
ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಹೋಬಳಿ, ಗೆದ್ದಲಪಾಳ್ಯದ ದುರ್ಗೇನಹಳ್ಳಿ ಕೆರೆ ಅಂಗಳದಲ್ಲಿರುವ ಶ್ರೀ ರೇಣುಕಾ ಯಲ್ಲಮ್ಮ ನವದುರ್ಗಾ ಕ್ಷೇತ್ರದಲ್ಲಿ ಜ.13 ಮತ್ತು ಜ.14ರಂದು ಎರಡು ದಿನಗಳ ಕಾಲ 12ನೇ ಜಾತ್ರಾ ಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮಗಳ ವಿವರ…
ಜ.13ರ ಸೋಮವಾರದಂದು ಶ್ರೀ ರೇಣುಕಾ ಯಲ್ಲಮ್ಮ ನವದುರ್ಗಾ ದೇವರಿಗೆ ಫಲಪಂಚಾಮೃತ ಅಭಿಷೇಕ, ಪುಷ್ಪಾಲಂಕಾರ, ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ, ಸಂಜೆ 6ಗಂಟೆ ನಂತರ ದೀಪೋತ್ಸವ(ಆರತಿ), ಅನ್ನ ಸಂತರ್ಪಣೆ ನಡೆಯಲಿದೆ.
ಜ.14ರ ಮಂಗಳವಾರದಂದು ಬೆಳಗ್ಗೆ 4 ಗಂಟೆಯಲ್ಲಿ ಅಗ್ನಿಕುಂಡ ಹಾಯುವುದು, ಆರತಿ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ಸೇರಿದಂತೆ ಇತರೆ ಪೂಜಾ ಕಾರ್ಯಕ್ರಮಗಳು ನಡೆಯಲಿವೆ ಎಂದು ಶ್ರೀ ರೇಣುಕಾ ಯಲ್ಲಮ್ಮ ನವದುರ್ಗಾ ಕ್ಷೇತ್ರದ ಸಮಿತಿ ತಿಳಿಸಿದೆ….