ತೆಲಂಗಾಣದ ಚಿಲ್ಕೂರು ಪ್ರದೇಶದ ರಾಜ್ ಬಹದ್ದೂರ್ ವೆಂಕಟರಂಗಾರೆಡ್ಡಿ ತೆಲಂಗಾಣ ಪೊಲೀಸ್ ಅಕಾಡೆಮಿಗೆ ಟ್ರೈನಿ ಐಎಎಸ್ ಅಧಿಕಾರಿಯಾಗಿ ಬಂದ ಮಗಳಿಗೆ ಅದೇ ಅಕಾಡೆಮಿಯಲ್ಲಿ IPS ಆಗಿ ಕರ್ತವ್ಯದಲ್ಲಿದ್ದ ತಂದೆ ಗೌರವದಿಂದ ಸೆಲ್ಯೂಟ್ ಮಾಡಿ, ಹೂಗುಚ್ಛ ನೀಡಿ ಶುಭ ಹಾರೈಸಿದ್ದಾರೆ.
ತೆಲಂಗಾಣದ ಉಮಾಹರತಿ ಅವರು ಯುಪಿಎಸ್ಸಿ ಸಿವಿಲ್ಸ್-2022ರ ಪರೀಕ್ಷೆಯಲ್ಲಿ 3ನೇ ರ್ಯಾಂಕ್ ಪಡೆದುಕೊಂಡಿದ್ದರು. ಈ ಹಿಂದೆ ನಾರಾಯಣಪೇಟ್ ಜಿಲ್ಲೆಯ ಎಸ್ಪಿಯಾಗಿ ಕೆಲಸ ಮಾಡಿದ್ದ ಆಕೆಯ ತಂದೆ ವೆಂಕಟೇಶ್ವರಲು ಪ್ರಸ್ತುತ ತೆಲಂಗಾಣದ ಪೊಲೀಸ್ ಅಕಾಡೆಮಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಈಗ ಇದೇ ಅಕಾಡೆಗೆ ಉಮಾಹರತಿ ಅವರು ಟ್ರೈನಿ ಐಎಎಸ್ ಅಧಿಕಾರಿಯಾಗಿ ಬರುತ್ತಿದ್ದಂತೆ ಕರ್ತವ್ಯದಲ್ಲಿದ್ದ ತಂದೆ ಮಗಳನ್ನು ಕಂಡು ಎದೆಗುಂದದೇ ಬಿಗ್ ಸೆಲ್ಯೂಟ್ ಮಾಡಿದ್ದಾರೆ.
ಮಗಳನ್ನು ಉನ್ನತ ಸ್ಥಾನದಲ್ಲಿ ತಂದೆ ಸಂತಸ ಪಟ್ಟುಕೊಂಡಿದ್ದಾರೆ. ಸದ್ಯ ಈ ಸಂಬಂಧದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿವೆ.
ಉಮಾಹರತಿ ಅವರು ಐಐಟಿ ಹೈದರಾಬಾದ್‌ನಿಂದ ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಪದವಿ ಪಡೆದಿದ್ದಾರೆ. ಅವರ ಆರಂಭಿಕ ಶಿಕ್ಷಣ 10ನೇ ತರಗತಿಯವರೆಗೆ ಹೈದರಾಬಾದ್‌ನ ಭಾರತೀಯ ವಿದ್ಯಾಭವನದಲ್ಲಿ ನಡೆದಿದೆ. ಪದವಿ ನಂತರ ಉಮಾ ಅವರು ತಮ್ಮ ಐಚ್ಛಿಕ ವಿಷಯವಾಗಿ ಮಾನವಶಾಸ್ತ್ರವನ್ನು ಆಯ್ಕೆ ಮಾಡಿಕೊಂಡು UPSC ತಯಾರಿಯ ಪ್ರಯಾಣವನ್ನು ಆರಂಭಿಸಿದರು. ಉಮಾ ತನ್ನ ಯಶಸ್ಸಿಗೆ ಪೋಷಕರ ಅವಿರತ ಬೆಂಬಲ ಕಾರಣ ಎಂದು ಹೇಳುತ್ತಾರೆ.
ದೇವನಹಳ್ಳಿ ಹೊರ ವಲಯದಲ್ಲಿ ಮಾಸ್ಕ್ ರಾಬರಿ ಗ್ಯಾಂಗ್ ಫುಲ್ ಆ್ಯಕ್ಟೀವ್ ಆಗಿದೆ.. ಆವತಿ ಗ್ರಾಮದಲ್ಲಿ ಒಂದೇ ದಿನ ಮೂರು ಮನೆಗಳಲ್ಲಿ…
ಯುಗಾದಿ ಹಬ್ಬದ ಸಂದರ್ಭದಲ್ಲಿ ನಶೆಯಲ್ಲಿ ವೀಲಿಂಗ್ ಮಾಡುತ್ತಿರುವಾಗ ಗ್ರಾಮದವರು ಪ್ನಶ್ನೆ ಮಾಡಿದ್ದಕ್ಕೆ ಯುವಕರು ದೊಣ್ಣೆ ಹಿಡಿದು ಹಲ್ಲೆ ಮಾಡಿರುವ ಘಟನೆ…
ಹಾಲಿ ಶಾಸಕರ ನಿಧನದಿಂದಾಗಿ ಬಾಗಲಕೋಟೆ ಮತ್ತು ದಾವಣಗೆರೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಘೋಷಣೆಯಾಗಿದೆ. ಈಗ ನಾವು ಅವರ ಕುಟುಂಬಗಳ ನಿರ್ವಹಣೆಗಾಗಿ,…
ಪ್ರವಾಸೋದ್ಯಮ ಇಲಾಖೆ ವತಿಯಿಂದ ಎಸ್.ಸಿ.ಎಸ್.ಪಿ/ ಟಿ.ಎಸ್.ಪಿ ಯೋಜನೆ ಅಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಣ್ಣ ಉದ್ಯಮಿದಾರರನ್ನು ಉತ್ತೇಜಿಸಲು…
ಮಾ.21, 22ರಂದು ದೊಡ್ಡಬಳ್ಳಾಪುರದ ಹಾದ್ರೀಪುರ ಗ್ರಾಮದಲ್ಲಿ ಎರಡನೇ ವರ್ಷದ ಹಾದ್ರೀಪುರ ಕ್ರಿಕೆಟ್ ಟೂರ್ನಮೆಂಟ್ ಆಯೋಜನೆ ಮಾಡಲಾಗಿದೆ... ಜೈ ಆಂಜನೇಯ, ರಾಕ್…
ಕೊಲ್ಲಿ ರಾಷ್ಟ್ರಗಳ ಯುದ್ಧದ ಬಿಕ್ಕಟ್ಟು ಭಾರತಕ್ಕೂ ತಟ್ಟಿರುವ ಹಿನ್ನೆಲೆ ದೇಶಾದ್ಯಂತ ಅಡುಗೆ ಅನಿಲ ಪೂರೈಕೆಯಲ್ಲಿ ಭಾರೀ ವ್ಯತ್ಯಯ ಉಂಟಾಗಿದೆ. ಪ್ರಸ್ತುತ…