ಡಿ.ಕ್ರಾಸ್ ರಸ್ತೆಯ ಅಯ್ಯಪ್ಪಸ್ವಾಮಿ ದೇವಾಲಯ ಬಳಿಯಿಂದ ಗಾಂಧಿನಗರದ ವೈಭವ್ ಚಿತ್ರಮಂದಿರದವರೆಗೆ ರಸ್ತೆ ಅಗಲೀಕಣಕ್ಕೆ ಸರ್ವೇ ಕಾರ್ಯಕ್ಕೆ ಚಾಲನೆ

ದೊಡ್ಡಬಳ್ಳಾಪುರದ ಡಿ.ಕ್ರಾಸ್ ರಸ್ತೆಯ ಅಯ್ಯಪ್ಪಸ್ವಾಮಿ ದೇವಾಲಯ ಬಳಿಯಿಂದ ರಸ್ತೆ ಸರ್ವೇ ಕೆಲಸಕ್ಕೆ ನಗರಸಭೆ ಅಧ್ಯಕ್ಷೆ ಸುಮಿತ್ರಾ ಸೋಮವಾರ ಚಾಲನೆ ನೀಡಿದರು.

ನಗರಸಭೆ ವ್ಯಾಪ್ತಿಯಲ್ಲಿ ಬಹುನಿರೀಕ್ಷಿತ ರಸ್ತೆ ಅಗಲೀಕರಣಕ್ಕೆ ಸೋಮವಾರ ಸರ್ವೇ ಕಾರ್ಯವನ್ನು ಪ್ರಾರಂಭಿಸಲಾಗಿದೆ.

2011ರಲ್ಲೂ ಒಮ್ಮೆ ರಸ್ತೆ ಅಗಲೀಕರಣಕ್ಕಾಗಿ ಸರ್ವೇ ಕೆಲಸ ನಡೆಸಲಾಗಿತ್ತು. ಆದರೆ ಆರ್ಥಿಕ, ರಾಜಕೀಯ ಕಾರಣಗಳಿಂದಾಗಿ ಅಗಲೀಕರಣ ನೆನೆಗುದಿಗೆ ಬಿದ್ದಿತ್ತು. ಆದರೆ ಈಗ ಮತ್ತೆ ರಸ್ತೆ ಅಗಲೀಕರಣಕ್ಕಾಗಿ ನಗರದ ಡಿ.ಕ್ರಾಸ್ ರಸ್ತೆಯ ಅಯ್ಯಪ್ಪಸ್ವಾಮಿ ದೇವಾಲಯ ಬಳಿಯಿಂದ ಗಾಂಧಿನಗರದ ವೈಭವ್ ಚಿತ್ರಮಂದಿರದವರೆಗೆ ಮೊದಲ ಹಂತದಲ್ಲಿ ರಸ್ತೆ ಅಗಲೀಕರಣ ನಡೆಯಲಿದ್ದು, ಇದಕ್ಕಾಗಿ ಪ್ರಥಮ ಹಂತದಲ್ಲಿ ಸರ್ವೇ ಕೆಲಸ ಪ್ರಾರಂಭಿಸಲಾಗಿದೆ.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ಆನಂದ್, ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಎಸ್.ರವಿಕುಮಾರ್, ಸದಸ್ಯ ಆನಂದ್, ಪೌರಾಯುಕ್ತ ಕಾರ್ತಿಕೇಶ್ವರ್, ಕಾರ್ಯನಿರ್ವಾಹಕ ಎಂಜಿನಿಯರ್ ರಾಮೇಗೌಡ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *