ನಗರದ ಡಿಕ್ರಾಸ್ ಬಳಿ ಟ್ರಕ್ ಹಾಗೂ ಲಾರಿ ನಡುವೆ ಅಪಘಾತ ನಡೆದಿದೆ. ಟ್ರಕ್ ಗೆ ಗೂಡ್ಸ್ ಲಾರಿಯೊಂದು ಹಿಂಬದಿಯಿಂದ ಬಂದು ಡಿಕ್ಕಿ ಹೊಡೆದ ಪರಿಣಾಮ ಲಾರಿಯ ಮುಂಭಾಗ ಸಂಪೂರ್ಣ ಜಖಂಗೊಂಡಿದೆ.
ಘಟನೆ ಇಂದು ಬೆಳಗ್ಗೆ 3 ಗಂಟೆ ಸಮಯದಲ್ಲಿ ನಡೆದಿರಬಹುದು ಎಂದು ಸ್ಥಳೀಯರು ತಿಳಿಸಿದ್ದಾರೆ. ಘಟನೆಗೆ ಮೂಲ ಕಾರಣ ಹಂಪ್, ಹಂಪ್ ಬಳಿ ಟ್ರಕ್ ನಿಧಾನವಾಗಿ ಚಾಲನೆ ಮಾಡುವ ವೇಳೆ ಹಿಂಬದಿಯಿಂದ ಜೋರಾಗಿ ಬಂದ ಲಾರಿ ಡಿಕ್ಕಿ ಹೊಡದಿದೆ ಎನ್ನಲಾಗಿದೆ.
ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ಪ್ರಾಣಾಪಯ ಸಂಭವಿಸಿಲ್ಲ. ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.
ಘಟನೆ ಸಂಭವಿಸಿ ಹಲವು ಗಂಟೆಗಳಾದರೂ ಅಪಘಾತಕ್ಕೀಡಾದ ಲಾರಿಯನ್ನ ತೆರವುಗೊಳಿಸದ ಸಂಬಂಧಿಸಿದ ಇಲಾಖೆ, ಇದರಿಂದ ವಾಹನ ಸವಾರರಿಗೆ ಕಿರಿಕಿರಿ ಉಂಟಾಗಿದೆ ಎನ್ನಲಾಗಿದೆ.