
ಇಂದು ಟಿಎಪಿಎಂಸಿಎಸ್ ಚುನಾವಣೆ ಬಿರುಸಿನಿಂದ ನಡೆಯುತ್ತಿದ್ದು, ಅದೇರೀತಿ ಕೊನೆಗಳಿಯ ಕಸರತ್ತುಗಳನ್ನು ಆಯಾ ಪಕ್ಷಗಳ ನಾಯಕರು, ಮುಖಂಡರು, ಕಾರ್ಯಕರ್ತರು ನಡೆಸುತ್ತಿದ್ದಾರೆ. ಹಾಗೇ ಮತದಾರರು ಸಹ ಅಷ್ಟೇ ಉತ್ಸಾಹದಿಂದ ಮತದಾನ ಮಾಡುತ್ತಿದ್ದಾರೆ.
ದೊಡ್ಡಬಳ್ಳಾಪುರ ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ (ಟಿಎಪಿಎಂಸಿಎಸ್) ಚುನಾವಣೆ ನ.2 ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 4ವರೆಗೆ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ (ಪ್ರೌಢ ಶಾಲಾ ವಿಭಾಗ) ಆಯೋಜನೆ ಮಾಡಲಾಗಿದ್ದು, ಬಿರುಸಿನಿಂದ ಮತದಾನ ನಡೆಯುತ್ತಿದೆ..
ಬೆಳಗ್ಗೆ 11 ಗಂಟೆ ನಂತರ ಮತದಾನ ಚುರುಕುಗೊಂಡಿದೆ. ಇದೇ ವೇಳೆ ಮಾತನಾಡಿದ ಕೆಪಿಸಿಸಿ ಸದಸ್ಯ ಲಕ್ಷೀಪತಿ ಅವರು, ಮತದಾರರ ಒಲವು ನೋಡಿ ಹರ್ಷ ವ್ಯಕ್ತಪಡಿಸಿ, ಕಾಂಗ್ರೆಸ್ ನ ಗೆಲುವು ಶತಸಿದ್ಧ ಎಂದು ಹೇಳಿದರು.
ಎ ಮತ್ತು ಬಿ ತರಗತಿಯ ಎಲ್ಲಾ 13 ಸ್ಥಾನಗಳಿಗೂ ಕಾಂಗ್ರೆಸ್ ತಮ್ಮ ಬೆಂಬಲಿತ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದೆ. ಈಗಾಗಲೇ ‘ಎ’ ತರಗತಿ ಐದು ಸ್ಥಾನಗಳನ್ನು ಗೆಲ್ಲುವ ಸಂಪೂರ್ಣ ಭರವಸೆ ಇದೆ. ಇವುಗಳನ್ನು ಹೊರತುಪಡಿಸಿ ಸರ್ಕಾರದಿಂದ ನಾಮನಿರ್ದೇಶನ ಸ್ಥಾನ, ಪಿಎಲ್ ಡಿ ಬ್ಯಾಂಕ್ ಮತ್ತು ಬಿಡಿಸಿಸಿ ಬ್ಯಾಂಕ್ ಪ್ರತಿನಿಧಿ ನಮ್ಮದೇ ಆಗಿವೆ. ಈ ಹಿನ್ನೆಲೆ ಕಾಂಗ್ರೆಸ್ ಟಿಎಪಿಎಂಸಿಎಸ್ ಚುಕ್ಕಾಣಿ ಹಿಡಿದೇ ಹಿಡುಯುತ್ತದೆ ಎಂದು ಹೇಳಿದರು…