ಇಂದು ನಾಡಿನಾದ್ಯಂತ ಮಕರ ಸಂಕ್ರಾಂತಿ ಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತಿದೆ. ಈ ಹಿನ್ನೆಲೆ ದೊಡ್ಡಬಳ್ಳಾಪುರ ನಗರದ ಜೆಡಿಎಸ್ ಕಚೇರಿಯಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಅಧ್ಯಕ್ಷ ಬಿ.ಮುನೇಗೌಡರ ನೇತೃತ್ವದಲ್ಲಿ ಸುಗ್ಗಿ ಹಬ್ಬ ಮಕರ ಸಂಕ್ರಾಂತಿಯನ್ನು ಆಚರಿಸಲಾಯಿತು.
ಎತ್ತಿನಗಾಡಿಯನ್ನು ಕಬ್ಬಿನ ಜೊಲ್ಲೆಗಳಿಂದ ಸಿಂಗರಿಸಿ, ಗೋ ಪೂಜೆ ನೆರವೇರಿಸಿ, ಎತ್ತುಗಳಿಗೆ ಗೆಣಸು, ಕಡಲೆಕಾಯಿ, ಕಬ್ಬು, ಅವರೆಕಾಯಿ ತಿನ್ನಿಸಿ, ಕಬ್ಬಿನ ಜೊಲ್ಲೆಗಳನ್ನು ಹಿಡಿದು ಮುನೇಗೌಡರೊಂದಿಗೆ ಪಕ್ಷದ ಮುಖಂಡರು, ಕಾರ್ಯಕರ್ತರು ಸಂಕ್ರಾಂತಿ ಕಾರ್ಯಕ್ರಮದಲ್ಲಿ ಸಂಭ್ರಮಿಸಿದರು.
ಈ ವೇಳೆ ಮಾತನಾಡಿ ಬಿ.ಮುನೇಗೌಡ ಅವರು, ರೈತ ಬೆಳೆದ ಬೆಳೆಗಳ ರಾಶಿ ಹಾಗೂ ಜಾನುವಾರುಗಳನ್ನು ಪೂಜೆಸುವ ಮಹತ್ವದ ದಿನವೇ ಸಂಕ್ರಾಂತಿ ಆಚರಣೆಯಾಗಿದೆ. ಜೆಡಿಎಸ್ ಪಕ್ಷಕ್ಕೂ ರೈತರಿಗೆ ಅವಿನಾಭಾವ ಸಂಬಂಧವಿದೆ. ಆ ಕಾರಣವೇ ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇಗೌಡ ಅವರನ್ನು ಮಣ್ಣಿನ ಮಗ ಎಂದು ರಾಷ್ಟ್ರ ಮಟ್ಟದಲ್ಲಿ ಕರೆಯಲಾಗಿದೆ ಎಂದರು.
ಅಲ್ಲದೆ ಪಂಜಾಬ್‌ನ ರೈತರು, ಅವರ ಕೃಷಿ ಪರ ಕಾಳಜಿಗೆ ಗೌರವ ಸೂಚಕವಾಗಿ ‘ದೇವೇಗೌಡ’ ಎಂಬ ಹೆಸರಿನ ಅಕ್ಕಿ ತಳಿಯೊಂದನ್ನು ನಾಮಕರಣ ಮಾಡಿದ್ದಾರೆ ಇದು ಜೆಡಿಎಸ್ ವರಿಷ್ಠರಿಗೆ ರೈತರ ಪರ ಕಾಳಜಿಗೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಎಚ್.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಸುಮಾರು 25 ಸಾವಿರ ಕೋಟಿ ಸಾಲ ಮನ್ನ ಮಾಡಿ ರೈತರ ನೆರವಿಗೆ ಬಂದವರು. ಅಂದಿನಿಂದ ಮಾಧ್ಯಮಗಳಲ್ಲಿ ರೈತರ ಆತ್ಮಹತ್ಯೆಯ ವರದಿಗಳು ಕಡಿಮೆಯಾಗಿದೆ ಎಂದರು.
