ಟ್ರಾಫಿಕ್ ಸಿಗ್ನಲ್ ಗಳಲ್ಲಿ ವಾಹನ ಸವಾರರು ಹಾಗೂ ಸಾರ್ವಜನಿಕರಿಗೆ ಹಣ ನೀಡುವಂತೆ ಬಲವಂತ ಮಾಡುವುದು, ಹಣ ಕೊಡದಿದ್ದರೆ ಅನುಚಿತವಾಗಿ ವರ್ತನೆ ಮಾಡುತ್ತಿದ್ದ ತೃತೀಯ ಲಿಂಗಿಗಳಿಗೆ ದೊಡ್ಡಬಳ್ಳಾಪುರ ನಗರ ಠಾಣಾ ಪೊಲೀಸ್ ಇನ್ಸ್ ಪೆಕ್ಟರ್ ಅಮರೇಶ್ ಗೌಡ ಸೂಚನೆ ಮೇರೆಗೆ ಸಬ್ ಇನ್ಸ್ ಪೆಕ್ಟರ್ ಕೃಷ್ಣಪ್ಪ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.
ದೊಡ್ಡಬಳ್ಳಾಪುರ ನಗರದ ಟಿಬಿ ವೃತ್ತ(ಡಾ.ಬಿ.ಆರ್ ಅಂಬೇಡ್ಕರ್ ವೃತ್ತ)ದ ಟ್ರಾಫಿಕ್ ಸಿಗ್ನಲ್ ಗಳಲ್ಲಿ ತೃತೀಯ ಲಿಂಗಿಗಳ ಹಾವಳಿ ಹೆಚ್ಚಾಗಿದ್ದು, ಸಿಗ್ನಲ್ ಗಳಲ್ಲಿ ವಾಹನಗಳು ನಿಂತ ಕೂಡಲೇ ಅಲ್ಲಿಗೆ ಹೋಗಿ ಹಣ ನೀಡುವಂತೆ ಬಲವಂತ ಮಾಡುವುದು, ಒಂದು ವೇಳೆ ಹಣ ನೀಡದಿದ್ದರೆ ವಾಹನ ಸವಾರರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುವುದು, ಶಾಪ ಹಾಕುವುದು, ದುರುಗುಟ್ಟಿ ನೋಡುವುದು, ಅಶ್ಲೀಲವಾಗಿ ನಡೆದುಕೊಳ್ಳವುದು ಹೀಗೆ ಅನುಚಿತವಾಗಿ ವರ್ತನೆ ಮಾಡುತ್ತಿರುವ ಆರೋಪ ಹಾಗೂ ದೂರುಗಳು ಬಂದ ಹಿನ್ನೆಲೆ ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಅಮರೇಶ್ ಗೌಡ ಸೂಚನೆ ಮೇರೆಗೆ ಸಬ್ ಇನ್ಸ್ಪೆಕ್ಟರ್ ಕೃಷ್ಣಪ್ಪ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು.
ಅನುಚಿತವಾಗಿ ವರ್ತನೆ ಮಾಡುತ್ತಿದ್ದ ಮುಂಗಳಮುಖಿಯರನ್ನು ಕರೆಸಿ, ಸಾರ್ವಜನಿಕರಿಗೆ ಕಿರಿಕಿರಿ, ತೊಂದರೆ ಕೊಡಬಾರದು, ಹಣ ನೀಡುವಂತೆ ಬಲವಂತ ಮಾಡಬಾರದು ಒಂದು ವೇಳೆ ಇದೇ ಚಾಳಿ ಮುಂದುವರಿದರೆ ಕಾನೂನಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ಕೊಟ್ಟರು.
ಮುಂದಿನ ದಿನಗಳಲ್ಲಿ ಸಭೆ ಕರೆಯಲಾಗುವುದು ಅಂದು ಎಲ್ಲರೂ ಸಭೆಗೆ ಹಾಜರಾಗಬೇಕು. ಪೊಲೀಸ್ ಅಧಿಕಾರಿಗಳ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸೂಚಿಸಿದರು….