ಟೌನ್ ಆಯ್ತು ಈಗ ಗ್ರಾಮೀಣ ಭಾಗಕ್ಕೆ ಲಗ್ಗೆ ಇಟ್ಟ ಅಂಗಡಿ ಕಳ್ಳರು: ಎರಡು ದಿನಸಿ ಅಂಗಡಿಗಳಲ್ಲಿ ಕಳ್ಳರ ಕೈಚಳಕ 

ಇತ್ತೀಚೆಗೆ ದೊಡ್ಡಬಳ್ಳಾಪುರ ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಅಂಗಡಿ ಕಳ್ಳರ ಕಾಟ ಹೆಚ್ಚಾಗಿದೆ. ಕಳೆದ ಶುಕ್ರವಾರ ರಾತ್ರಯಷ್ಟೇ ನಗರದ ಡಿ.ಕ್ರಾಸ್ ಹಾಗೂ ಅಯ್ಯಪ್ಪ ಸ್ವಾಮಿ ದೇವಸ್ಥಾನದ ರಸ್ತೆಯಲ್ಲಿನ ಫರ್ನೀಚರ್ಸ್ ಹಾಗೂ ಟೈಲ್ಸ್ ಅಂಗಡಿಗಳಲ್ಲಿ ಕಳ್ಳತನ ಯತ್ನ ನಡೆದಿತ್ತು. ಇದೀಗ ತೂಬಗೆರೆ ಗ್ರಾಮದ ಎರಡು ದಿನಸಿ ಅಂಗಡಿಗಳಲ್ಲಿ ಕಳ್ಳರ ಕೈಚಳಕ ಕಂಡುಬಂದಿದೆ.

ಅಕ್ಕಪಕ್ಕದಲ್ಲೇ ಇದ್ದ ಎರಡು ದಿನಸಿ ಅಂಗಡಿಗಳಲ್ಲಿ ಒಂದು ಅಂಗಡಿಯ ಶಟರ್ ಮುರಿದು ಒಳ ಹೋಗಿ ನಗದು, ಇತರೆ ವಸ್ತುಗಳನ್ನು ದೋಚಿದ್ದಾರೆ. ನಂತರ ಮತ್ತೊಂದು ಅಂಗಡಿಯ ಶಟರ್ ಲಾಕ್ ಮುರಿದು ಒಳ ಹೋಗಲು ಯತ್ನಿಸಿದ್ದಾರೆ ಎಂಬ ಮಾಹಿತಿ ಒದಗಿಬಂದಿದೆ.

ಅದೇರೀತಿ ತೂಬಗೆರೆ ಕೂಗಳತೆ ದೂರದ ಹಾಡೋನಹಳ್ಳಿಯಲ್ಲಿ ರೈತರ ಎರಡು ಮೇಕೆಗಳು ಸಹ ಕಳ್ಳತನವಾಗಿದೆ.

ಈ ಎರಡು ಘಟನೆಗಳು ಕಳೆದ ರಾತ್ರಿ ನಡೆದಿದ್ದು, ಇಂದು ಬೆಳಗ್ಗೆ ಬೆಳಕಿಗೆ ಬಂದಿವೆ….

ರಾತ್ರಿ ವೇಳೆ ಪೊಲೀಸ್ ಗಸ್ತು ಹೆಚ್ಚಿಸಬೇಕು. ಕೂಡಲೇ ಕಳ್ಳರ ಜಾಡು ಹಿಡಿದು ಬಂಧಿಸಿ, ಇನ್ನುಮುಂದೆ ಯಾವುದೇ ಕಳ್ಳತನದ ಕೃತ್ಯಗಳು ಮರುಕಳಿಸದಂತೆ ಎಚ್ವರವಹಿಸಬೇಕು ಎಂದು ಅಂಗಡಿ ಮಾಲೀಕರು, ವ್ಯಾಪಾರಿಗಳು ಪೊಲೀಸ್ ಇಲಾಖೆಯಲ್ಲಿ ಮನವಿ ಮಾಡಿದ್ದಾರೆ.

ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ….

ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ….

Leave a Reply

Your email address will not be published. Required fields are marked *

error: Content is protected !!