ಜೆಡಿಎಸ್‌ ಪಕ್ಷಕ್ಕೆ ನೈತಿಕತೆ ಇದ್ದರೆ ಪ್ರಜ್ವಲ್ ಅವರನ್ನು ಎಸ್ಐಟಿ ತನಿಖೆಗೆ ಒಪ್ಪಿಸಿ: ಕಾಂಗ್ರೆಸ್ ಪಕ್ಷದ ಬಗ್ಗೆ ಮಾತಾಡುವ ನೈತಿಕತೆ ಬಣಕನಹಳ್ಳಿ ನಟರಾಜ್ ಗೆ ಇಲ್ಲ: ಸೀಸಂದ್ರ ಗೋಪಾಲಗೌಡ ಟಾಂಗ್

ಕೋಲಾರ: ಮಾಜಿ ಸ್ಪೀಕರ್ ಹಾಗೂ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದ ಮಾಜಿ‌ ಶಾಸಕ ಕೆ.ಆರ್ ರಮೇಶ್ ಕುಮಾರ್ ಅವರು ಒಕ್ಕಲಿಗ ಸಮುದಾಯದ ಬಗ್ಗೆ ಬಹಳ ನೋವಿನಿಂದ ಮಾತಾಡಿದ್ದಾರೆ ಅದಕ್ಕೆ ಸಂಬಂದಿಸಿದಂತೆ ಎಂಎಲ್ಸಿ ಎಂ.ಎಲ್ ಅನಿಲ್ ಕುಮಾರ್ ಅದಕ್ಕೆ ಉತ್ತರವು ಕೊಟ್ಟಿದ್ದಾರೆ ನಿಮ್ಮಿಂದ ಒಕ್ಕಲಿಗರ ಬಗ್ಗೆ ಹೇಳಿಸಿಕೊಳ್ಳುವ ಅಗತ್ಯ ಕಾಂಗ್ರೆಸ್ ಪಕ್ಷಕ್ಕೆ ಇನ್ನೂ ಬಂದಿಲ್ಲ ಎಂದು ಜೆಡಿಎಸ್‌ ಕಾರ್ಯಾಧ್ಯಕ್ಷ ಬಣಕನಹಳ್ಳಿ ನಟರಾಜ್ ಹೇಳಿಕೆಗೆ ಬಂಗಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೀಸಂದ್ರ ಗೋಪಾಲಗೌಡ ತಿರುಗೇಟು ನೀಡಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಒಕ್ಕಲಿಗರು ಅಂದ ತಕ್ಷಣ ರೈತರು ಅಂತಹ ರೈತರಿಗೆ ಇವತ್ತು ಶ್ರೀನಿವಾಸಪುರ ಕ್ಷೇತ್ರದಲ್ಲಿ ಅನ್ಯಾಯವಾಗಿದೆ ಕೆಸಿ ವ್ಯಾಲಿ ನೀರು ಕೂಡ ಬರಲಿಲ್ಲ ರೈತರಿಗೆ ಸಹಕಾರಿ ಬ್ಯಾಂಕುಗಳಿಂದ ಸಾಲ ಸಿಗುತ್ತಾ ಇಲ್ಲ ಜಾತಿಯನ್ನು ಇಟ್ಟುಕೊಂಡು ವಿಧಾನಸಭಾ ಚುನಾವಣೆಯಲ್ಲಿ ಮತ ಕೇಳಿದ್ದೀರಾ ಅಲ್ಲವೇ ಯಾಕೆ ಇವತ್ತು ನೀರಿನ ಬಗ್ಗೆ ರೈತರ ಸಾಲಕ್ಕೆ ಸಂಬಂಧಿಸಿದಂತೆ ಪ್ರಶ್ನೆ ಮಾಡಲಿಲ್ಲ ಎಂದು ರಮೇಶ್ ಕುಮಾರ್ ನೋವಿನಿಂದ ಮಾತಾಡಿದ್ದಾರೆ ಒಕ್ಕಲಿಗ ಸಮುದಾಯಕ್ಕೆ ನೋವು ಅವಮಾನವಾಗುವ ರೀತಿಯಲ್ಲಿ ಅವರು ಮಾತಾಡಿಲ್ಲ ಆದರೆ ಜೆಡಿಎಸ್‌ ಬಿಜೆಪಿ ಪಕ್ಷದವರು ಚುನಾವಣಾ ಬಂಡವಾಳವಾಗಿ ಮಾಡಿಕೊಳ್ಳಲು ಅಪ್ರಚಾರ ಮಾಡಿದ್ದನ್ನು ಎಂಎಲ್ಸಿ ಅನಿಲ್ ಕುಮಾರ್ ಅದಕ್ಕೆ ಉತ್ತರ ಕೊಟ್ಟಿದ್ದಾರೆ ಎಂದು ಹೇಳಿದರು

ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಡಿಸಿಎಂ ಡಿ.ಕೆ ಶಿವಕುಮಾರ್, ರಮೇಶ್ ಕುಮಾರ್ ಸೇರಿದಂತೆ ಕಾಂಗ್ರೆಸ್ ಪಕ್ಷದ ಬಗ್ಗೆ ಮಾತಾಡುವ ನೈತಿಕ ಬಣಕನಹಳ್ಳಿ ನಟರಾಜ್ ಆಗಲಿ ಜೆಡಿಎಸ್‌ ಪಕ್ಷಕ್ಕೆ ಇಲ್ಲ ಜೆಡಿಎಸ್‌ ಪಕ್ಷದವರಿಗೆ ಏನಾದರೂ ನೈತಿಕತೆ ಇದ್ದರೆ ರಾಜ್ಯದ ಬಗ್ಗೆ ಗೌರವ ಇದ್ದು ಸಂವಿಧಾನಕ್ಕೆ ತಲೆಬಾಗಿದ್ದೇ ಆದರೆ ಮೊದಲು ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಎಲ್ಲಿದ್ದರೂ ಕರೆತಂದು ಎಸ್ಐಟಿ ತನಿಖೆಗೆ ಒಪ್ಪಿಸಿ ಅದನ್ನು ಬಿಟ್ಟು ಸುಖಾಸುಮ್ಮನೆ ಹೇಳಿಕೆ ಕೊಡುವುದು ಪ್ರತಿಭಟನೆ ನಡೆಸುವುದು ದೇಶದ ಪ್ರಧಾನ ಮಂತ್ರಿ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ ಪಕ್ಷಕ್ಕೆ ಶೋಭೆ ತರಲ್ಲ ಎಂದು ತಿಳಿಸಿದರು

ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಕೇಳಿಬಂದ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಆರೋಪ ಕುರಿತಂತೆ ರಾಜ್ಯ ಸರ್ಕಾರ ಈಗಾಗಲೇ ಪ್ರಕರಣವನ್ನು ಎಸ್ಐಟಿ ತನಿಖೆಗೆ ವಹಿಸಿದೆ ನಿಮ್ಮದೇ ಪಕ್ಷದ ರಾಜ್ಯ ಅಧ್ಯಕ್ಷ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ, ಉಪ್ಪು ತಿಂದವರು ನೀರು ಕುಡಿಯಲೇಬೇಕು, ತಪ್ಪು ಮಾಡಿದ್ದರೆ ಈ ನೆಲದ ಕಾನೂನು ಎಲ್ಲರಿಗೂ ಒಂದೇ ಶಿಕ್ಷೆಯಾಗುತ್ತದೆ, ಸರ್ಕಾರ ತನಿಖೆಗೆ ವಹಿಸಿದೆ, ತನಿಖೆಯಾಗಿ ವಾಸ್ತವಾಂಶ ಹೊರಬರಲಿ ಎಂದಿದ್ದರೂ ಇವತ್ತು ಯಾಕೆ ಪ್ರಜ್ವಲ್ ಅವರನ್ನು ತನಿಖೆಗೆ ಒಪ್ಪಸಲು ಹಿಂದೇಟು ಹಾಕಲಾಗುತ್ತಾ ಇದೆ ಇದರಿಂದ ಸತ್ಯ ಹೊರಬರುತ್ತದೆ ಎಂದು ಏನಾದರೂ ಭಯವೇ ಎಂದು ಬಣಕನಹಳ್ಳಿ ನಟರಾಜ್ ಅವರಿಗೆ ಗೋಪಾಲಗೌಡ ಟಾಂಗ್ ನೀಡಿದರು

Leave a Reply

Your email address will not be published. Required fields are marked *