ವಿಶ್ವಕಪ್ ಫೈನಲ್ ಪಂದ್ಯವನ್ನು ಗೆದ್ದು ಐಸಿಸಿ ಟ್ರೋಫಿ ಭರ ನೀಗಿಸುವ ಉತ್ಸಾಹದಲ್ಲಿದ್ದ ನಾಯಕ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ಆಸ್ಟ್ರೇಲಿಯಾದ ಆಲ್ ರೌಂಡರ್ ಆಟದ ಮುಂದೆ ಮಂಕಾದ ಟೀಮ್ ಇಂಡಿಯಾದ ವಿರುದ್ಧ ಗೆದ್ದು 6ನೇ ವಿಶ್ವ ಕಪ್ ಮುಡಿಗೇರಿಸಿಕೊಂಡಿತು.
ಭಾರತ ನೀಡಿದ ಸಾಧಾರಣ ಗುರಿ ಬೆನ್ನತ್ತಿದ್ದ ಆಸ್ಟ್ರೇಲಿಯಾ ತಂಡ 47ರನ್ ಗಳಿಸಿ ಪ್ರಮುಖವಾದ ಡೇವಿಡ್ ವಾರ್ನರ್, ಮಿಚೆಲ್ ಮಾಷ್೯ ಹಾಗೂ ಅನುಭವಿ ಆಟಗಾರ ಸ್ಟೀವನ್ ಸ್ಮಿತ್ ಅವರ ವಿಕೆಟ್ ಕಳೆದುಕೊಂಡ ಸಂಕಷ್ಟಕ್ಕೆ ಸಿಲುಕಿತ್ತು.
ಆದರೆ ಆರಂಭಿಕ ಆಟಗಾರ ಟ್ರಾವಿಸ್ ಹೆಡ್ 15 ಬೌಂಡರಿ ಹಾಗೂ 4 ಸಿಕ್ಸರ್ ನೆರವಿನಿಂದ (137) ಹಾಗೂ ಮಧ್ಯಮ ಕ್ರಮಾಂಕದ ಆಟಗಾರ ಲಬುಶನಗೆ ನಾಲ್ಕು ಬೌಂಡರಿ ನೆರವಿನಿಂದ (58*)ಅವರ ಅತ್ಯುತ್ತಮ ಬ್ಯಾಟಿಂಗ್ ಬಲದಿಂದ ರನ್ ಗಳಿಸಿ ಭಾರತೀಯ ಬೌಲಿಂಗ್ ಪಡೆಯನ್ನು ಕಾಡತೊಡಗಿದರು.
ಆರಂಭಿಕ ಆಟಗಾರರನ್ನು ಬೇಗನೇ ಪೆವಿಲಿಯನ್ ಗೆ ಕಳಿಸಿದರೂ ಸಹ ಟ್ರಾವಿಸ್ ಹೆಡ್ ಹಾಗೂ ಲಬುಶನಗೆ ವಿರುದ್ಧ ಭಾರತೀಯ ಬೌಲಿಂಗ್ ಪಡೆ ಮಂಡಿಯೂರಿತು, ಲೀಲಾಜಾಲವಾಗಿ ಬ್ಯಾಟ್ ಬೀಸಿದ ಟ್ರಾವಿಸ್ ಹೆಡ್ ವಿಶ್ವಕಪ್ ನ ಹೀರೋ ಎನಿಸಿಕೊಂಡರು ಜೊತೆಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು
ಮೊದಲು ಬ್ಯಾಟ್ ಮಾಡಿದ ಭಾರತ ತಂಡದ ಆರಂಭಿಕ ಆಟಗಾರರಾದ ನಾಯಕ ರೋಹಿತ್ ಶರ್ಮಾ ನಾಲ್ಕು ಬೌಂಡರಿ ಹಾಗೂ ಮೂರು ಸಿಕ್ಸರ್ ಸಹಿತ (47) ರನ್ ಗಳಿಸಿದರೆ ಯುವ ಆಟಗಾರ ಶುಭ್ಮನ್ ಗಿಲ್ (4) ನಿರಾಸೆ ಮೂಡಿಸಿದರು.
