ಜೆಡಿಎಸ್‌ ಎಲ್ಲಿದೆ ಎಂದವರಿಗೆ ಕ್ಷೇತ್ರದ ಮತದಾರರು ತಕ್ಕ ಉತ್ತರ ಕೊಡಬೇಕು: ಎಂಪಿ ಮುನಿಸ್ವಾಮಿ

ಕೋಲಾರ: ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿ ಗೆಲುವಿಗೆ ಪೂರಕವಾದ ವಾತಾವರಣವಿದ್ದು, ರಾಜ್ಯದಲ್ಲಿ ಜೆಡಿಎಸ್ ಪಕ್ಷವು​ ಎಲ್ಲಿದೆ ಎಂದು ಪ್ರಶ್ನಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕ್ಷೇತ್ರದ ಮತದಾರರು ಚುನಾವಣೆಯಲ್ಲಿ ತಕ್ಕ ಉತ್ತರ ನೀಡಬೇಕು ಎಂದು ಸಂಸದ ಎಸ್​.ಮುನಿಸ್ವಾಮಿ ತಿಳಿಸಿದರು.

ನಗರದ ಹೊರವಲಯದ ನಾರಾಯಣಿ ಕಲ್ಯಾಣ ಮಂಟಪದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಜೆಡಿಎಸ್​ ಮತ್ತು ಬಿಜೆಪಿ ಸಮನ್ವಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಜೆಡಿಎಸ್​ ಎಲ್ಲಿದೆ ಎಂದು ಸಿದ್ದರಾಮಯ್ಯ ಅವರು ಪ್ರಶ್ನಿಸಿದರು, ಅಲ್ಲಿಂದಲೇ ನಾಯಕನಾಗಿ ತಯಾರಾಗಿ ಬಂದಿರೊದು ಅನ್ನೊದ್ನ ಸಿದ್ದರಾಮಯ್ಯ ಮರೆಯಬಾರದು. ನನಗೆ ಟಕೆಟ್​ ಸಿಕ್ಕಿಲ್ಲ ಅಂತ ಕುಗ್ಗಿಲ್ಲ, ಸಾಮಾನ್ಯ ಕಾರ್ಯಕರ್ತನಂತೆ ಕೆಲಸ ಮಾಡುತ್ತೆನೆ. ಬೂತ್​ ಮಟ್ಟದಿಂದ ಕೆಲಸ ಮಾಡಬೇಕು, ಸಣ್ಣ ಪುಟ್ಟ ವ್ಯತ್ಯಾಸಗಳನ್ನು ಸರಿಪಡಿಸಿಕೊಳ್ಳಬೇಕು ಎಂದರು.

ರಾಜ್ಯದ ಕಾಂಗ್ರೆಸ್​ ಸರ್ಕಾರದ ವಿರುದ್ಧ ಜನತೆ ತಿರುಗಿ ಬಿದ್ದಿದ್ದಾರೆ ಎಂಬುದು ಸಿದ್ದರಾಮಯ್ಯನವರಿಗೆ ಅರಿವಿಲ್ಲದಂತಾಗಿದೆ ಕಳೆದ ಲೋಕಸಭೆ ಚುನಾವಣೆಯಲ್ಲಿ ಕ್ಷೇತ್ರದ ಜನತೆ ಮತಹಾಕಿ ಗೆಲ್ಲಿಸಿದ್ದಾರೆ. ಅವರ ಋಣ ತೀರಿಸುವ ನಿಟ್ಟಿನಲ್ಲಿ ಸೇವೆಯಲ್ಲಿ ನಿರತನಾಗಿದ್ದೇನೆ. ಟಿಕೆಟ್​ ಕೈ ತಪ್ಪಿದೆ ಎಂದು ಸುಮ್ಮನಿರುವುದಿಲ್ಲ, ಮೈತ್ರಿ ಅಭ್ಯರ್ಥಿ ಮುಖಂಡರು ಯಾರು ಕೋಲಾರ ಕ್ಷೇತ್ರ ಬಿಟ್ಟು ಹೋಗಬಾರದು. ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಬೇಕು. ಮುಖಂಡರು ಸಹ ಯಾರು ಕ್ಷೇತ್ರ ಬಿಟ್ಟು ಹೋಗಬಾರದು, ಮಲ್ಲೇಶ್​ ಬಾಬು ಗೆಲುವಿಗೆ ಶ್ರಮಿಸಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ದಾಸರಹಳ್ಳಿ ಕ್ಷೇತ್ರದ ಶಾಸಕ ಮುನಿರಾಜು ಮಾತನಾಡಿ, ದೇಶ ಮತ್ತು ರಾಜ್ಯದ ಹಿತದೃಷ್ಟಿಯಿಂದ ಜೆಡಿಎಸ್​ ಬಿಜೆಪಿ ಮೈತ್ರಿಯಾಗಿದ್ದು ರಾಜ್ಯದ ಕಾಂಗ್ರೆಸ್​ ಸರಕಾರದ ವಿರುದ್ದ ಜನ ಬೇಸತ್ತು ಹೋಗಿದ್ದಾರೆ ಎನ್​.ಡಿ.ಎ ಗೆ ಕೋಲಾರ ಮೊದಲ ಜಯ ಸಿಕ್ಕಿದೆ ಮುಂದೆ ಮೈತ್ರಿಕೂಟದ ಜೋಡೆತ್ತು ಗಳ ರೀತಿಯಲ್ಲಿ ಕೆಲಸ ಮಾಡಲಿದ್ದಾರೆ ಇದಕ್ಕಾಗಿ ಎರಡು ಪಕ್ಷಗಳ ತಲಾ ಹತ್ತು ಜನರ ಸಮನ್ವಯ ಸಮಿತಿ ರಚಿಸಿ ಚುನಾವಣೆ ಎದುರಿಸುವ ಬಗ್ಗೆ ರೂಪರೇಷಗಳನ್ನು ಸಿದ್ದಪಡಿಸಿಕೊಳ್ಳಿ ಎಂದರು.

