ಟಿಎಪಿಎಂಸಿಎಸ್ ಫಲಿತಾಂಶ: ಶೇ93.98ರಷ್ಟು ಮತದಾನ : ಅಭ್ಯರ್ಥಿಗಳು ಪಡೆದ ಮತ ಎಷ್ಟು…? ಗೆದ್ದಿದ್ದು ಯಾರು….? ಇಲ್ಲಿದೆ ಮಾಹಿತಿ ಓದಿ….

ದೊಡ್ಡಬಳ್ಳಾಪುರ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಕ್ಕೆ(ಟಿಎಪಿಎಂಸಿಎಸ್) ಭಾನುವಾರ ನಡೆದ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಸ್ಪಷ್ಟ ಬಹುಮತ ಪಡೆದಿದ್ದಾರೆ. ಬಿಜೆಪಿ–ಜೆಡಿಎಸ್ ಮೈತ್ರಿಗೆ ತೀವ್ರ ಮುಖಂಭಂಗವಾಗಿದೆ.

ಚುನಾವಣೆಯಲ್ಲಿ ಶೇ93.98ರಷ್ಟು ಮತದಾನ ನಡೆದಿದೆ. ‘ಬಿ’ ತರಗತಿಯಿಂದ ಜೆಡಿಎಸ್‌, ಬಿಜೆಪಿ ಮೈತ್ರಿ ಬೆಂಬಲಿತ ಐವರು ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಕಾಂಗ್ರೆಸ್‌ ಬೆಂಬಲಿತ ಮೂವರು ಅಭ್ಯರ್ಥಿಗಳು ಮಾತ್ರ ಆಯ್ಕೆಯಾಗಿದ್ದಾರೆ. ‘ಎ’ ತರಗತಿಯ ಫಲಿತಾಂಶ ನ್ಯಾಯಾಲಯ ಆದೇಶದ ನಂತರ ಪ್ರಕಟಿಸುವುದಾಗಿ ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಅಭ್ಯರ್ಥಿಗಳು ಪಡೆದಿರುವ ಮತಗಳ ಆಧಾರದಲ್ಲಿ ಕಾಂಗ್ರೆಸ್‌ ಬೆಂಬಲಿತ ನಾಲ್ಕು ಅಭ್ಯರ್ಥಿಗಳು ಹಾಗೂ ಒಬ್ಬರು ಮೈತ್ರಿ ಅಭ್ಯರ್ಥಿ ಆಯ್ಕೆಯಾಗಿದ್ದಾರೆ.

ಬೆಳಿಗ್ಗೆ 9 ಗಂಟೆಗೆ ಪ್ರಾರಂಭವಾದ ಮತದಾನ ಸಂಜೆ 4 ಗಂಟೆಗೆ ಮುಕ್ತಾಯವಾಗುವವರೆಗೂ ರೈತರು ಉತ್ಸಾಹದಿಂದಲೇ ಮತಚಲಾವಣೆ ಮಾಡಿದರು.

ಸಂಜೆ 4 ಗಂಟೆಯ ನಂತರ ಮತಗಳ ಎಣಿಕೆ ಪ್ರಾರಂಭಿಸಲಾಯಿತು. ಮತದಾರರ ಪಟ್ಟಿಯಲ್ಲಿ ಯಾವುದೇ ಗೊಂದಲ ಉಂಟಾಗದಂತೆ ನಿರ್ವಹಣೆ ಮಾಡುವ ಸಲುವಾಗಿಯೇ 20 ಜನ ಸಿಬ್ಬಂದಿ ಕಾರ್ಯನಿರ್ವಹಿಸಿದ್ದರಿಂದ ಯಾವುದೇ ಗೊಂದಲುಗಳು ಉಂಟಾಗಿಲ್ಲ.

ಮತ ಚಲಾವಣೆಗೆ ಕಾದು ನಿಲ್ಲುವುದನ್ನು ತಪ್ಪಿಸಲು 12 ಕೊಠಡಿಗಳ ಮತಚಾವಣೆಗೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಪ್ರತಿ ಕೊಠಡಿಯಲ್ಲೂ ಏಕ ಕಾಲಕ್ಕೆ 8 ಜನರು ಪ್ರತ್ಯೇಕವಾಗಿ ಮತಪತ್ರಗಳ ಮೂಲಕ ಗುಪ್ತ ಮತದಾನ ಮಾಡುವ ಸೌಲಭ್ಯ ಕಲ್ಪಿಸಲಾಗಿತ್ತು.

