೆದುಕೊಂಡು ಲೋಕದಲಾತ್ ಯಶಸ್ವಿಯಾಗಲು ಸಹಕರಿಸುವಂತೆ ತಿಳಿಸಲಾಯಿತು…

ಈ ವೇಳೆ ದೊಡ್ಡಬಳ್ಳಾಪುರ ಸಿವಿಲ್ ಪ್ರಧಾನ ಸಿವಿಲ್ ನ್ಯಾಯಾಧೀಶರಾದ ಪ್ರವೀಣ್, ನ್ಯಾಯಾಧೀಶರಾದ ದಾಸರಿ ಕ್ರಾಂತಿಕಿರಣ್, ಪ್ರೀತಿ ಹಾಗೂ ರವಿಬೇಟೆಗಾರ್, ವಕೀಲರು, ಸರ್ಕಾರಿ ಅಭಿಯೋಜಕರು, ಸಹಾಯಕ ಸರ್ಕಾರಿ ಅಭಿಯೋಜಕರು, ತಹಶೀಲ್ದಾರ್, ನಗರಸಭೆ ಆಯುಕ್ತ, ಗಣಿ, ಭೂ ವಿಜ್ಞಾನ ಇಲಾಖಾಧಿಕಾರಿ, ರಾಷ್ಟ್ರೀಯ, ಖಾಸಗಿ ಬ್ಯಾಂಕ್ ಗಳ ವ್ಯವಸ್ಥಾಪಕರು, ರಾಷ್ಟ್ರೀಯ ಹಾಗೂ ಖಾಸಗಿ ವಿಮಾ ಸಂಸ್ಥೆ ವ್ಯವಸ್ಥಾಪಕರು, ರಾಷ್ಟ್ರೀಯ ಹಾಗೂ ಖಾಸಗಿ ಕೋ ಆಪರೇಟಿವ್ ಸೊಸೈಟಿ ವ್ಯವಸ್ಥಾಪಕರು, ಮೇಲ್ವಿಚಾರಣಾ ಸಮಿತಿ ಸದಸ್ಯರು, ಪೊಲೀಸ್ ಇಲಾಖಾ ಅಧಿಕಾರಿಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.