ತಾಲ್ಲೂಕಿನ ಕುಂದಾಣ ಹೋಬಳಿಯ ರಾಮನಾಥಪುರ ಗ್ರಾಮದಲ್ಲಿ ಅಂಬೇಡ್ಕರ್ ಭಾವಚಿತ್ರವಿರುವ ನಾಮಫಲಕದ ಸ್ಟಿಕ್ಕರ್ ಹರಿದು ಸಗಣಿ ಎರಚಿ ವಿಕೃತಿ ಮೆರೆದಿದ್ದ ಅದೇ ಗ್ರಾಮದ ವೆಂಕಟೇಗೌಡ.
ಇದರಿಂದ ಕುಪಿತಗೊಂಡ ದಲಿತ ಸಂಘಟನೆಗಳು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಈ ಕುರಿತು ವಿಚಾರಣೆ ನಡೆಸಿದ ವಿಶ್ವನಾಥಪುರ ಪೊಲೀಸ್ ಠಾಣಾ ಇನ್ಸ್ ಪೆಕ್ಟರ್ ಮಂಜುನಾಥ್. ವಿಚಾರಣೆ ಬಳಿಕ ತಾನು ಮಾಡಿದ ತಪ್ಪನ್ನು ಒಪ್ಪಿಕೊಂಡು ಕ್ಷಮೆಯಾಚಿಸಿ ಅಂಬೇಡ್ಕರ್ ಭಾವಚಿತ್ರವಿರುವ ನಾಮಫಲಕವನ್ನು ಯತಾಸ್ಥಿತಿಗೆ ತರಲಾಗುವುದು ಎಂದು ಭರವಸೆ ನೀಡಿದ ಕೃತ್ಯ ಎಸಗಿದ್ದ ವೆಂಕಟೇಗೌಡ.
ಸೆಪ್ಟೆಂಬರ್ 14ರಂದು ರಾಮನಾಥಪುರ ಕಾಲೋನಿಯ ದಲಿತ ಸಂಘಟನೆಯ ನಾಮಫಲದಲ್ಲಿದ್ದ ಅಂಬೇಡ್ಕರ್ ಸ್ಟಿಕ್ಕರ್ ಹರಿದು ಸಗಣಿ ಎರಚಿದ್ದ. ಸಂವಿಧಾನ ಪೀಠಿಕೆ ಓದುವ ಕಾರ್ಯಕ್ರಮಕ್ಕೆ ಬೇಕಂತಲೇ ಅಡ್ಡಿಪಡಿಸಲು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರವನ್ನು ಹರಿಯಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದರು.
ಸಗಣಿ ಸುರಿದ ಘಟನೆಯನ್ನು ಕಾಲೋನಿಯ ಕೆಲವು ಗ್ರಾಮಸ್ಥರು ನೋಡಿ ಪ್ರಶ್ನೆ ಮಾಡಿ ಕೂಗಿಕೊಂಡಿದ್ದಾರೆ ಕಾಲೋನಿಯ ಜನರು ಇತರೆ ಯುವಕರು ಎಲ್ಲರೂ ಅಲ್ಲಿಗೆ ಬರುವಷ್ಟರಲ್ಲಿ ಓಡಿ ಹೋಗಿದ್ದಾರೆ ಎನ್ನಲಾಗಿದೆ.
ವಿಷಯ ತಿಳಿದ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಕಾಲೋನಿಯ ಗ್ರಾಮಸ್ಥರೊಂದಿಗೆ ವಿಚಾರಿಸಿ ಫೋಟೋ ಮತ್ತು ಮಾಹಿತಿ ಪಡೆದು ಹತ್ತಿರದಲ್ಲಿರುವ ಸಿಸಿಟಿವಿಗಳ ಕ್ಯಾಮೆರಾವನ್ನು ಪರಿಶೀಲಿಸಿದ್ದಾರೆ.
ಸೂಕ್ತ ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಂಡು, ಅಂಬೇಡ್ಕರ್ ಫಲಕಕ್ಕೆ ರಕ್ಷಣೆ ಮತ್ತು ಭದ್ರತೆಯೊಂದಿಗೆ ಮರುಸ್ಥಾಪನೆ ಮಾಡಿಕೊಡಬೇಕು ಎಂದು ಗ್ರಾಮಸ್ಥರು ಹಾಗೂ ಪ್ರಜಾ ವಿಮೋಚನಾ ಚಳವಳಿ ಮುಖಂಎರು ಒತ್ತಾಯಿಸಿದ್ದರು.
ಈ ಹಿನ್ನೆಲೆ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿ ವಿಚಾರಣೆ ನಡೆಸಿ, ಕೃತ್ಯ ಎಸಗಿದವನಿಗೆ ಕಾನೂನು ಪಾಠ ಕಲಿಸಿ ಇನ್ನು ಮುಂದೆ ಈ ರೀತಿ ಮಾಡದಂತೆ ಎಚ್ಚರಿಕೆ ನೀಡಿದ ಪೊಲೀಸ್ ಇಲಾಖೆ