ಮತದಾನ ನಡೆದ ಸರ್ಕಾರಿ ಕಾಲೇಜಿನ ಸುತ್ತ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಪೆಂಡಾಲ್ಗಳನ್ನು ಹಾಕಿಕೊಂಡು ಮತಯಾಚನೆ ಮಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಟಿಎಪಿಎಂಸಿಎಸ್ ಇತಿಹಾಸದಲ್ಲೇ ಇದೇ ಪ್ರಥಮ ಬಾರಿಗೆ ವಿಧಾನ ಸಭಾ ಚುನಾವಣ ಮಾದರಿಯಲ್ಲಿ ಚುನಾಯಿತ ಜನಪ್ರತಿನಿಧಿಗಳು ಸೇರಿದಂತೆ ಎಲ್ಲಾ ಪಕ್ಷಗಳ ಮುಖಂಡರು ಮತಗಟ್ಟೆ ಸಮೀಪವೇ ಇದ್ದು ತಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡಿದರು. ಮಧ್ಯಾಹ್ನ ಎಲ್ಲಾ ರಾಜಕೀಯ ಪಕ್ಷಗಳವರು ಮತದಾರರಿಗೆ ಊಟದ ವ್ಯವಸ್ಥೆ ಮಾಡಿದ್ದರು.

‘ಎ’ತರಗತಿ ಫಲಿತಾಂಶಕ್ಕೆ ತಡೆ:

ತಾಲ್ಲೂಕಿನ 20 ವಿಎಸ್ಎಸ್ಎನ್ಗಳ ಪ್ರತಿನಿಧಿಗಳಾಗಿ 5 ಜನ ನಿರ್ದೆಶಕ ಸ್ಥಾನಕ್ಕೆ 9 ಜನ ಸ್ಪರ್ಧಿಸಿದ್ದರು.

ಇದಲ್ಲೆ 2 ವಿಎಸ್ಎಸ್ಎನ್ಗಳ ಪ್ರತಿನಿಧಿಗಳು ಹೈಕೋರ್ಟ್ ಮೂಲಕ ಮತಚಲಾಯಿಸುವ ಹಕ್ಕು ಪಡೆದು ಭಾನುವಾರ ಮತಚಾಲಾಯಿಸಿದ್ದರು.

ಸೋಮವಾರ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ಇದ್ದು,ನ್ಯಾಯಾಲಯದ ತೀರ್ಪಿನ ನಂತರ ಫಲಿತಾಂಶ ಪ್ರಕಟಿಸಲು ನಿರ್ಧರಿಸಲಾಗಿದೆ.

‘ಎ’ತರಗತಿಯಿಂದ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಪಡೆದಿರುವ ಮತಗಳು 

ಅಪ್ಪಣ್ಣಪ್ಪ:7

ಕೆ.ಎಂ.ಅಂಬರೀಶ್;10

ಎಸ್.ಬಿ.ಕೆಂಪೇಗೌಡ;9

ಎಂ.ಗೋವಿಂದರಾಜು ;11+2

ಎನ್.ಜಗನ್ನಾಥ್; 12+2

ಜೆ.ವೈ.ಮಲ್ಲಪ್ಪ; 7

ಎಂ.ವೆಂಕಟೇಶ್; 12+2

ಬಿ.ಎನ್.ಶ್ರೀನಿವಾಸಮೂರ್ತಿ; 9+2

ಡಿ.ಸಿದ್ದರಾಮಯ್ಯ; 13+2

‘ಬಿ’ ತರಗತಿಯಿಂದ ಆಯ್ಕೆಯಾದ ಅಭ್ಯರ್ಥಿಗಳು ಪಡೆದ ಮತ:

