ಜೆಡಿಎಸ್ ಪರಿಹಾರ ಭರವಸೆ ಪತ್ರ ಬಿಡುಗಡೆ: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಂದ ಬಿಡುಗಡೆ

 

ಮಾಜಿ ಪ್ರಧಾನಮಂತ್ರಿಗಳು ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಹೆಚ್.ಡಿ.ದೇವೇಗೌಡರು, ಮಾಜಿ ಮುಖ್ಯಮಂತ್ರಿಗಳಾದ ಹೆಚ್.ಡಿ.ಕುಮಾರಸ್ವಾಮಿ ಅವರು ಕರುನಾಡ ಜನರಿಗೆ ಜೆಡಿಎಸ್ ಪರಿಹಾರ ಭರವಸೆ ಪತ್ರವನ್ನು ಬೆಂಗಳೂರಿನ ಪದ್ಮನಾಭ ನಗರದ ದೇವೇಗೌಡರ ನಿವಾಸದಲ್ಲಿ ಬಿಡುಗಡೆ ಮಾಡಿದರು.

ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರಾದ ಸಿ.ಎಂ.ಇಬ್ರಾಹಿಂ, ಜನತಾ ಪ್ರಣಾಳಿಕೆ ಕರುಡು ರಚನಾ ಸಮಿತಿಯ ಅಧ್ಯಕ್ಷರಾದ ಬಿ.ಎಂ.ಫಾರೂಕ್, ಸದಸ್ಯರಾದ ಬಂಡೆಪ್ಪ ಕಾಶೆಂಪೂರ್, ಕುಪೇಂದ್ರ ರೆಡ್ಡಿ, ಕೆ.ಎನ್.ತಿಪ್ಪೇಸ್ವಾಮಿ ಅವರು ಉಪಸ್ಥಿತರಿದ್ದರು.

ಜೆಡಿಎಸ್ ಪರಿಹಾರ ಭರವಸೆ ಅಂಶಗಳು

1) ಮಕ್ಕಳಿಗೆ ಉಚಿತ ಶಿಕ್ಷಣ, ಉಚಿತ ಆರೋಗ್ಯದ ಭರವಸೆ.

2) ಗ್ಯಾಸ್ ಮೇಲೆ ಶೇ.50% ಸಬ್ಸಿಡಿ (5-10 ಸಿಲಿಂಡರ್​ಗೆ ಸಬ್ಸಿಡಿ).

3) ರೈತರ ಮಕ್ಕಳ ಮದುವೆಗೆ 2 ಲಕ್ಷ ಸಹಾಯಧನ.

4) ವೃದ್ಧಾಪ್ಯ, ವಿಧವಾ ವೇತನ 900 ರೂ.ಯಿಂದ 2 ಸಾವಿರ ರೂ. ಹೆಚ್ಚಳ .

5)ಅಂಗನವಾಡಿ ಕಾರ್ಯಕರ್ತೆಯರಿಗೆ 5 ಸಾವಿರ ವೇತನ.

6)ಕನಿಷ್ಠ 15 ವರ್ಷ ಸೇವೆ ಸಲ್ಲಿಸಿ ನಿವೃತ್ತವಾದವ್ರಿಗೆ ಪಿಂಚಣಿ.

7)ಹಿರಿಯ ನಾಗರಿಕರಿಗೆ ಮಾಸಾಶನ 1200 ರೂ.ಯಿಂದ 5 ಸಾವಿರ ರೂ. ಏರಿಕೆ.

8)ವಿಶೇಷ ಚೇತನರಿಗೆ ಪಿಂಚಣಿ 600 ರೂ.ಯಿಂದ 2500 ರೂ.ಗೆ ಏರಿಕೆ.

9)ಸಾಮಾಜಿಕ ಭದ್ರತೆಗಳ ಮಾಸಾಶನ 5 ಸಾವಿರಕ್ಕೆ ಹೆಚ್ಚಳ.

10)ತೆಲಂಗಾಣ ಮಾದರಿಯಲ್ಲಿ ಕೃಷಿಬಂಧು ಯೋಜನೆ ಜಾರಿ.

11)6.8 ಲಕ್ಷ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಉಚಿತ ಸೈಕಲ್.

12)ಖಾಸಗಿ ಉದ್ಯಮಗಳಲ್ಲಿ ಕನ್ನಡಿಗರಿಗೆ ಆದ್ಯತೆ.

13)ಹಿಂದುಳಿದ 18 ವರ್ಷ ತುಂಬಿದ ವಿದ್ಯಾರ್ಥಿನಿಯರಿಗೆ ವಿದ್ಯುತ್ ಚಾಲಿತ ಮೊಪೆಡ್.

14)ಜಯದೇವ ಮಾದರಿ ಜಿಲ್ಲೆಗೊಂದು ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ .

15)ನಿಮ್ಹಾನ್ಸ್ ಮಾದರಿ 500 ಹಾಸಿಗೆಯುಳ್ಳ ಆಧುನಿಕ ನರವಿಜ್ಞಾನ ವೈದ್ಯಕೀಯ ಸಂಸ್ಥೆ .

16)ವೃತ್ತಿನಿರತ ವಕೀಲರಿಗೆ ರಕ್ಷಣೆ ಕಾಯ್ದೆ ಜಾರಿ.

17)ವಕೀಲರಿಗೆ ನೀಡುವ ಮಾಸಿಕ ಭತ್ಯೆ 2 ಸಾವಿರದಿಂದ 3 ಸಾವಿರಕ್ಕೆ ಏರಿಕೆ.

18)ಸಣ್ಣ ಉದ್ಯೋಗ ವ್ಯಾಪಾರ ನಡೆಸುವವರಿಗೆ 2 ಲಕ್ಷ ರೂ.ವರೆಗೆ ಸಹಾಯಧನ.

19)ಸಣ್ಣ ಉದ್ಯೋಗ ನಡೆಸುವ ಮಹಿಳಾ ಉದ್ಯಮಿಗಳಿಗೆ ಭದ್ರತೆ ರಹಿತ 2 ಕೋಟಿ ರೂ.ವರೆಗೆ ಬ್ಯಾಂಕ್​​ಗಳ ಮುಖೇನ ಸಾಲ.

20)ಒಂದು ವರ್ಷ ಕೌಶಲ್ಯ ತರಬೇತಿಯಲ್ಲಿ ತೊಡಗಿಸಿಕೊಳ್ಳುವ ಯುವಕ-ಯುವತಿಯರಿಗೆ ಮಾಸಿಕ 8 ಸಾವಿರ ರೂ.ಭತ್ಯೆ.

21)ರೈತ ಯುವಕರನ್ನು ಮದುವೆಯಾಗೋ ಯುವತಿಯರಿಗೆ 2 ಲಕ್ಷ ಪ್ರೋತ್ಸಾಹ ಧನ.

Leave a Reply

Your email address will not be published. Required fields are marked *