ಈ ಸಂದರ್ಭದಲ್ಲಿ ಜೆಡಿಎಸ್​ ಜಿಲ್ಲಾಧ್ಯಕ್ಷ ಹಾಗೂ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಮಾತನಾಡಿ, ಕಾಂಗ್ರೆಸ್​ನ ಘಟಬಂಧನ್​ ಮಿತ್ರರೆಲ್ಲ ನಮ್ಮವರೆ, ಅವರ ಬೆಂಬಲವು ನಮಗೆ ಸಿಗುತ್ತದೆ, ನಮ್ಮ ಪಕ್ಷಕ್ಕೂ ಕೋಲಾರ ಕ್ಷೇತ್ರ ಗೆಲುವ ಅತಗತ್ಯವಾಗಿದೆ ಈ ಬಗ್ಗೆ ಈಗಾಗಲೇ ಸಭೆಗಳನ್ನು ನಡೆಸಿ ಮುಖಂಡರಿಗೆ ಸೂಚನೆಗಳನ್ನು ನೀಡಲಾಗಿದೆ. ಕ್ಷೇತ್ರದಲ್ಲಿ ಉಭಯ ಪಕ್ಷಗಳ ಮೈತ್ರಿ ಧರ್ಮ ಪಾಲನೆಯಾಗುತ್ತದೆ ಎಂದು ನಂಬಿಕೆಯಿದೆ. 4 ಲಕ್ಷಕ್ಕೂ ಅಧಿಕ ಮತಗಳಿಂದ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಬೇಕು. ವ್ಯಕ್ತಿಗತ ಟೀಕೆ, ಆರೋಪ ಮಾಡುವುದು ಬೇಡ ಎಂದು ಸಲಹೆ ನೀಡಿದರು.

ವಿಧಾನ ಪರಿಷತ್​ ಸದಸ್ಯ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, 50 ವರ್ಷಗಳ ಕಾಲ ಅಧಿಕಾರದಲ್ಲಿ ಕಾಂಗ್ರೆಸ್​ ಸರ್ಕಾರವು ಸಂವಿಧಾನದಡಿ ಕೆಲಸ ಮಾಡಲಿಲ್ಲ, ದೇಶವನ್ನು ವಿಭಜನೆ ಮಾಡುವ ರೀತಿ ಕೆಲಸ ಮಾಡಿತು ಅವ್ಯವಸ್ಥೆಯನ್ನು ಸುಧಾರಣೆ ಮಾಡಲು ಜಾತ್ಯತೀತ ಪಕ್ಷಗಳು ಒಂದಾವು. ಕಳೆದ ಚುನಾವಣೆಯಲ್ಕಿ ಕಾಂಗ್ರೆಸ್​ ಜೆಡಿಎಸ್​ನೊಂದಿಗೆ ಮೈತ್ತಿಯಾಗಿತ್ತು. ಆಗ ದಳದ ನಾಯಕರು ಬಿಜೆಪಿಗೆ ಸಹಾಯ ಮಾಡಿದರು. ಅಲ್ಲಿ ಗೊತ್ತಾಯಿತು ಜೆಡಿಎಸ್​ನಲ್ಲೂ ಕಾಂಗ್ರೆಸ್​ ವಿರೋಧಿಗಳು ಇದ್ದಾರೆ ಅಂತ. ನಾವೀಗ ಸಾಮಾಜಿಕ ಜಾಲತಾಣ ಯುಗದಲ್ಲಿ ಇದ್ದೆವೆ, ಕೈಗನ್ನಡಿಯಂತೆ ವ್ಯವಸ್ಥೆಯನ್ನು ಜಾಲತಾಣದಲ್ಲಿ ಕಾಣಬಹುದು. ಇಂದಿರಾಗಾಂಧಿ ಆಡಳಿತ ಅವಧಿಯಲ್ಲಿ ಹೆಸರಿಗೆ ಮತ ಹಾಕುತ್ತಿದ್ದರು. ಆದರೆ ಈಗ ಅಭಿವೃದ್ಧಿ ನೋಡಿ ಮತ ಹಾಕುತ್ತಿದ್ದಾರೆ. ಇದಕ್ಕೆ ಮೋದಿ ಕಾರಣ, ಎಲ್ಲ ರಾಷ್ಟ್ರಗಳು ಒಪ್ಪುವ ವ್ಯಕ್ತಿ ಮೋದಿ ಅವರು ಮತ್ತೆ ಪ್ರಧಾನಿಯಾಗಬೇಕು ಎಂದರು.

