ಜೈ ಕೋಲಾರಮ್ಮ ಆಟೋ ನಿಲ್ದಾಣದಲ್ಲಿ ಅದ್ದೂರಿ ಕನ್ನಡ ರಾಜ್ಯೋತ್ಸವ

ಕೋಲಾರ: ರಾಜ್ಯದ ರಕ್ಷಣೆ ಹಾಗೂ ಕನ್ನಡ ಬಳಕೆಯಲ್ಲಿ ಆಟೋ ಚಾಲಕರ ಪಾತ್ರ ಪ್ರಮುಖವಾಗಿದ್ದು ಅವರ ಸೇವೆಗೆ ನಾಡಿನ ಪ್ರತಿಯೊಬ್ಬರೂ ಕೈಜೋಡಿಸಿದಾಗ ಮಾತ್ರವೇ ಕನ್ನಡ ಉಳಿಯಲು ಸಾಧ್ಯವಾಗುತ್ತದೆ ಎಂದು ಕೆಯುಡಿಎ ಮಾಜಿ ಅಧ್ಯಕ್ಷ ಓಂಶಕ್ತಿ ಚಲಪತಿ ತಿಳಿಸಿದರು.

ನಗರದ ಡೂಂ ಲೈಟ್ ವೃತ್ತದಲ್ಲಿ ಶುಕ್ರವಾರ ಜೈ ಕೋಲಾರಮ್ಮ ಆಟೋ ಚಾಲಕರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೇರವೇರಿಸಿ ಮಾತನಾಡಿದ ಅವರು ಆಟೋ ಚಾಲಕರು ಕನ್ನಡತನವನ್ನು ಉಳಿಸುವ ನಿಟ್ಟಿನಲ್ಲಿ ಸಾಕಷ್ಟು ಕೊಡುಗೆ ನೀಡುತ್ತಿದ್ದಾರೆ. ನಾಡು, ನುಡಿ ಉಳಿವಿನ ಹಿಂದೆ ಆಟೋ ಚಾಲಕರ ಶ್ರಮ ಅಧಿಕವಾಗಿದೆ ಇವರು ನಿತ್ಯ ಕನ್ನಡ ಬಳಕೆ ಮಾಡುವುದರ ಜತೆಗೆ ಕನ್ನಡವನ್ನು ಅನುಷ್ಠಾನಕ್ಕೆ ತರುತ್ತಿದ್ದಾರೆ ಎಂದು ತಿಳಿಸಿದರು.

ರಾಜ್ಯದಲ್ಲಿ ಚಿತ್ರನಟರು ಸೇರಿದಂತೆ ಸಾಹಿತಿಗಳು ಕನ್ನಡ ಭಾಷಾ ಬೆಳವಣಿಗೆಗಾಗಿ ತೊಡಗಿಸಿಕೊಂಡರೆ, ಆಟೋಚಾಲಕರು ನಿತ್ಯ ಜೀವನದಲ್ಲಿ ಕನ್ನಡವನ್ನು ಬೆಳೆಸುವ ನಿಟ್ಟಿನಲ್ಲಿ ಇದ್ದಾರೆ ಆಟೊ ಚಾಲಕರು ಪ್ರತಿವರ್ಷ ಕನ್ನಡ ರಾಜ್ಯೋತ್ಸವ ಆಚರಿಸುವುದಲ್ಲದೇ ಸದಾ ಕನ್ನಡ ಭಾಷೆಯಲ್ಲಿ ಮಾತನಾಡಿ ಕನ್ನಡ ಭಾಷೆಗೆ ಗೌರವ ನೀಡುತ್ತಾರೆ ಎಂದರು.

ಈ ಸಂದರ್ಭದಲ್ಲಿ ಭುವನೇಶ್ವರಿ ಕನ್ನಡ ಸಂಘದ ಅಧ್ಯಕ್ಷ ತ್ಯಾಗರಾಜ್, ದಿಶಾ ಸಮಿತಿ ಮಾಜಿ ಸದಸ್ಯರಾದ ಸಾ.ಮಾ ಬಾಬು, ಅಪ್ಪಿ ನಾರಾಯಣಸ್ವಾಮಿ, ಮುಖಂಡರಾದ ನಾಮಲ್ ಮಂಜು, ಸಂಘದ ಅಧ್ಯಕ್ಷ ರಮೇಶ್, ಆಟೋ ಚಾಲಕರಾದ ಸ್ವಾಮಿ, ಮಂಜುನಾಥ್, ಮುನಿರೆಡ್ಡಿ ಮುಂತಾದವರು ಇದ್ದರು

Leave a Reply

Your email address will not be published. Required fields are marked *

error: Content is protected !!