ದೊಡ್ಡಬಳ್ಳಾಪುರ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘಕ್ಕೆ(ಟಿಎಪಿಎಂಸಿಎಸ್) ಭಾನುವಾರ ನಡೆದ ಚುನಾವಣಾ ಫಲಿತಾಂಶ ಪ್ರಕಟವಾಗಿದ್ದು, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಸ್ಪಷ್ಟ ಬಹುಮತ ಪಡೆದಿದ್ದಾರೆ. ಬಿಜೆಪಿ–ಜೆಡಿಎಸ್ ಮೈತ್ರಿಗೆ ತೀವ್ರ ಮುಖಂಭಂಗವಾಗಿದೆ.
ಚುನಾವಣೆಯಲ್ಲಿ ಶೇ93.98ರಷ್ಟು ಮತದಾನ ನಡೆದಿದೆ. ‘ಬಿ’ ತರಗತಿಯಿಂದ ಜೆಡಿಎಸ್, ಬಿಜೆಪಿ ಮೈತ್ರಿ ಬೆಂಬಲಿತ ಐವರು ಅಭ್ಯರ್ಥಿಗಳು ಜಯಗಳಿಸಿದ್ದಾರೆ. ಕಾಂಗ್ರೆಸ್ ಬೆಂಬಲಿತ ಮೂವರು ಅಭ್ಯರ್ಥಿಗಳು ಮಾತ್ರ ಆಯ್ಕೆಯಾಗಿದ್ದಾರೆ. ‘ಎ’ ತರಗತಿಯ ಫಲಿತಾಂಶ ನ್ಯಾಯಾಲಯ ಆದೇಶದ ನಂತರ ಪ್ರಕಟಿಸುವುದಾಗಿ ಚುನಾವಣಾ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಅಭ್ಯರ್ಥಿಗಳು ಪಡೆದಿರುವ ಮತಗಳ ಆಧಾರದಲ್ಲಿ ಕಾಂಗ್ರೆಸ್ ಬೆಂಬಲಿತ ನಾಲ್ಕು ಅಭ್ಯರ್ಥಿಗಳು ಹಾಗೂ ಒಬ್ಬರು ಮೈತ್ರಿ ಅಭ್ಯರ್ಥಿ ಆಯ್ಕೆಯಾಗಿದ್ದಾರೆ.
ಬೆಳಿಗ್ಗೆ 9 ಗಂಟೆಗೆ ಪ್ರಾರಂಭವಾದ ಮತದಾನ ಸಂಜೆ 4 ಗಂಟೆಗೆ ಮುಕ್ತಾಯವಾಗುವವರೆಗೂ ರೈತರು ಉತ್ಸಾಹದಿಂದಲೇ ಮತಚಲಾವಣೆ ಮಾಡಿದರು.
ಸಂಜೆ 4 ಗಂಟೆಯ ನಂತರ ಮತಗಳ ಎಣಿಕೆ ಪ್ರಾರಂಭಿಸಲಾಯಿತು. ಮತದಾರರ ಪಟ್ಟಿಯಲ್ಲಿ ಯಾವುದೇ ಗೊಂದಲ ಉಂಟಾಗದಂತೆ ನಿರ್ವಹಣೆ ಮಾಡುವ ಸಲುವಾಗಿಯೇ 20 ಜನ ಸಿಬ್ಬಂದಿ ಕಾರ್ಯನಿರ್ವಹಿಸಿದ್ದರಿಂದ ಯಾವುದೇ ಗೊಂದಲುಗಳು ಉಂಟಾಗಿಲ್ಲ.
ಮತ ಚಲಾವಣೆಗೆ ಕಾದು ನಿಲ್ಲುವುದನ್ನು ತಪ್ಪಿಸಲು 12 ಕೊಠಡಿಗಳ ಮತಚಾವಣೆಗೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಪ್ರತಿ ಕೊಠಡಿಯಲ್ಲೂ ಏಕ ಕಾಲಕ್ಕೆ 8 ಜನರು ಪ್ರತ್ಯೇಕವಾಗಿ ಮತಪತ್ರಗಳ ಮೂಲಕ ಗುಪ್ತ ಮತದಾನ ಮಾಡುವ ಸೌಲಭ್ಯ ಕಲ್ಪಿಸಲಾಗಿತ್ತು.
ಮತದಾನ ನಡೆದ ಸರ್ಕಾರಿ ಕಾಲೇಜಿನ ಸುತ್ತ ಕಾಂಗ್ರೆಸ್, ಜೆಡಿಎಸ್ ಹಾಗೂ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಪೆಂಡಾಲ್ಗಳನ್ನು ಹಾಕಿಕೊಂಡು ಮತಯಾಚನೆ ಮಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಟಿಎಪಿಎಂಸಿಎಸ್ ಇತಿಹಾಸದಲ್ಲೇ ಇದೇ ಪ್ರಥಮ ಬಾರಿಗೆ ವಿಧಾನ ಸಭಾ ಚುನಾವಣ ಮಾದರಿಯಲ್ಲಿ ಚುನಾಯಿತ ಜನಪ್ರತಿನಿಧಿಗಳು ಸೇರಿದಂತೆ ಎಲ್ಲಾ ಪಕ್ಷಗಳ ಮುಖಂಡರು ಮತಗಟ್ಟೆ ಸಮೀಪವೇ ಇದ್ದು ತಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಗಳ ಪರವಾಗಿ ಮತಯಾಚನೆ ಮಾಡಿದರು. ಮಧ್ಯಾಹ್ನ ಎಲ್ಲಾ ರಾಜಕೀಯ ಪಕ್ಷಗಳವರು ಮತದಾರರಿಗೆ ಊಟದ ವ್ಯವಸ್ಥೆ ಮಾಡಿದ್ದರು.
