ಡಿಸಿಸಿ ಬ್ಯಾಂಕ್ ಚುನಾವಣೆಗೆ ರೈತ ಸಂಘ ಪಟ್ಟು

ಕೋಲಾರ : ಡಿಸಿಸಿ ಬ್ಯಾಂಕ್ ಗೆ ಚುನಾವಣೆ ದಿನಾಂಕ ನಿಗದಿ ಮಾಡಿ. ಸ್ಥಗಿತವಾಗಿರುವ ಸಾಲ ವಿತರಣೆ ಮಾಡಿ ಖಾಸಗಿ ಫೈನಾನ್ಸ್ ಹಾವಳಿಯಿಂದ ಗ್ರಾಮೀಣ ಪ್ರದೇಶದ ರೈತ ಕೂಲಿಕಾರ್ಮಿಕ ಹಾಗೂ ಮಹಿಳೆಯರನ್ನು ರಕ್ಷಣೆ ಮಾಡುವಂತೆ ರೈತ ಸಂಘದಿಂದ ಜಿಲ್ಲಾಧಿಕಾರಿಗಳ ಕಚೇರಿಯ ಮುಂದೆ ಕೋಳಿಗಳು ಹಾಗೂ ನಷ್ಟ ಬೆಳೆ ಸಮೇತ ಹೋರಾಟ ಮಾಡಿ ಜಿಲ್ಲಾಧಿಕಾರಿ ಅಕ್ರಂ ಪಾಷಗೆ ಮನವಿ ನೀಡಿ ಒತ್ತಾಯಿಸಿದರು

ಲಕ್ಷಾಂತರ ರೈತ ಕುಟುಂಬಗಳ ಜೀವನಾಡಿಯಾಗಿರುವ ಡಿ.ಸಿ.ಸಿ ಬ್ಯಾಂಕ್ ಚುನಾವಣೆ ನಡೆಸದೆ ಇರಲು ಕಾರಣವೇನು? ಯಾರು ಬ್ಯಾಂಕಿನ ಅಭಿವೃದ್ದಿಗೆ ಅಡ್ಡಗಾಲು ಹಾಕುತ್ತಿದ್ದಾರೆ ಹತ್ತು ವರ್ಷಗಳ ಹಿಂದಿನ ಪರಿಸ್ಥಿತಿಗೆ ಬ್ಯಾಂಕ್ ತಲುಪುತ್ತಿದೆಯೇ ಇಲ್ಲವೇ ಖಾಸಗಿ ಪೈನಾನ್ಸ್ ಮಾಫಿಯಾ ಜೊತೆ ಕಣ್ಣಿಗೆ ಕಾಣದ ಬ್ಯಾಂಕ್ ವಿರೋಧಿಗಳು ಕೈ ಜೋಡಿಸಿದ್ದಾರೆಯೇ ಎಂದು ರೈತ ಸಂಘದ ಮಹಿಳಾ ಜಿಲ್ಲಾದ್ಯಕ್ಷೆ.ಎನಳಿನಿಗೌಡ ಜನಪ್ರತಿನಿಧಿಗಳನ್ನು ಪ್ರಶ್ನೆ ಮಾಡಿದರು.

ಹೀನಾಯ ಸ್ಥಿತಿಯಲ್ಲಿದ್ದ ಬ್ಯಾಂಕ್‌ನ್ನು ಅಭಿವೃದ್ದಿಪಡಿಸಿ ಖಾಸಗಿ ಪೈನಾನ್ಸ್ ಹಾವಳಿಯಿಂದ ಗ್ರಾಮೀಣ ಪ್ರದೇಶದ ಮಹಿಳೆಯರನ್ನು ರೈತ ಕೂಲಿಕಾರ್ಮಿಕರನ್ನು ರಕ್ಷಣೆ ಮಾಡಿದ್ದ ಮಾಜಿ ಅಧ್ಯಕ್ಷ ಬ್ಯಾಲಹಳ್ಳಿ ಗೊವಿಂದೇಗೌಡರು ಚುನಾವಣೆ ನಡೆಸದ ಬ್ಯಾಂಕ್‌ನ ಬಗ್ಗೆ ದ್ವನಿ ಎತ್ತದೆ ಮೌನವಾಗಿರಲು ಕಾರಣ ಏನು ಎಂದು ಪ್ರಶ್ನೆ ಮಾಡಿದರು.

