ಡಾಬಾ ಬಳಿ ಯುವಕ ಕೊಲೆ ಪ್ರಕರಣ: ಯುವಕನ ಹೃದಯದೊಳಗೆ‌ ಒಂದೂವರೆ ಇಂಚು ಒಳಹೊಕ್ಕ ಮೊನಚಾದ ವಸ್ತು: ಆರೋಪಿಗಳ ಪತ್ತೆಗೆ ಬಲೆ ಬೀಸಿರುವ ಪೊಲೀಸರು

ನ.12ರ ಭಾನುವಾರ ಸಂಜೆ ತಾಲೂಕಿನ ರಾಮೇಶ್ವರ ಗೇಟ್ ಸಮೀಪವಿರುವ ಖಾಸಗಿ ಡಾಬಾವೊಂದರಲ್ಲಿ ಯುವಕರು ಫೋಟೋ‌ ಶೂಟ್ ಮಾಡಿಕೊಳ್ಳುತ್ತಿರವಾಗ ಕಿಡಿಗೇಡಿಗಳ ಗುಂಪೊಂದು ಸ್ಥಳಕ್ಕೆ ಬಂದು ಬೇಕಂತಲೇ ಕಿರಿಕ್ ಮಾಡಿ ಸೂರ್ಯ(ಸೂರಿ) ಎಂಬ ಯುವಕನಿಗೆ ಥಳಿಸಿ, ಕೈಯಲ್ಲಿದ್ದ ಮೊನಚಾದ ವಸ್ತುವಿನಿಂದ ಹೃದಯ ಭಾಗಕ್ಕೆ ಇರಿದು ಕೊಲೆ ಮಾಡಲಾಗಿತ್ತು. ಇರಿತದ ರಭಸಕ್ಕೆ ಸುಮಾರು ಒಂದೂವರೆ ಇಂಚು ಯುವಕ‌ನ ಹೃದಯದೊಳಗೆ ಹೊಕ್ಕಿದೆ ಎನ್ನಲಾಗಿದೆ.

ಮೃತ ಯುವಕ ಸೂರ್ಯ ಜಾಲಪ್ಪ ಕಾಲೇಜ್ ನಲ್ಲಿ ದ್ವಿತೀಯಾ ವರ್ಷದ ಐಟಿಐ ವ್ಯಾಸಂಗ ಮಾಡುತ್ತಿದ್ದು, ಹೆತ್ತವರಿಗೆ ಒಬ್ಬನೇ ಮಗನಾಗಿದ್ದನು. ಕುಟುಂಬಕ್ಕೆ ಆಸರೆಯಾಗ್ತೆನೆಂದು ನಂಬಿದ ಕುಟುಂಬದವರಿಗೆ ಆತನ ಸಾವು ಬರ ಸಿಡಿಲಿನಂತೆ ಬಡಿದಿದೆ, ‘ನಿನ್ನ ಸ್ನೇಹಿತರೇಲ್ಲಾ ಬಂದಿದ್ದಾರೆ, ಎದ್ದು ಬಂದ್ದು ಫೋಟೋ ತೆಗಿ ಬಾರೋ ಮಗನೇ ಎಂದು ಮಗನ ಮೃತದೇಹದ ಮುಂದೆ ಕಣ್ಣೀರಿಟ್ಟ ಆತನ ಹೆತ್ತಮ್ಮ. ಮೃತ ಯುವಕನ ತಾಯಿ ಅಳುತ್ತಿರುವ ದೃಶ್ಯ ಅಲ್ಲಿದ್ದವರ ಹೃದಯ ಕಲುಕುವಂತಿತ್ತು.

ಘಟನೆ ವಿವರ

ಕೊಲೆಗೀಡಾದ ಯುವಕ ಸೂರ್ಯನಿಗೆ ಫೋಟೋಗ್ರಾಫಿಯ ಹವ್ಯಾಸ ಇತ್ತು, ನಿನ್ನೆ ಪ್ರಿವೆಡ್ಡಿಂಗ್ ಶೂಟ್ ಮಾಡಲು ಸ್ನೇಹಿತರಿಂದ ಕ್ಯಾಮೆರಾ ತೆಗೆದುಕೊಂಡು ಬಂದಿದ್ದ, ಪ್ರಿವೆಂಡ್ಡಿಂಗ್ ಶೂಟ್ ಮುಗಿದ ನಂತರ ತನ್ನ ಸ್ನೇಹಿತರ ಜೊತೆ ಫೋಟೋ ಶೂಟ್ ಮಾಡಲು ಎ ಡಾರ್ಕ್ ಫ್ಯಾಮಿಲಿ ರೆಸ್ಟೋರೆಂಟ್ ಗೆ ಬಂದಿದ್ದ, ರೆಸ್ಟೋರೆಂಟ್ ಮುಂಭಾಗದಲ್ಲಿನ ಸೀನರಿಯ ಮುಂದೆ ಫೋಟೋ ಶೂಟ್ ಮಾಡುವಾಗ, ಮದ್ಯ ಸೇವನೆಗೆಂದು ಬಂದಿದ್ದ ದಿಲೀಪ್ ಮತ್ತು ಆತನ ಸ್ನೇಹಿತರು ಡಾಬಾದಿಂದ ಹೊರಗೆ ಬಂದಿದ್ದಾರೆ, ದಿಲೀಪ್ ಮತ್ತು ಆತನ ಗ್ಯಾಂಗ್ ತಮ್ಮ  ಫೋಟೋ ಹಿಡಿಯುವಂತೆ ಸೂರ್ಯನಿಗೆ ಹೇಳಿದ್ದಾರೆ, ಸೂರ್ಯ ಅವರ ಫೋಟೋಗಳನ್ನ ಸೆರೆ ಹಿಡಿದಿದ್ದಾನೆ,  ತೆಗೆದ ಫೋಟೋಗಳನ್ನ ಮೊಬೈಲ್ ಗೆ ಕಳಿಸೆಂದು ದಿಲೀಪ್ ಗ್ಯಾಂಗ್ ನಲ್ಲಿದ್ದ ಒಬ್ಬ ಹೇಳಿದ್ದಾನೆ. ಕ್ಯಾಮೆರಾದಿಂದ ಮೊಬೈಲ್ ಗೆ ಫೋಟೋ ಕಳಿಸಲು ಆಗೋದಿಲ್ಲ ಎಂದೇಳಿದ್ದಾನೆ , ಇಷ್ಟಕ್ಕೆ ಕೋಪಗೊಂಡ ದಿಲೀಪ ಸೂರ್ಯನ ಕೈಯಿಂದ ಕ್ಯಾಮೆರಾ ಕಿತ್ತುಕೊಂಡಿದ್ದಾನೆ. ಇದರಿಂದ ಕೆರಳಿದ ಸೂರ್ಯ ದಿಲೀಪನ ಕುತ್ತಿಗೆ ಪಟ್ಟಿಯನ್ನ ಹಿಡಿದುಕೊಂಡಿದ್ದಾನೆ, ಈ ವೇಳೆ ದಿಲೀಪ ತನ್ನ ಕೈಯಲ್ಲಿದ್ದ ಚುಪಾದ ವಸ್ತುವಿನಿಂದ ಎದೆಗೆ ಚುಚ್ಚಿದ್ದಾನೆ, ಎದೆಯನ್ನ ಹಿಡಿದುಕೊಂಡ ಸೂರ್ಯ ಅಲ್ಲಿಯೇ ಕುಸಿದು ಬಿದ್ದಿದ್ದಾನೆ, ತಕ್ಷಣವೇ ಆಸ್ಪತ್ರೆಗೆ ಸೂರ್ಯನನ್ನ ಸಾಗಿಸಲಾಯಿತು, ಆದರೆ ತೀರ್ವ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾನೆ.

ಪ್ರಕರಣಕ್ಕೆ ಕುಂಟನಹಳ್ಳಿಯ ದೀಲಿಪ್ ವಿರುದ್ಧ ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಅಟ್ರಾಸಿಟಿ ಕೇಸ್ ದಾಖಲಾಗಿದ್ದು, ಆರೋಪಿ ತಲೆಮರೆಸಿಕೊಂಡಿದ್ದಾನೆ, ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಭೇಟಿ ಪರಿಶೀಲನೆ ನಡೆಸಿದ್ದಾರೆ.

ಸದ್ಯ ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಇಂದು ಮರಣೋತ್ತರ ಪರೀಕ್ಷೆ ನಡೆದ‌ ನಂತರ ಕಛೇರಿಪಾಳ್ಯದಲ್ಲಿರುವ ಮನೆ ಬಳಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು.  ಸ್ನೇಹಿತರು, ಸಂಬಂಧಿಕರು‌ ಸೇರಿದಂತೆ ಸಾರ್ವಕಜನಿಕರು ಮೃತ ಸೂರ್ಯನ ಅಂತಿಮ‌ ದರ್ಶನ ಪಡೆದು‌ ಕಣ್ಣೀರಿಟ್ಟರು.

Leave a Reply

Your email address will not be published. Required fields are marked *