ಅಸ್ಸಾಂನ ಗುವಾಹಟಿಯಲ್ಲಿ ನಡೆದ ರಾಜಸ್ಥಾನ ರಾಯಲ್ಸ್ ತಂಡದ ವಿರುದ್ಧ ಭರ್ಜರಿ ಅರ್ಧಶತಕ ಸಿಡಿಸುವ ಮೂಲಕ ಕ್ವಿಂಟಾನ್ ಡಿಕಾಕ್ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ಸುಲಭ ಜಯ ತಂದುಕೊಟ್ಟರು.
ಟಾಸ್ ಗೆದ್ದ ಕೊಲ್ಕತ್ತಾ ತಂಡದ ನಾಯಕ ಅಜಿಂಕ್ಯಾ ರಹಾನೆ ಬೌಲಿಂಗ್ ಆಯ್ದುಕೊಂಡರು, ರಾಜಸ್ಥಾನದ ಬ್ಯಾಟಿಂಗ್ ಗೆ ಇನ್ನಿಲ್ಲದಂತೆ ಕಾಡಿದ ಬೌಲರ್ ಗಳು ಕಡಿಮೆ ಮೊತ್ತಕ್ಕೆ (151) ಕಟ್ಟಿ ಹಾಕಿದರು.
ಆರಂಭಿಕ ಆಟಗಾರರಾದ ಯಶಸ್ವಿ ಜೈಸ್ವಾಲ್ (29) ಹಾಗೂ ಸಂಜು ಸ್ಯಾಮ್ಸನ್ (13) ದೊಡ್ಡ ಮೊತ್ತ ಕಲೆಹಾಕುವಲ್ಲಿ ವಿಫಲರಾದರು, ನಾಯಕ ರಿಯಾನ್ ಪರಾಗ್ (25) ಹಾಗೂ ಧ್ರುವ ಜುರೇಲ್ (33) ರನ್ ಪೇರಿಸಿ ತಂಡದ ಮೊತ್ತವನ್ನು 150 ರ ಗಡಿ ದಾಟಿಸಿದರು.
ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ್ದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಆರಂಭಿಕ ಆಟಗಾರ ಮೊಯಿನ್ ಅಲಿ(5) ಬೇಗನೇ ವಿಕೆಟ್ ಒಪ್ಪಿಸಿದರು ಆದರೆ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಕ್ವಿಂಟಾನ್ ಡಿಕಾಕ್ 8 ಬೌಂಡರಿ ಹಾಗೂ ಆರು ಸಿಕ್ಸರ್ ನೆರವಿನಿಂದ ಅಜೇಯ 97ರನ್ ಗಳಿಸಿ ತಂಡವನ್ನು ಗೆಲುವಿನತ್ತ ಕೊಂಡೊಯ್ದುರು.
ನಾಯಕ ಅಜಿಂಕ್ಯಾ ರಹಾನೆ (18) ಹಾಗೂ ರಘವಂಶಿ (22) ದನ್ ಪೇರಿಸಿ ಗೆಲುವಿಗೆ ಮುನ್ನುಡಿ ಬರೆದರು, ಅತ್ಯುತ್ತಮ ಪ್ರದರ್ಶನ ತೋರಿದ ಡಿಕಾಕ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು.