ಕರ್ನಾಟಕ ಭೋವಿ ಅಭಿವೃದ್ಧಿ ನಿಗಮ ಜಾಗೃತದಳದ ವಿಜಿಲೆನ್ಸ್ ಅಧಿಕಾರಿಗೆ 2023ನೇ ಸಾಲಿಗೆ ರಾಜ್ಯಮಟ್ಟದ ಟ್ರಾಪ್ ಶೂಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಲಭಿಸಿದೆ.
ಎಂ. ರಾಜೇಶ್ ಜಯಸಿಂಹ ರವರು ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದಲ್ಲಿ ಜಾಗೃತದಳ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಸ್ತುತ ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ವತಿಯಿಂದ 2022-23ನೇ ಸಾಲಿನಲ್ಲಿ ರಾಜ್ಯಮಟ್ಟದ ಟ್ರಾಪ್ ಶೂಟಿಂಗ್‌ನ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಪಡೆದಿರುವುದು ಕರ್ನಾಟಕ ಭೋವಿ ಅಭಿವೃದ್ಧಿ ನಿಗಮಕ್ಕೆ ಹೆಮ್ಮೆಯ ವಿಷಯವಾಗಿರುತ್ತದೆ.
ಅಧಿಕಾರಿಯ ಕರ್ತವ್ಯಕ್ಕೆ ಮೆಚ್ಚಿ ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಅಧಿಕಾರಿ ವೃಂದದವರು ಇವರಿಗೆ ಇನ್ನು ಹೆಚ್ಚಿನ ಸಾಧನೆ ಮಾಡಲು ಶುಭ ಹಾರೈಸಿ ಅಭಿನಂದಿಸಿರುತ್ತಾರೆ.
ಎಂ.ರಾಜೇಶ್ ಜಯಸಿಂಹ ಇವರು ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದಲ್ಲಿ ಜಾಗೃತದಳ ಅಧಿಕಾರಿಯಾಗಿ ಅಧಿಕಾರವಹಿಸಿಕೊಂಡಾಗಿನಿಂದ ಕರ್ನಾಟಕ ರಾಜ್ಯದ್ಯಂತ ಪ್ರವಾಸ ಮಾಡಿ ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಜಿಲ್ಲಾ ಕಚೇರಿಗಳಿಗೆ ಭೇಟಿ ನೀಡಿ, ಕಚೇರಿಯ ತಪಾಸಣೆ ನಡೆಸಿ, ಫಲಾನುಭವಿಗಳನ್ನು ಭೇಟಿ ಮಾಡಿ, ಘಟಕಗಳ ಪರಿವೀಕ್ಷಣೆ ನಡೆಸಿ ನಿಗಮದ ಯೋಜನೆಗಳನ್ನು ಪರಿಣಾಮಕಾರಿಯಾಗಿ ಸಮಾಜದ ಕಟ್ಟಕಡೆಯ ಭೋವಿ ಜನಾಂಗದವರಿಗೆ ತಲುಪಿಸಿ ಅವರುಗಳನ್ನು ಆರ್ಥಿಕವಾಗಿ ಸಬಲರನ್ನಾಗಿ ಮಾಡಲು ಯಶಸ್ವಿಯಾಗಿರುತ್ತಾರೆ.
ಇವರ ದೇಶ ಸೇವೆಗೆ ಮೆಚ್ಚಿ ಅನೇಕ ಪದವಿಗಳು, ಅವಾರ್ಡ್ ಗಳಿಗೆ ಭಾಜನರಾಗಿರುತ್ತಾರೆ.