ಕಟ್ಟಡ ಕಾಮಗಾರಿಗೆ ಮಣ್ಣು ತೆಗೆದು ಸಾಗಿಸುವ ವೇಳೆ ಟ್ರ್ಯಾಕ್ಟರ್ ಇಂಜಿನ್ ಪಲ್ಟಿಯಾದ ಹಿನ್ನೆಲೆ ಟ್ರ್ಯಾಕ್ಟರ್ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರು ನಗರ ಜಿಲ್ಲೆ ಯಲಹಂಕ ತಾಲೂಕಿನ ಆವಲಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗುಲ್ಬರ್ಗ ಮೂಲದ ಚಾಲಕ ಬಸವರಾಜ್ (30) ಮೃತ ದುರ್ದೈವಿ ಎನ್ನಲಾಗಿದೆ.
ಕಟ್ಟಡ ಕಾಮಗಾರಿಗಾಗಿ ಜೆಸಿಬಿ ಮೂಲಕ ಮಣ್ಣು ತೆಗೆದು ಟ್ರ್ಯಾಕ್ಟರ್ ನಲ್ಲಿ ಮಣ್ಣನ್ನ ಹೊರಗಡೆ ಸಾಗಿಸಲಾಗುತ್ತಿತ್ತು. ಈ ವೇಳೆ ಲೋಡ್ ಹೆಚ್ಚಾಗಿ ಹಿಂದಕ್ಕೆ ಮುಗಿಚಿಬಿದ್ದಿದೆ ಎನ್ನಲಾಗಿದೆ.
ಟ್ರ್ಯಾಕ್ಟರ್ ಇಂಜಿನ್ ಮತ್ತು ಟ್ರ್ಯಾಲಿ ನಡುವೆ ದೇಹ ಸಿಲುಕಿ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ರಾಜಾನುಕುಂಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ರಾಜಾನುಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.