
ತೆಲಂಗಾಣದ ಅಶೋಕ್ ನಗರದ ವೃತ್ತದಲ್ಲಿ ನಿರುದ್ಯೋಗ ಯುವಕರು ಭಿಕ್ಷೆ ಬೇಡುತ್ತಿರುವ ದೃಶ್ಯ ಕಂಡುಬಂದಿದ್ದು. ಇದೀಗ ಘಟನೆ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಭಿಕ್ಷೆ ಬೇಡುತ್ತಿದ್ದ ನಿರುದ್ಯೋಗ ಯುವಕರನ್ನು ಪೊಲೀಸರು ಬಲವಂತವಾಗಿ ಬಂಧಿಸಿದ್ದಾರೆ. ಇದಲ್ಲದೇ ಭಿಕ್ಷೆ ಬೇಡುತ್ತಿದ್ದ ಯುವಕರಿಗೆ ಹಣ ನೀಡಿದವರನ್ನು ಬಂಧನಕ್ಕೆ ಪೊಲೀಸರು ಮುಂದಾಗಿದ್ದಾರೆ.

ಭಿಕ್ಷೆ ಬೇಡುವುದಕ್ಕೆ ಕಾರಣ…?
ತೆಲಂಗಾಣ ನಿರುದ್ಯೋಗ ಯುವಕರು ಭಿಕ್ಷೆ ಬೇಡಲು ಮುಂದಾಗಿದ್ದಾರೆ. ಏಕೆಂದರೆ ತೆಲಂಗಾಣ ರಾಜ್ಯದಲ್ಲಿ ನಿರುದ್ಯೋಗ ಸಮಸ್ಯೆ ಉಲ್ಭಗೊಂಡಿದ್ದರೂ ಸರ್ಕಾರ ಮಾತ್ರ ಕಣ್ಮುಚ್ಚಿ ಕುಳಿತಿದೆ. ಕಾಂಗ್ರೆಸ್ ಸರ್ಕಾರ ಬರುವುದಕ್ಕಿಂತ ಮೊದಲು ಚುನಾವಣಾ ಪೂರ್ವದಲ್ಲಿ ನಿರುದ್ಯೋಗ ಸಮಸ್ಯೆ ಹೋಗಲಾಡಿಸಲು ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ, ಮುಖ್ಯಮಂತ್ರಿ ರೇವಂತ್ ರೆಡ್ಡಿ ಸೇರಿದಂತೆ ಇತರೆ ಎಲ್ಲಾ ನಾಯಕರು ಮಾತು ಕೊಟ್ಟಿದ್ದರು. ಆದರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಹಲವು ತಿಂಗಳಾದರೂ ಉದ್ಯೋಗ ಸೃಷ್ಟಿ ಮಾಡಿಲ್ಲ. ತೆಲಂಗಾಣ ರಾಜ್ಯ ಕಾಂಗ್ರೆಸ್ ಸರ್ಕಾರ ಬಳಿ ಉದ್ಯೋಗ ಕೊಡಿ ಎಂದು ಎಷ್ಟು ಬಾರಿ ಮನವಿ ಮಾಡಿದರು ಏನೂ ಪ್ರಯೋಜನವಾಗಲಿಲ್ಲ.

ಈ ಹಿನ್ನೆಲೆ ದೆಹಲಿಯಲ್ಲಿರುವ ರಾಹುಲ್ ಗಾಂಧಿ ಅವರ ಬಳಿ ತೆರಳಿ ಉದ್ಯೋಗ ಕೊಡುವುಂತೆ ಕೇಳಲು ನಿರ್ಧಾರ ಮಾಡಿದ್ದಾರೆ. ಆದರೆ ದೆಹಲಿಗೆ ತೆರಳಲಿ ನಮ್ಮ ಬಳಿ ಹಣವಿಲ್ಲ. ಆದ್ದರಿಂದ ಭಿಕ್ಷೆ ಬೇಡಿ ದೆಹಲಿಗೆ ಹೋಗುತ್ತಿದ್ದೇವೆ ಎಂದು ನಿರುದ್ಯೋಗ ಯುವಕರು ತಿಳಿಸಿದ್ದಾರೆ.