ನಂತರ ಬಂದ ಅನುಭವಿ ಆಟಗಾರ ವಿರಾಟ್ ಕೋಹ್ಲಿ ನಾಲ್ಕು ಬೌಂಡರಿ ನೆರವಿನಿಂದ (54) ರನ್ ಗಳಿಸಿ ತಂಡದ ಮೊತ್ತವನ್ನು ಹೆಚ್ಚಿಸಲು ಮುಂದಾದರು, ಆದರೆ ಟೂರ್ನಿಯಲ್ಲಿ ಮಿಂಚಿದ್ದ ಶ್ರೇಯಸ್ ಅಯ್ಯರ್ (4) ಫೈನಲ್ ಪಂದ್ಯದಲ್ಲಿ ರನ್ ಗಳಿಸದೆ ಪೆವಿಲಿಯನ್ ಗೆ ತೆರಳಿದರು.
ಒಂದೆಡೆ ವಿಕೆಟ್ ಉರುಳುತ್ತಿದ್ದರೂ ಸಹ ವಿರಾಟ್ ಕೊಹ್ಲಿ ಹಾಗೂ ಕನ್ನಡಿಗ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಕೆ.ಎಲ್. ರಾಹುಲ್ ರನ್ ಕಲೆಹಾಕತೊಡಗಿದರು, 107 ಬಾಲ್ ಗೆ (66) ರನ್ ಗಳಿಸಿ 200ರ ಗಡಿ ದಾಟಿಸಿದರು.
ಸೂರ್ಯ ಕುಮಾರ್ ಯಾದವ್ (18) ಕೊನೆಯಲ್ಲಿ ಬಂದ ಕುಲದೀಪ್ ಯಾದವ್ (10), ಮೊಹಮ್ಮದ್ ಸಿರಾಜ್ (9) ರನ್ ಭಾರತ ತಂಡಕ್ಕೆ ಕೊನೆಯ ಗಳಿಗೆಯಲ್ಲಿ ಉಪಯುಕ್ತ ರನ್ ಕೊಡುಗೆ ನೀಡಿದರು.
ಆಸ್ಟ್ರೇಲಿಯಾದ ಪರವಾಗಿ ವೇಗದ ಬೌಲರ್ ಮಿಚೆಲ್ ಸ್ಟ್ರಾಕ್ 3 , ಜೋಶ್ ಹೆಜಲ್ವುಡ್ ಹಾಗೂ ನಾಯಕ ಪ್ಯಾಟ್ ಕಮ್ಮಿನ್ಸ್ ತಲಾ ಎರಡು ವಿಕೆಟ್ , ಮ್ಯಾಕ್ಸ್ ವೆಲ್ ಹಾಗೂ ಜಂಪಾ ತಲಾ ಒಂದು ವಿಕೆಟ್ ಪಡೆದು ಭಾರತ ತಂಡವನ್ನು ಕಡಿಮೆ ಮೊತ್ತಕ್ಕೆ ಆಲೌಟ್ ಮಾಡಿದರು.
ವಿರಾಟ್ ಕೊಹ್ಲಿ ಟೂರ್ನಿಯಲ್ಲಿ ಅತ್ಯಧಿಕ ರನ್ (765) ಗಳಿಸಿರುವ ಬ್ಯಾಟ್ಸ್ಮನ್ ಎನಿಸಿಕೊಂಡರೆ, ವೇಗದ ಬೌಲರ್ ಮೊಹಮ್ಮದ್ ಶಮಿ(24) ಅತ್ಯಧಿಕ ವಿಕೆಟ್ ಪಡೆದ ಕೀರ್ತಿಗೆ ಭಾಜನರಾದರು.
ಫೈನಲ್ ಪಂದ್ಯ ವೀಕ್ಷಿಸಲು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಷಾ, ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ, ಕಾಯ೯ದಶಿ೯ ಜಯ್ ಷಾ ಸೇರಿದಂತೆ ಹಲವಾರು ಗಣ್ಯರು ಹಾಗೂ ಬಾಲಿವುಡ್ ನಟ ನಟಿಯರು ಪಾಲ್ಗೊಂಡಿದ್ದರು.