ಇನ್ನೂ ಇತ್ತೀಚಿಗಿನ ದೊಡ್ಡಬಳ್ಳಾಪುರ ಜೆಡಿಎಸ್ ಮುಖಂಡರ ಬಣ ಬಡಿದಾಟದ ಕುರಿತಂತೆ ಕಾಂಗ್ರೆಸ್ ಲೇವಡಿ ಮಾಡಿರುವ ಕುರಿತಂತೆ ಪ್ರತಿಕ್ರಿಯೆ ನೀಡಿದ ಬಿ.ಮುನೇಗೌಡ ಅವರು, ಮನೆ ಎಂದ ಮೇಲೆ ಅಲ್ಪಸ್ವಲ್ಪ ಬೇಸರ ಇರುತ್ತೆ.. ಆದರೆ ಎಲ್ಲರೂ ಒಂದಾಗಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಲು ಬದ್ದರಾಗಿದ್ದೇವೆ. ಆದರೆ ಕಾಂಗ್ರೆಸ್ ನವರ ಕುರ್ಚಿ ಕದನ ನೋಡಿದರೆ, 2028 ರ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ಬರುವ ವಿಶ್ವಾಸ ಅವರಿಗೆ ಇಲ್ಲವಾಗಿದ್ದು ಕುಮಾರಸ್ವಾಮಿ ಅವರಿಗೆ ಈ ಮೂಲಕ ಆಹ್ವಾನ ನೀಡುತ್ತಿದ್ದಾರೆ ಎಂದರು.
ಈ ವೇಳೆ ಜೆಡಿಎಸ್ ದೊಡ್ಡಬಳ್ಳಾಪುರ ತಾಲೂಕು ಅಧ್ಯಕ್ಷ ಲಕ್ಷ್ಮೀಪತಯ್ಯ, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ದೇವರಾಜಮ್ಮ, ವಕ್ತಾರ ಕುಂಟನಹಳ್ಳಿ ಮಂಜುನಾಥ್, ನಗರಸಭೆ ಸದಸ್ಯರಾದ ತ.ನ.ಪ್ರಭುದೇವ್, ವಡ್ಡರಹಳ್ಳಿ ರವಿಕುಮಾರ್, ಮುಖಂಡರಾದ ರಾಜಘಟ್ಟ ಹರೀಶ್, ತಳವಾರ ನಾಗರಾಜ್, ಜಗನ್ನಾಥ ಚಾರ್, ಸತೀಶ್, ಭಾಗ್ಯಮ್ಮ ಶಶಿಕಲಾ, ರಾಮಕೃಷ್ಣ, ಸಂತೋಷ್, ಭಾನು, ಕೆಂಪೇಗೌಡ, ವಿನಯ್, ಸುರೇಶ ಉಪಸ್ಥಿತರಿದ್ದರು.
ಮಹಿಳೆಯರು ಎಲ್ಲ ವಲಯಗಳಲ್ಲಿ ತಮ್ಮ ಛಾಪು ಮೂಡಿಸಿದ್ದು, ಮಹಿಳಾ ಸಬಲೀಕರಣದ ಆಶಯ ಸಾಕಾರದತ್ತ ಸಾಗುತ್ತಿದೆ ಎಂದು ಆರಕ್ಷಕ ನಿರೀಕ್ಷಕರಾದ ಎನ್.ಶೋಭಾ…
ಮನೆಯ ಹೊಸ್ತಿಲಿನಲ್ಲಿ ಪೂಜೆಗಾಗಿ ಇಟ್ಟಿದ್ದ ಒಣಗಿದ ದಾಸವಾಳದ ಹೂವನ್ನು ಆಟವಾಡುತ್ತಾ ನುಂಗಿದ ಆರುವರೆ ತಿಂಗಳ ಕಂದಮ್ಮ ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ…
ಹುಬ್ಬಳ್ಳಿಯಲ್ಲಿ ಕಮರ್ಷಿಯಲ್ ಟ್ಯಾಕ್ಸ್ ಡಿಸಿ ಆರು ಲಕ್ಷ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಭರತ್ ಹೆಗ್ಗಡೆ, ಲೋಕಾಯುಕ್ತ ಬಲೆಗೆ…
ಭಾರತದ ಅಗ್ರ ಪೀಠೋಪಕರಣ ಬ್ರ್ಯಾಂಡ್ ಆಗಿರುವ ರಾಯಲ್ ಓಕ್ ಫರ್ನಿಚರ್, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ನೂತನ ಮಳಿಗೆಗೆ ಚಾಲನೆ…
ಎಲ್ಲಾ ವಲಯಗಳಿಗೂ ಯಾವುದೇ ಅಡೆತಡೆ ಇಲ್ಲದೆ ಎಲ್.ಪಿ.ಜಿ ಸರಬರಾಜು ಮಾಡಲಾಗುತ್ತಿದೆ ಅಲ್ಲದೇ ವಿಶೇಷವಾಗಿ *ಆಟೋ ಎಲ್.ಪಿ.ಜಿ*.ಗೆ ಯಾವುದೇ ರೀತಿಯ ಕೊರತೆ…
Cheap Emotional Support Animal Letter: Affordable ESA Documentation Affordable Emotional Support Animal Letters for Enhanced…