ರೈತರು, ಸ್ತ್ರೀ ಶಕ್ತಿ ಸಂಘಗಳ ಠೇವಣಿ ಹಣವನ್ನು ಸಾಲಕ್ಕೆ ಜಮಾ ಮಾಡಿಕೊಳ್ಳುವುದನ್ನು ಕೂಡಲೇ ನಿಲ್ಲಿಸಬೇಕು. ಒಂದು ಕಡೆ ಚುನಾವಣೆ ಇಲ್ಲದೆ ತಂದೆ ತಾಯಿ ಇಲ್ಲದ ಅನಾಥ ಮಕ್ಕಳಂತೆ ಆಗಿರುವ ಬ್ಯಾಂಕ್‌ನ ಅವ್ಯವಸ್ಥೆಯನ್ನೇ ಬಂಡವಾಳವಾಗಿಸಿಕೊಂಡು ಗ್ರಾಮೀಣ ಪ್ರದೇಶದ ರೈತ ಕೂಲಿಕಾರ್ಮಿಕರ ಮಹಿಳಯರ ಅಮಾಯಕತನವನ್ನು ಬಂಡವಾಳವಾಗಿಸಿಕೊಂಡು ಕಡಿಮೆ ಬಡ್ಡಿದರದಲ್ಲಿ ಶಿಕ್ಷಣ, ಕೃಷಿ, ವೈಯಕ್ತಿಕ ಸಾಲದ ಜೊತೆಗೆ ಮನೆ ಕಟ್ಟಲು ಗೃಹ ಸಾಲ ನೀಡುತ್ತೇನೆಂದು ವಂಚಿಸಿ ನಯ ಮಾತುಗಳನ್ನಾಡಿ ಒಂದು ಲಕ್ಷದಿಂದ ೧೦ ಲಕ್ಷದವರೆಗೆ ಸಾಲ ನೀಡಿ ಆ ನಂತರ ತಿಂಗಳು ಕಳೆಯುತ್ತದೆಯೋ ಇಲ್ಲವೋ ಎಂಬಂತೆ ಬಡವರನ್ನು ಸಾಲ ತೀರಿಸುವಂತೆ ಹಿಂಸೆ ನೀಡುತ್ತಿರುವ ಪ್ರಕರಣಗಳು ಕಣ್ಣಮುಂದೆ ನಡೆಯುತ್ತಿದ್ದರೂ ಸಹಕಾರ ಬ್ಯಾಂಕ್‌ನ್ನು ಉಳಿಸಲು ಮಾತ್ರ ಜನಪ್ರತಿನಿಧಿಗಳು ಮುಂದಾಗದೆ ಬಡವರ ಬ್ಯಾಂಕಿನ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದಾರೆಂದು ಕಿಡಿ ಕಾರಿದರು.

ಸಾಲ ವಂಚಿತ ನೊಂದ ರೈತ ಮಹಿಳೆ ಶೈಲಜ ಮಾತನಾಡಿ ಚುನಾವಣಾ ಸಮಯದಲ್ಲಿ ವೇಮಗಲ್‌ನಲ್ಲಿ ನಡೆದ ಮಹಿಳಾ ಸಮಾವೇಶದಲ್ಲಿ ಮಾತು ತಪ್ಪದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಸಹಕಾರ ಸಂಘಗಳಲ್ಲಿ ಮಹಿಳೆಯರ ಎಲ್ಲಾ ಸಾಲ ಮನ್ನಾ ಎಂದು ಮಾತು ಕೊಟ್ಟು ಮಹಿಳೆಯರ ಮತ ಪಡೆದು ಅಧಿಕಾರಕ್ಕೆ ಬಂದ ನಂತರ ಮಾತು ತಪ್ಪಿದರೆ ಸರ್ಕಾರಕ್ಕೆ ಮಹಿಳೆಯರ ಶಾಪ ತಟ್ಟುವುದಿಲ್ಲವೇ ಎಂದು ಪ್ರಶ್ನೆ ಮಾಡಿದರು.

ಒಂದು ವಾರದಲ್ಲಿ ಡಿ.ಸಿ.ಸಿ ಬ್ಯಾಂಕ್‌ಗೆ ಚುನಾವಣೆ ನಡೆಸಿ ಸ್ಥಗಿತವಾಗಿರುವ ಸಾಲ ವಿತರಣೆ ಮಾಡಿ ಖಾಸಗಿ ಪೈನಾನ್ಸ್ ಹಾವಳಿಯಿಂದ ಗ್ರಾಮೀಣ ಪ್ರದೇಶದ ಮಹಿಳೆಯರನ್ನು ರಕ್ಷಣೆ ಮಾಡಬೇಕು ಇಲ್ಲವಾದರೆ ಜಿಲ್ಲಾದ್ಯಂತ ಸಾಲ ವಂಚಿತ ಮಹಿಳೆಯರಿಂದ ಬ್ಯಾಂಕಿನ ಉಳಿವಿಗಾಗಿ ಮಾತು ತಪ್ಪಿದ ಮುಖ್ಯಮಂತ್ರಿಗಳ ಮನೆ ಮುಂದೆ ಕುಟುಂಬ ಸಮೇತ ಅಹೋರಾತ್ರಿ ದರಣಿ ಮಾಡುವ ಎಚ್ಚರಿಕೆಯೊಂದಿಗೆ ಜಿಲ್ಲಾಧಿಕಾರಿಗೆ ಮನವಿ ನೀಡಿ ಒತ್ತಾಯಿಸಲಾಯಿತು.

ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ಅಕ್ರಂ ಪಾಷ ಬ್ಯಾಂಕಿಗೆ ಸಂಬಂಧಪಟ್ಟ ಚುನಾವಣೆ ವಿಚಾರ ಸರ್ಕಾರದ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಆದೇಶ ಬಂದ ಕೂಡಲೇ ಚುನಾವಣೆ ನಡೆಸುವ ಭರವಸೆಯನ್ನು ನೀಡಿದರು.

ಪ್ರತಿಭಟನೆಯ ನೇತೃತ್ವವನ್ನು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ, ಜಿಲ್ಲಾದ್ಯಕ್ಷ ಈಕಂಬಳ್ಳಿ ಮಂಜುನಾಥ್, ಬಂಗವಾದಿ ನಾಗರಾಜಗೌಡ, ತಿಮ್ಮಣ್ಣ, ವೆಂಕಟೇಶಪ್ಪ, ಸುಪ್ರೀಂಚಲ, ಶಿವಾರೆಡ್ಡಿ, ಹೆಬ್ಬಣಿ ಆನಂದ್‌ರೆಡ್ಡಿ, ಯಲ್ಲಪ್ಪ, ಹರೀಶ್, ಚಂದ್ರಪ್ಪ,ತೆರ್ನಹಳ್ಳಿ ಆಂಜಿನಪ್ಪ ಪಾರುಕ್‌ಪಾಷ, ರಾಜೇಶ್, ರತ್ನಮ್ಮ, ವೆಂಕಟಮ್ಮ, ಭಾಗ್ಯಮ್ಮ, ಕಾಂತಮ್ಮ, ಚೌಡಮ್ಮ, ವೆಂಕಟರತ್ನ ಮುನಿಯಮ್ಮ ನೂರಾರು ನೊಂದ ರೈತ ಮಹಿಳೆಯರಿದ್ದರು.

Leave a Reply

Your email address will not be published. Required fields are marked *