‘ಎ’ತರಗತಿ ಫಲಿತಾಂಶಕ್ಕೆ ತಡೆ:
ತಾಲ್ಲೂಕಿನ 20 ವಿಎಸ್ಎಸ್ಎನ್ಗಳ ಪ್ರತಿನಿಧಿಗಳಾಗಿ 5 ಜನ ನಿರ್ದೆಶಕ ಸ್ಥಾನಕ್ಕೆ 9 ಜನ ಸ್ಪರ್ಧಿಸಿದ್ದರು.
ಇದಲ್ಲೆ 2 ವಿಎಸ್ಎಸ್ಎನ್ಗಳ ಪ್ರತಿನಿಧಿಗಳು ಹೈಕೋರ್ಟ್ ಮೂಲಕ ಮತಚಲಾಯಿಸುವ ಹಕ್ಕು ಪಡೆದು ಭಾನುವಾರ ಮತಚಾಲಾಯಿಸಿದ್ದರು.
ಸೋಮವಾರ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ಇದ್ದು,ನ್ಯಾಯಾಲಯದ ತೀರ್ಪಿನ ನಂತರ ಫಲಿತಾಂಶ ಪ್ರಕಟಿಸಲು ನಿರ್ಧರಿಸಲಾಗಿದೆ.
‘ಎ’ತರಗತಿಯಿಂದ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಪಡೆದಿರುವ ಮತಗಳು
ಅಪ್ಪಣ್ಣಪ್ಪ:7
ಕೆ.ಎಂ.ಅಂಬರೀಶ್;10
ಎಸ್.ಬಿ.ಕೆಂಪೇಗೌಡ;9
ಎಂ.ಗೋವಿಂದರಾಜು ;11+2
ಎನ್.ಜಗನ್ನಾಥ್; 12+2
ಜೆ.ವೈ.ಮಲ್ಲಪ್ಪ; 7
ಎಂ.ವೆಂಕಟೇಶ್; 12+2
ಬಿ.ಎನ್.ಶ್ರೀನಿವಾಸಮೂರ್ತಿ; 9+2
ಡಿ.ಸಿದ್ದರಾಮಯ್ಯ; 13+2
‘ಬಿ’ ತರಗತಿಯಿಂದ ಆಯ್ಕೆಯಾದ ಅಭ್ಯರ್ಥಿಗಳು ಪಡೆದ ಮತ:
ಪುರುಷೋತ್ತಮ;2,602,
ವಿಶ್ವಾಸ್ಹನುಮಂತೇಗೌಡ;2,184
ಎಂ.ಆನಂದ;2338
ಎ.ರಾಮಾಂಜಿನಪ್ಪ;1876
ಲಕ್ಷ್ಮೀನಾಗೇಶ್;2,176
ಚಂದ್ರಕಲಾ ಮಂಜುನಾಥ್; 1872
ವಿ.ಎಸ್.ರಮೇಶ್;2,544
ಜಿ.ಕೆಂಪೇಗೌಡ;2,295
ಭಾರತದ ಅಗ್ರ ಪೀಠೋಪಕರಣ ಬ್ರ್ಯಾಂಡ್ ಆಗಿರುವ ರಾಯಲ್ ಓಕ್ ಫರ್ನಿಚರ್, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ನೂತನ ಮಳಿಗೆಗೆ ಚಾಲನೆ…
ಎಲ್ಲಾ ವಲಯಗಳಿಗೂ ಯಾವುದೇ ಅಡೆತಡೆ ಇಲ್ಲದೆ ಎಲ್.ಪಿ.ಜಿ ಸರಬರಾಜು ಮಾಡಲಾಗುತ್ತಿದೆ ಅಲ್ಲದೇ ವಿಶೇಷವಾಗಿ *ಆಟೋ ಎಲ್.ಪಿ.ಜಿ*.ಗೆ ಯಾವುದೇ ರೀತಿಯ ಕೊರತೆ…
Cheap Emotional Support Animal Letter: Affordable ESA Documentation Affordable Emotional Support Animal Letters for Enhanced…
ಶ್ರೀರಾಮನವಮಿ ಅಂಗವಾಗಿ ವಿಶ್ವ ಹಿಂದೂ ಪರಿಷತ್ ಬಜರಂಗ ದಳ ವತಿಯಿಂದ ದೊಡ್ಡಬಳ್ಳಾಪುರ ನಗರದಲ್ಲಿ ಮಾರ್ಚ್ 27 ರಿಂದ ಮೂರು ದಿನಗಳ…
ಆಟವಾಡುತ್ತಾ ಈಜಲು ಹೋದ ನಾಲ್ವರು ಮಕ್ಕಳು ಕೃಷಿ ಹೊಂಡದಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ನಗನೂರು…
ಶ್ರೀರಾಮನವಮಿ ಅನ್ನ ಪ್ರಸಾದಿಂದ ಗ್ರಾಮಸ್ಥರಿಗೆ ಫುಡ್ ಪಾಯಿಸನ್...!!?ಆಗಿದ್ದು, ಅನ್ನಪ್ರಸಾದ ಸೇವಿಸಿದ ಗ್ರಾಮಸ್ಥರಲ್ಲಿ ಬಹುತೇಕ ಜನ ಆಸ್ಪತ್ರೆ ಪಾಲಾಗಿದ್ದಾರೆ. ಆಸ್ಪತ್ರೆಯಲ್ಲಿ ದಾಖಲಾಗಿರುವ…