ದೊಡ್ಡಬಳ್ಳಾಪುರ: ತುಮಕೂರು ಜಿಲ್ಲೆಯ ದೇವರಾಯನದುರ್ಗ ಬೆಟ್ಟದಲ್ಲಿನ ಜಯಮಂಗಲಿ ನದಿ ಉಗಮ ಸ್ಥಾನದ ಸುತ್ತಮುತ್ತ ಒಂದೂವರೆ ವರ್ಷಗಳ ಹಿಂದೆ ಪ್ರಾರಂಭವಾದ ಸಂಶೋಧನೆಯ ಫಲವಾಗಿ ಬೆಟ್ಟದ ತಪ್ಪಲಿನ ಹಳೇಕೋಟೆ ಗ್ರಾಮದ ಇರವೆಹೊಲ ಜಾಗದಿಂದ ಸಂಗ್ರಹಿಸಲಾಗಿದ್ದ ಜೇಡದ ಮಾದರಿಗಳಲ್ಲಿ ಹೊಸ ಪ್ರಬೇಧದ ಜೇಡ ಪತ್ತೆಯಾಗಿದೆ ಎಂದು ಸಂಶೋಧನ ತಂಡದಲ್ಲಿನ ಜೇಡ ತಜ್ಞ ವೈ.ಟಿ.ಲೋಹಿತ್ ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಅವರು, ಹೊಸ ಜೀನಸ್ ವರ್ಗಕ್ಕೆ ಸೇರಿರುವ ಜೇಡಕ್ಕೆ ಸ್ಥಳೀಯ ಹೆಸರಿನಿಂದಲೇ ಕೆರೆಯಬೇಕು ಎನ್ನುವ ಉದ್ದೇಶದೊಂದಿಗೆ ‘ತೆಂಕಣ ಜಯಮಂಗಲಿ’ ಎಂದು ಹೆಸರಿಸಲಾಗಿದೆ. ಎಷ್ಟೋ ಕೀಟ ಜೇಡಗಳಂತ ಜೀವಿಗಳ ಹೆಸರು ಆಂಗ್ಲ, ಲ್ಯಾಟಿನ್ ಮಯವಾಗಿದ್ದು, ಹೆಸರುಗಳನ್ನು ಉಚ್ಚರಿಸಲು ಹಾಗೂ ನೆನಪಿಡಲು ಕಷ್ಟ. ಈ ಕಾರಣದಿಂದಾಗಿ ನಾನು ಪತ್ತೆ ಮಾಡಿರುವ ಜೇಡವನ್ನು ತೆಂಕಣ ಜಯಮಂಗಲಿ ಎನ್ನುವ ಹೆಸರಿನಿಂದಲೆ ಪರಿಚಯಿಸಿದ್ದೇವೆ ಎಂದರು.
ತೆಂಕಣ ಜಯಮಂಗಲಿ ಜೇಡವು ಸಹ ಹೊಸದಾದ ಕಾರಣ ವಿಜ್ಞಾನಿಗಳಾದ ಜಾನ್ ಕೆಲಬ್, ಕಿರಣ್ ಮರಾಟೆ, ಕೃಷ್ಣಮೇಘ ಕುಂಟೆ ಮತ್ತು ಕೆನಡಾದ ವೈನೆಮ್ಯಾಡಿಸನ್ ಈ ಸಂಶೋಧನೆಯಲ್ಲಿ ಕೈ ಜೋಡಿಸಿದ್ದಾರೆ. ಎನ್.ಸಿ.ಬಿ.ಎಸ್ ಮತ್ತು ಯೂನಿವರ್ಸಿಟಿ ಆಫ್ ಬ್ರಿಟಿಷ್ ಕೊಲಂಬಿಯಾ ಲ್ಯಾಬ್ಗಳೊಂದಿಗಿನ ಸಹಯೋಗದಲ್ಲಿ ಇದನ್ನು ಹೊರ ಪ್ರಪಂಚಕ್ಕೆ ಪರಿಚಸಿದ್ದೇವೆ. ನಮ್ಮ ತಂಡದಲ್ಲಿನ ಬಿ.ಜಿ.ನಿಶಾ,ಚಿನ್ಮಯ್ ಸಿ.ಮಳಿಯೆ ಇವರೆಲ್ಲರ ಪರಿಶ್ರಮದೊಂದಿಗೆ ಅಂತರ ರಾಷ್ಟ್ರೀಯ ನಿಯತಕಾಲಿಕೆ ಜೊಕೇಸ್ (Zookeys) ನಲ್ಲಿ ನಮ್ಮ ಸಂಶೋಧನ ಬರಹವನ್ನು ಇದೇ ಅಕ್ಟೋಬರ್ 11 ರಂದು ಪ್ರಕಟಿಸಲಾಗಿದೆ.
