ಟಿಎಪಿಎಂಸಿಎಸ್ ಚುನಾವಣೆ ಸೋಲಿಗೆ ನಾನೇ ನೇರ ಕಾರಣ. ಸೋಲಿನ ಸಂಪೂರ್ಣ ಜವಾಬ್ದಾರಿ ಶಾಸಕನಾಗಿ ನಾನೇ ತೆಗೆದುಕೊಳ್ಳುತ್ತೇನೆ ಎಂದು ಶಾಸಕ ಧೀರಜ್ ಮುನಿರಾಜ್ ಹೇಳಿದರು.
ದೊಡ್ಡಬಳ್ಳಾಪುರ ತಾಲೂಕಿನ ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘದ ಚುನಾವಣೆ ನ.2ರಂದು ನಡೆಯಿತು. ಈ ಚುನಾವಣೆಯಲ್ಲಿ ಎನ್ ಡಿಎ ಮೈತ್ರಿಕೂಟ ಸೋಲನ್ನು ಅನುಭವಿಸಿತ್ತು. ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನಗೆ ಪಿಎಲ್ ಡಿ ಬ್ಯಾಂಕ್ ನಂತರ ಒಳ್ಳೆ ಅನುಭವವಾಗಿದೆ. ಪಿಎಲ್ ಡಿ ಬ್ಯಾಂಕ್ ಶೇರ್ ಗಳನ್ನು ಸೂಕ್ತರೀತಿಯಲ್ಲಿ ಕಟ್ಟಿಸಿಕೊಂಡಿರಲಿಲ್ಲ. ನನಗೆ ತಾಲೂಕು ಮಟ್ಟದ ಸಹಕಾರಿ ಕ್ಷೇತ್ರದ ಚುನಾವಣೆ ಹೊಸದು, ಅದು ನನಗೆ ಮೊದಲ ಅನುಭವ. ಈ ಹಿನ್ನೆಲೆ ಒಂದು ಚೂರು ಎಡವಿರಬಹುದು. ಸೋಲಿಗೆ ಸಂಪೂರ್ಣವಾಗಿ ನಂದೇ ಜವಾಬ್ದಾರಿಯಾಗಿರುತ್ತದೆ. ಮುಂದಿನ ದಿನಗಳಲ್ಲಿ ಎಲ್ಲವನ್ನೂ ಸರಿಪಡಿಸಿಕೊಂಡು, ಮುಂಬರುವ ಚುನಾವಣೆಗಳನ್ನು ಗೆದ್ದು ತಕ್ಕ ಪ್ರತ್ಯುತ್ತರ ನೀಡುವ ಪ್ರಯತ್ನ ಮಾಡುತ್ತೇವೆ ಎಂದರು.
ರಾಜಕೀಯ ಎಂದ ಮೇಲೆ ಸೋಲು ಗೆಲುವು ಇದ್ದದ್ದೇ. ಟಿಎಪಿಎಂಸಿಎಸ್ ಚುನಾವಣೆಯಲ್ಲಿ ಹೊಂದಾಣಿಕೆಯಾಗಿದ್ದರಿಂದ ನಮ್ಮ ಪಾರ್ಟಿ ಮತ್ತು ಅವರ ಪಾರ್ಟಿಯಲ್ಲಿ ಅಂತರಗಳಿತ್ತು. ಸ್ವಲ್ಪ ಸಿಂಡಿಕೇಟ್ ಗೆ ಕೆಲಸ ಮಾಡಿದ್ದರೆ ಎಲ್ಲರು ಗೆಲ್ಲುತ್ತಿದ್ದರು. ಮೃತ್ರಿಯಲ್ಲಿ ಸಮನ್ವಯ ಕೊರತೆ ಎದ್ದುಕಾಣುತ್ತಿತ್ತು. ಎಲ್ಲರು ಸಿಂಡಿಕೇಟ್ ಗೆ ಮತ ಹಾಕುತ್ತಾರೆ ಎಂದು ನಂಬಿದ್ದು ನನ್ನ ತಪ್ಪು, ನನ್ನ ಅತಿಯಾದ ಆತ್ಮವಿಶ್ವಾಸವೇ ನನಗೆ ಮುಳುವಾಯಿತು. ಹತ್ತಾರು ಆಸೆ ಆಮಿಷ, ವಿವಿಧ ತಂತ್ರಗರಿಕೆಗಳಲ್ಲಿ ನಾವು ವಿಫಲರಾಗಿದ್ದೇವೆ. ಈ ತಂತ್ರಗಾರಿಕೆಗೆ ಮುಂದಿನ ದಿನಗಳಲ್ಲಿ ತಕ್ಕ ಪ್ರತಿತಂತ್ರ ರೂಪಿಸಿ ಚುನಾವಣೆ ಎದುರಿಸುತ್ತೇವೆ ಎಂದರು.
