ಟೈಟಲ್ ಲಾಂಚ್ ನಲ್ಲೆ ಕುತೂಹಲ ಮೂಡಿಸಿದ “ದೇವರ ಆಟ ಬಲ್ಲವರಾರು” ಸಿನಿಮಾ

 

ಕನ್ನಡ ಚಿತ್ರ ರಂಗಕ್ಕೀಗ ವಸಂತಕಾಲ. ಬ್ಯಾಕ್ ಟು ಬ್ಯಾಕ್ ಹಿಟ್ ಮೇಲೆ ಹಿಟ್ ಕೊಡ್ತಾ ಬಂದಿರೋ ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಹೊಸ ದಾಖಲೆಗೆ “ದೇವರ ಆಟ ಬಲ್ಲವರಾರು” ಸಿನಿಮಾ ಸಜ್ಜಾಗಿದೆ.

‘ಫಿರಂಗಿಪುರ’ ಸಿನಿಮಾ ಖ್ಯಾತಿಯ ಜನಾರ್ಧನ್.ಪಿ ಜಾನಿ ನಿರ್ದೇಶನದ, ಪ್ರಿಸ್ವಸ್ ಸ್ಟುಡಿಯೋಸ್ ಬ್ಯಾನರ್ ಅಡಿ ಮೂಡಿ ಬರ್ತಾ ಇರೋ ಸಿನಿಮಾ ಇದಾಗಿದೆ. ಜೂನ್ 15ಕ್ಕೆ ಭರ್ಜರಿಯಾಗಿ ಟೈಟಲ್ ಲಾಂಚ್ ಮಾಡಿದೆ. ಕುತೂಹಲಕಾರಿ ಸಂಗತಿ ಎಂದರೆ 30 ದಿನಗಳಲ್ಲಿ ಸಿನಿಮಾ ಚಿತ್ರೀಕರಣ ಮುಗಿಸಿ ತೆರೆ ಮೇಲೆ ತಂದು ಗಿನ್ನಿಸ್ ದಾಖಲೆ ಬರೆಯಲು ಸಕಲ ಸಿದ್ಧತೆಗೆ ಸಜ್ಜಾಗಿದೆ ಈ ಚಿತ್ರ ತಂಡ.

ದೇವರಿಗೆ ವಿಶೇಷವಾಗಿ ಪೂಜೆಸಲ್ಲಿಸಿ ಗಣ ಹೋಮವನ್ನು ಮಾಡಿ ಭರ್ಜರಿಯಾಗಿ ಟೈಟಲ್ ಲಾಂಚ್ ಮಾಡಲಾಗಿದೆ. ಈ ವೇಳೆ ಮಾತನಾಡಿದ ನಿರ್ದೇಶಕ ಜನಾರ್ದನ್.ಪಿ ಜಾನಿ, ನಾನು ಈ ಹಿಂದೆ “ಫಿರಂಗಿಪುರ” ಚಿತ್ರ ಮಾಡಿ. ಈಗ “ದೇವರ ಆಟ ಬಲ್ಲವರಾರು” ಸಿನಿಮಾ ನಿರ್ದೇಶಿಸುತ್ತಿದ್ದೇನೆ. 1975 ಕಾಲಘಟ್ಟದ ಆ್ಯಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಸಿನಿಮಾ ರೆಕಾರ್ಡ್ ಮಾಡಲೇಬೇಕು ಅನ್ನೋದು ನನ್ನ ಆಸೆ. ಈ ಸಿನಿಮಾವನ್ನು ಇತಿಹಾಸ ದಾಖಲ ಪುಟಕ್ಕೆ ಸೇರಿಸಲು ನಾನು ಮತ್ತು ನನ್ನ ತಂಡ ಕಳೆದ ಒಂದು ವರ್ಷದಿಂದ ಹಗಲು -ರಾತ್ರಿಯನ್ನದೆ ಶ್ರಮಿಸುತ್ತಿದ್ದೇವೆ ಎಂದರು.

ಇಡೀ ಸಿನಿಮಾದ ಚಿತ್ರೀಕರಣ ಮಡಿಕೇರಿಯಲ್ಲಿ ನಡೆಯಲಿದ್ದು, ಅಲ್ಲಿಯೇ ವಿಶಾಲ ಜಾಗದಲ್ಲಿ ಸೆಟ್ ಹಾಕಿ ಚಿತ್ರೀಕರಣ ಮಾಡುತ್ತೇವೆ. ಪ್ರತಿದಿನ ಸುಮಾರು 160ಕ್ಕೆ ಹೆಚ್ಚು ಕಲಾವಿದರು ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ. ಜೂನ್ 16 ರಿಂದ 5 ದಿನಗಳ ಕಾಲ ಚಿತ್ರೀಕರಣ ನಡೆಯುವ ಸ್ಥಳದಲ್ಲಿ ತಾಲಿಮು ನಡೆಸಿ ಆನಂತರ ಚಿತ್ರೀಕರಣ ಆರಂಭಿಸುತ್ತೇವೆ.

ಗಿನ್ನಿಸ್ ರೆಕಾರ್ಡ್ ಗಾಗಿ 30 ದಿನಗಳಲ್ಲಿ ಚಿತ್ರೀಕರಣ ಮಾಡಿ ತೆರೆ ಮೇಲೆ ತರುವ ಈ ಪ್ರಕ್ರಿಯೆಯನ್ನು ವೀಕ್ಷಿಸಲು ಆರು ಜನ ತೀರ್ಪುಗಾರರು ಸ್ಥಳದಲ್ಲಿ ಇರುತ್ತಾರೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮೆಲ್ಲ ಪ್ರೋತ್ಸಾಹವಿರಲಿ.

ಅರ್ಜುನ್ ರಮೇಶ್(ಶನಿ ಧಾರವಾಹಿ ಖ್ಯಾತಿಯ), ಸಿಂಧು ಲೋಕನಾಥ್, ವರ್ಷ ವಿಶ್ವನಾಥ್, ಸಂಪತ್ ರಾಮ್ ಅರ್ಜುನ್, ಮೇದಿನಿ ಕೆಳಮನೆ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ ಎಂದು ನಿರ್ದೇಶಿಕ ಜನಾರ್ಧನ್ ತಿಳಿಸಿದರು.

ಇದೇ ವೇಳೆ ಮಾತನಾಡಿದ ನಾಯಕನಟ ಅರ್ಜುನ್ ರಮೇಶ್ ಈ ಸಿನಿಮಾದಲ್ಲಿ ಸೂರಿ ಅನ್ನೋ ಪಾತ್ರ ಅಭಿನಯಿಸುತ್ತಿದ್ದೇನೆ. ನಿರ್ದೇಶಕರ ಕಾರ್ಯವೈಕರಿ ಕಂಡು ಆಶ್ಚರ್ಯವಾಯಿತು. ಈ ಸಿನಿಮಾಕ್ಕಾಗಿ ಎರಡು ತಿಂಗಳಲ್ಲಿ 14 ಕೆಜಿ ತೂಕ ಇಳಿಸಿದ್ದೇನೆ. ನೋಡಿದರೆ ಕಂಡು ಹಿಡಿಯಲಾಗದಷ್ಟು, ಸಣ್ಣದಾಗಿದ್ದೇನೆ ಎಂದರು.

ಕಾರ್ಯಕ್ರಮ ಉದ್ದೇಶಿ ಮಾತನಾಡಿದ ಸಿಂಧು ಲೋಕನಾಥ್, ಮೂರು ವರ್ಷಗಳ ಬಳಿಕ ನಟಿಸುತ್ತಿರುವ ಚಿತ್ರವಿದು, ರಚನಾ ಅನ್ನೋ ಪಾತ್ರವನ್ನು ಅಭಿನಯಿಸುತ್ತಿದ್ದೇನೆ. ಇಷ್ಟು ದಿನ ಅಭಿನಯಿಸಿದ ಪಾತ್ರಕ್ಕಿಂತ ತುಂಬಾ ಭಿನ್ನವಾಗಿದೆ ಎಂದು, ಅಭಿಪ್ರಾಯ ಹಂಚಿಕೊಂಡರು.

ಮುಖ್ಯವಾಗಿ ಈ ಸಿನಿಮಾದ ನಿರ್ಮಾಪಕರಾದ ಹನುಮಂತರಾಜು, ಲತಾ ರಾಗ ಹಾಗೂ ಸಹ ನಿರ್ಮಾಪಕ ಅನಿಲ್ ಜೈನ್ ಉಪಸ್ಥಿತರಿದ್ದರು.

ಪ್ರತಿಯೊಬ್ಬ ಮನುಷ್ಯನ ಒಳಗೆ ಒಂದು ಕ್ರೂರ ಮೃಗ ಇದ್ದೇ ಇರುತ್ತದೆ, ಎಂಬ ಅಡಿವಹದೊಂದಿಗೆ ಶುರುವಾಗು ಈ ಚಿತ್ರ ಪ್ರೇಕ್ಷಕರ ಎದುರು ಎಂತಹ ಮ್ಯಾಜಿಕ್ ಮಾಡಬಹುದು ಕಾದು ನೋಡಬೇಕಿದೆ.

ಈಗಾಗಲೇ ಚಿತ್ರತಂಡ ಮಡಿಕೇರಿಯಲ್ಲಿ ಬೀಡುಬಿಟ್ಟಿದ್ದು, ಸೆಟ್ವರ್ಕ್, ಕಲಾವಿದರ ತಾಲೀಮು ಬರದಿಂದ ಸಾಗುತ್ತಿದೆ. ಎಲ್ಲವೂ ಅಂದುಕೊಂಡಂತೆ ಆದರೆ “ದೇವರ ಆಟ ಬಲ್ಲವರ” ಕನ್ನಡ ಸಿನಿಮಾ ಒಂದು, ವಿಶ್ವಮಟ್ಟದಲ್ಲಿ ರಾರಾಜಿಸಲಿದೆ.

Leave a Reply

Your email address will not be published. Required fields are marked *