ಟಿಎಪಿಸಿಎಂಎಸ್ ಸೊಸೈಟಿಗೆ 16.53 ಲಕ್ಷ ನಿವ್ವಳ ಲಾಭ

ಕೋಲಾರ: ಸಹಕಾರ ಸಂಘದ ಶ್ರೇಯೋಭಿವೃದ್ಧಿಗೆ ಸರ್ವ ಸದಸ್ಯರ ಸಹಕಾರ ಮುಖ್ಯವಾಗಿದ್ದು ಎರಡು ವಾರದಲ್ಲಿ ಸೊಸೈಟಿಯ ವತಿಯಿಂದ ಔಷಧೀ ಕೇಂದ್ರವನ್ನು ಪ್ರಾರಂಭಿಸಿ ರೈತರಿಗೆ ಹಾಗೂ ಷೇರುದಾರರಿಗೆ ಅನುಕೂಲ ಕಲ್ಪಿಸಲು ಆಡಳಿತ ಮಂಡಳಿ ಮುಂದಾಗಿರುವುದಾಗಿ ಟಿಎಪಿಸಿಎಂಎಸ್ ಅಧ್ಯಕ್ಷ ವಡಗೂರು ವಿ.ರಾಮು ತಿಳಿಸಿದರು.

ನಗರದ ಟಿಎಪಿಸಿಎಂಎಸ್ ಕಚೇರಿ ಆವರಣದಲ್ಲಿ ಬುಧವಾರ ತಾಲೂಕು ವ್ಯವಸಾಯೋತ್ಪನ್ನಗಳ ಮಾರಾಟ ಸಹಕಾರ ಸಂಘ ಮತ್ತು ಜನತಾ ಬಜಾರ್ ನಿಯಮಿತದ 2023-24ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸಹಕಾರಿ ಸಂಘದಲ್ಲಿ ರಾಜಕಾರಣ ಮಾಡದೇ ಪಕ್ಷಾತೀತವಾಗಿ ರೈತರಿಗೆ ರಸಗೊಬ್ಬರಗಳ ವಿತರಣೆಯ ಜೊತೆಗೆ ಸಾರ್ವಜನಿಕರಿಗೆ ಅಕ್ಕಿ ವಿತರಣೆಯ ಮೂಲಕ ಅವಿಭಜಿತ ಕೋಲಾರ ಜಿಲ್ಲೆಗೆ ಮಾದರಿ ಸೊಸೈಟಿಯಾಗಿ ಮಾಡಿದ್ದೇವೆ ಮುಂದೆ ಔಷಧೀ ಕೇಂದ್ರ ಪ್ರಾರಂಭಿಸಿ ಕಡಿಮೆ ಬೆಲೆಗೆ ಔಷಧೀ ದೊರೆಯುವಂತೆ ಮಾಡಲಾಗುತ್ತದೆ ಈ ವರ್ಷವು ಸೊಸೈಟಿ 16.53 ಲಕ್ಷದಷ್ಟು ನಿವ್ವಳ ಲಾಭ ಗಳಿಸಿದೆ ಎಂದು ತಿಳಿಸಿದರು.

ಸೊಸೈಟಿಯ ಕಟ್ಟಡವು ಹಳೆಯದಾಗಿದ್ದು ನೂತನ ಕಟ್ಟಡವನ್ನು ಸುಸಜ್ಜಿತವಾದ ನಿರ್ಮಿಸಿ ರೈತರಿಗೆ ಮತ್ತು ಷೇರುದಾರರಿಗೆ ಅನುಕೂಲ ಕಲ್ಪಿಸುವ ಜತೆಗೆ ಮತ್ತಷ್ಟು ಆಧುನಿಕ ಸ್ಪರ್ಶ ನೀಡಲು ಸಂಘವು ಮುಂದಾಗಿದ್ದು ಇದಕ್ಕೆ ಮೂರು ಎಕರೆ ಜಾಗವನ್ನು ಮಂಜೂರು ಮಾಡುವಂತೆ ಈಗಾಗಲೇ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದು ಆದಷ್ಟು ಬೇಗ ಜಾಗವನ್ನು ಪಡೆದು ಹೊಸ ಕಟ್ಟಡ ನಿರ್ಮಾಣ ಮಾಡಲಾಗುತ್ತದೆ ಸಭೆಯಲ್ಲಿ ತಿಳಿಸಿದರು.

ಈ ಸಂದರ್ಭದಲ್ಲಿ ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ನಾಗನಾಳ ಸೋಮಣ್ಣ ಮಾತನಾಡಿ ರೈತರಿಗೆ ರಸಗೊಬ್ಬರ ವಿತರಣೆ ಮಾಡುವಲ್ಲಿ ಎರಡು ಜಿಲ್ಲೆಯಲ್ಲಿಯೇ ಮೊದಲ ಸ್ಥಾನದಲ್ಲಿದ್ದು ಮಾದರಿ ಸಂಘವಾಗಿದೆ ಹೋಬಳಿ ಸೊಸೈಟಿಗಳಲ್ಲಿ 500 ರೂ ಇದ್ದ ಷೇರು ಹಣ 1000 ರೂ ಮಾಡಲಾಗಿದೆ ಅದೇ ರೀತಿ ತಾಲೂಕು ಸೊಸೈಟಿಯಲ್ಲಿ 2000 ರೂ ಷೇರು ಕಟ್ಟುವ ಮೂಲಕ ಸಂಘಕ್ಕೆ ಬರುವ ಲಾಭವನ್ನು ರೈತರ ಅಭಿವೃದ್ಧಿಗೆ ಕೊಡಲಾಗುತ್ತದೆ ಎಂದು
ಹೇಳಿದರು.

ಈ ಸಂದರ್ಭದಲ್ಲಿ ಸೊಸೈಟಿ ಉಪಾಧ್ಯಕ್ಷ ಎಲ್.ಆರ್ ರಾಜಣ್ಣ, ಎ.ಸಿ ಭಾಸ್ಕರ್, ಶ್ರೀನಿವಾಸ್, ವಿ.ಎಸ್ ರಘುನಾಥ್, ಟಿ.ವಿ ಮುನಿಯಪ್ಪ, ಎನ್.ಮುನಿರಾಜು, ಶಿಲ್ಪ ಮಂಜುನಾಥ್, ಸುನಂದಾ ನಾಗರಾಜ್, ಕೆ.ವಿ ಸುರೇಶ್, ಸೇರಿದಂತೆ ಸೊಸೈಟಿ ಷೇರುದಾರರು, ರೈತರು, ಸಿಬ್ಬಂದಿ ಇದ್ದರು,

Leave a Reply

Your email address will not be published. Required fields are marked *

error: Content is protected !!