ಕಾಂಗ್ರೆಸ್​ ಅಧಿಕಾರದಲ್ಲಿ ಮುಂದುವರೆದಿದ್ದರೆ ಪಾಕಿಸ್ತಾನ ಅಫ್ಘಾನಿಸ್ತಾನ ದೇಶಕ್ಕೆ ಬಂದಿರುವ ಪರಿಸ್ಥಿತಿ ಭಾರತದಲ್ಲೂ ಎದುರಾಗುತ್ತಿತ್ತು. ಅದನ್ನು ದೇಶದ ಜನ ಮೋದಿಯವರನ್ನು ಪ್ರಧಾನಿಯನ್ನಾಗಿ ಮಾಡಿ ತಪ್ಪಿಸಿದ್ದಾರೆ. ಮೈತ್ರಿಯು ಲವ್​ ಮ್ಯಾರೇಜ್ ಅಲ್ಲ ಇದು ಅರೆಂಜ್​ ಮ್ಯಾರೇಜ್ ದೇವೇಗೌಡರಿಗೆ ಗರ್ವಭಂಗ ಮಾಡಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ, ಸಿದ್ದರಾಮಯ್ಯ ಅವರಿಗೆ ಮೊದಲು ಗರ್ವಭಂಗ ಮಾಡಬೇಕು. ಚುನಾವಣೆಯಲ್ಲಿ ಗೆಲ್ಲಿಸಿ ಸಿಹಿ ತಿನ್ನಬೇಕು, ಸೀಟು ಕಳೆದುಕೊಂಡು ನನ್ನ ತಮ್ಮ ಮುನಿಸ್ವಾಮಿಯೇ ನಗುನಗುತ್ತಾ ಇದ್ದಾರೆ. ಗೆಲುವು ನಿಮದೆ ಸದಾ ನಗುಮುಖದಲ್ಲಿ ಇರಬೇಕು ಎಂದು ಅಭ್ಯರ್ಥಿ ಮಲ್ಲೇಶ್ ಬಾಬುಗೆ ತಿಳಿಸಿದರು.

ಶಾಸಕ ಸಮೃದ್ಧಿ ಮಂಜುನಾಥ್​ ಮಾತನಾಡಿ, ಕಾಂಗ್ರೆಸ್​ ಪಕ್ಷದಲ್ಲಿ ಕೋಲಾರದಲ್ಲಿ ಗಂಡಸರು ಯಾರು ಸಿಕ್ಕಿಲ್ಲ, ಅದ್ದರಿಂದ ಅಭ್ಯರ್ಥಿಯನ್ನು ಬೆಂಗಳೂರಿಂದ ಕರೆದುಕೊಂಡು ಬಂದು ಕಣಕ್ಕೆ ಇಳಿಸಿದ್ದಾರೆ. ಅವರಿಗೆ ಬೆಂಬಲ ನೀಡಿದರೆ ವ್ಯರ್ಥವಾಗುತ್ತದೆ. ಸ್ಥಳೀಯ ಮಲ್ಲೇಶ್​ ಬಾಬುಗೆ ಬೆಂಬಲ ನೀಡಬೇಕು ಎಲ್ಲರೂ ದೊಡ್ಡ ಮನಸ್ಸಿನಿಂದ ಚುನಾವಣೆಗೆ ಸಿದ್ದರಾಗಿದ್ದೆವೆ, ಜೆಡಿಎಸ್​ನಲ್ಲೂ ಮೂರು ಮಂದಿ ಅಕಾಂಕ್ಷಿಗಳು ಇದ್ದು ಟಿಕೆಟ್​ಗಾಗಿ ಹೈಡ್ರಾಮ ಮಾಡಲಿಲ್ಲ. ಒಮ್ಮತದ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದ್ದು ಪ್ರಮಾಣಿಕವಾಗಿ ಗೆಲುವಿಗೆ ಎಡರೂ ಪಕ್ಷಗಳ ಮುಖಂಡರು, ಕಾರ್ಯಕರ್ತರು ದುಡಿಯಬೇಕು ಎಂದು ಹೇಳಿದರು.

