
ತಾಲೂಕಿನ ಸಾಸಲು ಹೋಬಳಿಯ ಡಾ.ಬಿ.ಆರ್.ಅಂಬೇಡ್ಕರ್ ಪ್ರೌಢಶಾಲೆಯ 2006-07ನೇ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಂದ ಗುರುವಂದನಾ ಮತ್ತು ಸ್ನೇಹಕೂಟ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.
ಇದು ಐತಿಹಾಸಿಕ ಕ್ಷಣ. ಶಾಲೆ ಸ್ಥಾಪನೆ ಆಗಿ 45 ವರ್ಷಗಳೇ ಕಳೆದಿವೆ. ಆದರೆ, ಇಂತಹ ಒಂದು ಉತ್ತಮ ಕಾರ್ಯಕ್ರಮ ಯಾವ ವರ್ಷದ ವಿದ್ಯಾರ್ಥಿಗಳು ಮಾಡಿಲ್ಲ.
ನಮಗೆಲ್ಲ 18 ವರ್ಷದ ನಂತರ ನಿಮ್ಮನ್ನು ನೋಡಿ ಮಾತನಾಡಿದ್ದು ಹೇಳಲಾಗದಷ್ಟು ಸಂತೋಷವಾಯಿತು….ನಿಮಗೆಲ್ಲಾ ತುಂಬಾ ಧನ್ಯವಾದಗಳು ಎಂದು ಶಿಕ್ಷಕ ವೃಂದದವರು ತಿಳಿಸಿದರು.
ಕಳೆದ ವರ್ಷ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ 3 ವಿದ್ಯಾರ್ಥಿಗಳಿಗೆ ಸನ್ಮಾನ ಮತ್ತು ಕೊಡುಗೆ ನೀಡಲಾಯಿತು.
ಈ ವೇಳೆ ಮಂಜುನಾಥ್, ಬಸವರಾಜ್, ಲಕ್ಷ್ಮಣ್, ಶಿವಣ್ಣ, ನರಸಿಂಹಮೂರ್ತಿ, ದಕ್ಷಿಣ ಮೂರ್ತಿ, ವೀರಪ್ಪ, ರಂಗಶ್ಯಾಮಯ್ಯ, ರಂಗೇಗೌಡ, ಹನುಮಂತರಾಯಪ್ಪ, ಗಂಗಣ್ಣ, ಚಂದ್ರಪ್ಪ, ಮಧುಸೂಧನ್, ದೇವರಾಜಯ್ಯ ಸೇರಿದಂತೆ ಶಾಲೆಯ ಹಾಲಿ ಶಿಕ್ಷಕ ವೃಂದದವರು, ವಿದ್ಯಾರ್ಥಿಗಳು ಇದ್ದರು.