ಎ ತರಗತಿ ಬಿ ತರಗತಿಗೆ ನಮ್ಮ ಅಭ್ಯರ್ಥಿಗಳನ್ನು ಹಾಕಿದ್ದರೆ ನಾವೇ ಗೆಲ್ಲುತ್ತಿದ್ದೇವು. ಇನ್ನು ಮುಂದೆ ಮೈತ್ರಿ ಮಾಡಿಕೊಂಡರೆ ಯಾವ ರೀತಿ ಎಚ್ಚರದಿಂದ ಇರಬೇಕು ಎಂಬುದನ್ನು ಕಲಿತ್ತಿದ್ದೇನೆ. ನನ್ನ ಶಾಸಕ ಸ್ಥಾನದ ಚುನಾವಣೆ ನಾನು ಮಾಡಿಕೊಂಡಿದ್ದೇನೆ. ಎಂಪಿ ಚುನಾವಣೆ ಮಾಸ್ ಚುನಾವಣೆ ಅದರಲ್ಲಿ ಮೈತ್ರಿ ಮಾಡಿಕೊಂಡು ಅಲ್ಲೂ ಸ್ವಲ್ಪ ಸಮಸ್ಯೆಯಾಯಿತು. ಮೈತ್ರಿಯಿಂದಾಗಿ 5-10 ಸಾವಿರ ವೋಟ್ ಏರುಪೇರಾಯಿತು ಎಂದು ಹೇಳಿದರು.
ಕೆಲವರು ಸರ್ಕಾರಿ ಅಧಿಕಾರಿಗಳು, ಸರ್ಕಾರಿ ಸಂಸ್ಥೆಗಳನ್ನ, ವಿಎಸ್‌ಎಸ್ ಎನ್ ಕಾರ್ಯದರ್ಶಿಗಳನ್ನು ಸರಿಯಾಗಿ ಉಪಯೋಗಿಸಿಕೊಂಡರು. ಇದೆನ್ನೆಲ್ಲಾ ನನಗೆ ಅವರು ಹೇಳಿಕೊಡುತ್ತಿದ್ದಾರೆ. ಅದನ್ನ ಮುಂದಿನ ದಿನಗಳಲ್ಲಿ ಅಳವಡಿಸಿಕೊಂಡು ತಂತ್ರಗಾರಿಕೆ ಎಣಿಯುತ್ತೇನೆ ಎಂದು ತಿಳಿಸಿದರು.
ಬಿಜೆಪಿ-ಜೆಡಿಎಸ್ ಸಂಸದರು ರಾಜ್ಯಕ್ಕೆ ಕೇಂದ್ರದಿಂದ ಆಗುತ್ತಿರುವ ಅನ್ಯಾಯದ ಬಗ್ಗೆ ಬಾಯಿಯನ್ನೇ ಬಿಡುತ್ತಿಲ್ಲ. ಪ್ರಹ್ಲಾದ್ ಜೋಶಿ ಕೂಡ ಒಂದೇ ಒಂದು ದಿನ…
ಗೆದ್ದವರಿಗೆ ಅಭಿನಂದಿಸುತ್ತಾ, ಸೋತವರಿಗೆ ಸಾಂತ್ವನ ಹೇಳುತ್ತಾ, ಮತದಾರರಿಗೆ ಧನ್ಯವಾದಗಳನ್ನು ಅರ್ಪಿಸುತ್ತಾ, ಸಂವಿಧಾನಕ್ಕೆ ಸಲಾಂ ಹೊಡೆಯುತ್ತಾ, ನಮ್ಮ ಮುಗ್ದತೆ ಮತ್ತು ಮೂರ್ಖತನ…
ಡಿ.13ರಂದು ರಾಷ್ಟ್ರೀಯ ಲೋಕ ಅದಾಲತ್ ನಡೆಯಲಿದ್ದು, ರಾಷ್ಟ್ರೀಯ ಲೋಕ ಅದಾಲತ್ ಮುಖೇನ ರಾಜೀಯಾಗುವ ಪ್ರಕರಣಗಳ ವಿಲೇವಾರಿಗೊಳಿಸುವಂತೆ ಕರ್ನಾಟಕ ರಾಜ್ಯ ಕಾನೂನು…
ಕರ್ನಾಟಕ ಮರಾಠ ಸಮುದಾಯ ಅಭಿವೃದ್ಧಿ ನಿಗಮದಿಂದ ಹೊಲಿಗೆ ಯಂತ್ರ ಪಡೆಯಲು ಅರ್ಹ ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಪ್ರವರ್ಗ-3-ಬಿ…
ದೊಡ್ಡಬಳ್ಳಾಪುರದ ನೂತನ ತಹಶೀಲ್ದಾರ್ ಆಗಿ ಮಲ್ಲಪ್ಪ ನೇಮಕಗೊಂಡಿದ್ದಾರೆ. ಈ ಹಿನ್ನೆಲೆ ಇಂದು ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಘಾಟಿ ಸುಬ್ರಹ್ಮಣ್ಯ…
ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನ ದೇವರೆಡ್ಡಿಪಲ್ಲಿ ಗ್ರಾಮದಲ್ಲಿ ಆಹಾರ ಸೇವಿಸಿ ಒಂದೇ ಕುಟುಂಬದ 8 ಮಂದಿ ಅಸ್ವಸ್ಥಗೊಂಡಿದ್ದು. ಮೂವರ ಪರಿಸ್ಥಿತಿ…