ದೇವರಾಯನದುರ್ಗದ ಕಾಡು, ಬೆಟ್ಟ, ನದಿ, ಜಲಮೂಲಗಳು ಜೀವವೈವಿಧ್ಯತೆಯನ್ನು ಪೋಶಿಸುತ್ತ ಸುತ್ತಲಿನ ನಗರ ಹಳ್ಳಿಗಳನ್ನು ಕಾಪಾಡುತ್ತಾ ಬಂದಿವೆ. ಈ ಹೊಸ ಜೇಡದಂತೆ ವಿಜ್ಞಾನಕ್ಕೆ ಪರಿಚಯವಿಲ್ಲದ ಇನ್ನೂ ಅನೇಕ ಜೀವಿಗಳು ಈ ಬೆಟ್ಟದ ಸುತ್ತಮುತ್ತ ಇವೆ. ದೇವರಾಯನದುರ್ಗವನ್ನು ಪುಣ್ಯಕ್ಷೇತ್ರ ಅಥವಾ ಪ್ರವಾಸಿ ತಾಣವಾಗಿಯಷ್ಟೇ ನೋಡದೆ ಜೀವವೈವಿಧ್ಯತೆಯ ತಾಣವಾಗಿಯು ಗುರುತಿಸುವ ಮೂಲಕ ಈ ಪ್ರದೇಶವನ್ನು ಸಂರಕ್ಷಿಸಬೇಕಿದೆ ಎನ್ನುತ್ತಾರೆ ವೈ.ಟಿ.ಲೋಹಿತ್.
ಕೋಲಾರ: ಕೆ.ಸಿ.ವ್ಯಾಲಿ ಯೋಜನೆಯಿಂದ ಅಂತರ್ಜಲ ಹೆಚ್ಚಿ ರೈತರ ಬದುಕು ಹಸನಾಗಿದ್ದು, ಜೆಡಿಎಸ್ ಪಕ್ಷ ಸೇರಿದಂತೆ ಕೆಲ ಮುಖಂಡರಿಂದ ದಾರಿ ತಪ್ಪಿಸುವ…
ದೊಡ್ಡಬಳ್ಳಾಪುರ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಜಾಗೃತ ಪರಿಷತ್ತು ವತಿಯಿಂದ ಪದ್ಮಶ್ರೀ ಸಾಲುಮರದ ತಿಮ್ಮಕ್ಕ ಅವರಿಗೆ ನುಡಿನಮನ…
ಆಲಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯ ಸಹ ಶಿಕ್ಷಕ ಅರುಣ್ ಅವರು ವರ್ಗಾವಣೆಗೊಂಡಿದ್ದು, ಈ ಹಿನ್ನೆಲೆ ಇಂದು ಎಸ್…
ಬಿಜೆಪಿ-ಜೆಡಿಎಸ್ ಸಂಸದರು ರಾಜ್ಯಕ್ಕೆ ಕೇಂದ್ರದಿಂದ ಆಗುತ್ತಿರುವ ಅನ್ಯಾಯದ ಬಗ್ಗೆ ಬಾಯಿಯನ್ನೇ ಬಿಡುತ್ತಿಲ್ಲ. ಪ್ರಹ್ಲಾದ್ ಜೋಶಿ ಕೂಡ ಒಂದೇ ಒಂದು ದಿನ…
ಗೆದ್ದವರಿಗೆ ಅಭಿನಂದಿಸುತ್ತಾ, ಸೋತವರಿಗೆ ಸಾಂತ್ವನ ಹೇಳುತ್ತಾ, ಮತದಾರರಿಗೆ ಧನ್ಯವಾದಗಳನ್ನು ಅರ್ಪಿಸುತ್ತಾ, ಸಂವಿಧಾನಕ್ಕೆ ಸಲಾಂ ಹೊಡೆಯುತ್ತಾ, ನಮ್ಮ ಮುಗ್ದತೆ ಮತ್ತು ಮೂರ್ಖತನ…
ಡಿ.13ರಂದು ರಾಷ್ಟ್ರೀಯ ಲೋಕ ಅದಾಲತ್ ನಡೆಯಲಿದ್ದು, ರಾಷ್ಟ್ರೀಯ ಲೋಕ ಅದಾಲತ್ ಮುಖೇನ ರಾಜೀಯಾಗುವ ಪ್ರಕರಣಗಳ ವಿಲೇವಾರಿಗೊಳಿಸುವಂತೆ ಕರ್ನಾಟಕ ರಾಜ್ಯ ಕಾನೂನು…