1927, ಡಿಸೆಂಬರ್ 25ರಂದು ಡಾ.ಬಿ.ಆರ್. ಅಂಬೇಡ್ಕರ್ ರವರು ಮನುಸ್ಮೃತಿ ಸುಡುವ ಮೂಲಕ ಶೋಷಿತರ ಪರವಾಗಿ ಧ್ವನಿ ಎತ್ತಿದರು, ಇದರ ನೆನಪಿಗಾಗಿ ನಗರದಲ್ಲಿ ದಲಿತ ಸಂಘಟನೆಗಳು ಮನುಸ್ಮೃತಿ ಸುಟ್ಟು ಸಂವಿಧಾನ ಓದಿದರು.
ನಗರದ ಹಳೆ ಬಸ್ ನಿಲ್ದಾಣದ ಸಿದ್ದಲಿಂಗಯ್ಯ ವೃತ್ತದ ಬಳಿ ಇರುವ ಡಾ. ಬಿ ಆರ್ ಅಂಬೇಡ್ಕರ್ ಅವರ ಪ್ರತಿಮೆ ಮುಂದೆ ಇಂದು ಸಂವಿಧಾನ ಓದು ಮತ್ತು ಪ್ರಮಾಣ ಕಾರ್ಯಕ್ರಮವನ್ನು ಪ್ರಗತಿಪರ ಮತ್ತು ದಲಿತಪರ ಸಂಘಟನೆಗಳ ವತಿಯಿಂದ ಹಮ್ಮಿಕೊಳ್ಳಲಾಗಿತ್ತು. ಡಿಸೆಂಬರ್ 25 ಡಾ.ಬಿ.ಆರ್.ಅಂಬೇಡ್ಕರ್ ಅವರು ಮನುಸ್ಮೃತಿ ಸುಟ್ಟ ದಿನದ ನೆನಪಿಸುವ ಸಲುವಾಗಿ ಬಾಬಾಸಾಹೇಬರ ಪ್ರತಿಮೆ ಮುಂದೆ ಮನುಸ್ಮೃತಿ ಸುಟ್ಟು ಸಂವಿಧಾನದ ಪೀಠಿಕೆ ಓದಿ ಪ್ರಮಾಣ ಮಾಡುವ ಕಾರ್ಯ ನಡೆಸಲಾಯಿತು.
ಈ ಕಾರ್ಯಕ್ರಮದಲ್ಲಿ ತಾಲ್ಲೂಕಿನ ದಲಿತ ಮುಖಂಡರು,ಪ್ರಗತಿಪರ ಚಿಂತಕರು ಸಾರ್ವಜನಿಕರು ಭಾಗವಹಿಸಿದ್ದರು.