ಪುರುಷೋತ್ತಮ;2,602,

ವಿಶ್ವಾಸ್ಹನುಮಂತೇಗೌಡ;2,184

ಎಂ.ಆನಂದ;2338

ಎ.ರಾಮಾಂಜಿನಪ್ಪ;1876

ಲಕ್ಷ್ಮೀನಾಗೇಶ್;2,176

ಚಂದ್ರಕಲಾ ಮಂಜುನಾಥ್; 1872

ವಿ.ಎಸ್.ರಮೇಶ್;2,544

ಜಿ.ಕೆಂಪೇಗೌಡ;2,295

Ramesh Babu

Journalist

Recent Posts

ಸರ್ಕಾರಿ ಗೋಮಾಳ ಒತ್ತುವರಿ ಮಾಡಿದವರು ಎಷ್ಟೇ ಪ್ರಭಾವಿಗಳಾಗಿದ್ದರೂ ಕಾನೂನು ಪ್ರಕಾರ ಕ್ರಮ: ನಕಲಿ ಭೂದಾಖಲೆ ಸೃಷ್ಟಿ ಹಾಗೂ ಅಕ್ರಮ ಖಾತೆ ಬದಲಾವಣೆ ಕಂಡುಬಂದರೆ ಕಠಿಣ ಕ್ರಮ- ಕಂದಾಯ ಸಚಿವ ಡಾ.ಜಿ ಪರಮೇಶ್ವರ್

ಸಾರ್ವಜನಿಕರ ಕೆಲಸಗಳು ತಾಲೂಕು ಕಚೇರಿಗಳಲ್ಲಿ ಯಾವುದೇ ವಿಳಂಬವಿಲ್ಲದೆ ನಡೆಯಬೇಕು. ಕಂದಾಯ ದಾಖಲೆಗಳ ನಿರ್ವಹಣೆ, ಭೂಮಿಗೆ ಸಂಬಂಧಿಸಿದ ಅರ್ಜಿಗಳ ವಿಲೇವಾರಿ ಹಾಗೂ…

56 minutes ago

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಪಾರ ಮೌಲ್ಯದ ಹೈಡ್ರೋಪೋನಿಕ್ ಗಾಂಜಾ ವಶ

ಅ.07-10-2026: ಬ್ಯಾಂಕಾಕ್‌ನಿಂದ ಬೆಂಗಳೂರಿಗೆ ಆಗಮಿಸಿದ ಪ್ರಯಾಣಿಕರೊಬ್ಬರನ್ನು ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ತಪಾಸಣೆ ನಡೆಸಿ, ಚೆಕ್‌-ಇನ್ ಬ್ಯಾಗೇಜ್‌ನಲ್ಲಿ ಅಡಗಿಸಿಟ್ಟಿದ್ದ 942 ಗ್ರಾಂ…

5 hours ago

ದೇವನಹಳ್ಳಿ ತಹಶೀಲ್ದಾರ್ ಕಚೇರಿಗೆ ಸಚಿವ ಜಿ. ಪರಮೇಶ್ವರ್ ದಿಢೀರ್ ಭೇಟಿ

ದೇವನಹಳ್ಳಿ: ಸಾರ್ವಜನಿಕರಿಂದ ಬಂದ ದೂರುಗಳ ಹಿನ್ನೆಲೆಯಲ್ಲಿ ಕಂದಾಯ ಸಚಿವ ಡಾ. ಜಿ. ಪರಮೇಶ್ವರ್ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ…

6 hours ago

ದೊಡ್ಡಬಳ್ಳಾಪುರ ರೈಲು ನಿಲ್ದಾಣದ ಬಳಿ ರೈಲಿಗೆ ಸಿಲುಕಿ ಅಪರಿಚಿತ ವ್ಯಕ್ತಿ ಸಾವು

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ರೈಲು ನಿಲ್ದಾಣದ ರೈಲ್ವೆ ಯಾರ್ಡ್‌ನಲ್ಲಿ ರೈಲಿಗೆ ಸಿಲುಕಿ ಸುಮಾರು 30 ವರ್ಷದ ಅಪರಿಚಿತ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ…

12 hours ago

ದಸರಾ….

ಮೈಸೂರು ದಸರಾ, ಮಹಿಷಾ ದಸರಾ, ಚಾಮುಂಡಿ ದಸರಾ..... ವಿಜಯ ದಶಮಿ - ಆಯುಧ ಪೂಜೆ..... ದುಷ್ಟ ಶಕ್ತಿಗಳ ವಿರುದ್ಧ ವಿಜಯದ…

12 hours ago

ವೃದ್ಧ ದಂಪತಿಗೆ ‘ವಾತ್ಸಲ್ಯ’ ಮನೆ ಹಸ್ತಾಂತರ

ದೊಡ್ಡಬಳ್ಳಾಪುರ: ತಾಲೂಕಿನ ಮೆಣಸಿ ಗ್ರಾಮದಲ್ಲಿ ವಯೋವೃದ್ಧ ದಂಪತಿ ಕೆಂಪಮ್ಮ ಮತ್ತು ಪಾಪಪಿಲ್ಲಪ್ಪ ಅವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ…

1 day ago