ಮಾಜಿ ಸಚಿವ ವರ್ತೂರು ಆರ್​.ಪ್ರಕಾಶ್​ ಮಾತನಾಡಿ, ಚುನಾವಣೆಯಲ್ಲಿ ಸಮನ್ವಯ ಸಾಧನೆಯಾದಾಗ ಮಾತ್ರ ಮೈತ್ರಿ ಅಭ್ಯರ್ಥಿ ಗೆಲುವು ಖಚಿತ. ಕೋಲಾರ ಕ್ಷೇತ್ರದಲ್ಲಿ ಭಿನ್ನಾಭಿಪ್ರಾಯಗಳು ಇಲ್ಲ, ಬೇರೆ ಕ್ಷೇತ್ರಗಳಲ್ಲಿ ಬಂಡಾಯದ ಭಾವುಟಗಳು ಹಾರಾಡುತ್ತಿವೆ,
ಕಳೆದ ವಿಧಾನಸಭೆಯಲ್ಲಿ ಸೋತಿರುವ ಪ್ರತಿಕಾರ ತಿರಿಸಿಕೊಳ್ಳಲು ಕಾಂಗ್ರೆಸ್​ನ್ನು ಸೋಲಿಸಬೇಕು
ಲೋಕಸಭಾ ಕ್ಷೇತ್ರದಲ್ಲಿ ಪರಿಶಿಷ್ಟ ನಾಯಕತ್ವ ಕೊರತೆಯಿದೆ. ಎಸ್ಸಿ, ಎಸ್ಟಿ ಸೇರಿದಂತೆ ಅಲ್ಪಸಂಖ್ಯಾತರ ಮತಗಳನ್ನು ಸೆಳೆಯಬೇಕು. ಎಂಎಲ್​ಎ, ಎಂಎಲ್ಸಿಗಳಾಗಿ ಕೆಲವರು ಒಂದು ವರ್ಷದಿಂದ ಸೋಕಿನಿಂದ ಓಡಾಡುತ್ತಿದ್ದಾರೆ. ಇದನ್ನು ಅಣಗಿಸಬೇಕು ಎಂದರು.

ಎನ್​ಡಿಎ ಅಭ್ಯರ್ಥಿ ಮಲ್ಲೇಶ್​ ಬಾಬು ಮಾತನಾಡಿ, ಎರಡು ಬಾರಿ ಸೋತಿರುವ ನೋವಿದೆ, ಆದರೂ ಎರಡೂ ಪಕ್ಷಗಳ ಮುಖಂಡರು, ನಾಯಕರು ನಂಬಿಕೆ ಇಟ್ಟು ಕಣಕ್ಕೆ ಇಳಿಸಿದ್ದಾರೆ, ಮತದಾರ ಪ್ರಭುಗಳು ಅಶೀರ್ವಾಧಿಸಬೇಕು ಚುನಾವಣೆಗೆ ಮೋದಿ ಅವರು ಸ್ಪರ್ಧಿಸಿದ್ದಾರೆ ಎಂದು ಭಾವಿಸಿ ಮತ ಹಾಕಿ. ಮೋದಿ ಕೈ ಬಲಪಡಿಸಲು ಕ್ಷೇತ್ರದಲ್ಲಿ ಗೆಲುವು ಆಗಬೇಕು. ಅಧಿಕ ಮತಗಳಿಂದ ಗೆಲ್ಲಿಸುವ ಮೂಲಕ ಜನತೆಯ ಸೇವೆ ಮಾಡಲು ಶಕ್ತಿ ನೀಡಬೇಕು ಎಂದು ಮನವಿ ಮಾಡಿದರು.

ಎಂಎಲ್ಸಿಗಳಾದ ಇಂಚರ ಗೋವಿಂದರಾಜು, ಕೇಶವ ಪ್ರಸಾದ್​, ವೈ.ಎ.ನಾರಾಯಣಸ್ವಾಮಿ, ಶಾಸಕ ರವಿ ಕುಮಾರ್​, ಮಾಜಿ ಶಾಸಕರಾದ ಜೆ.ಕೆ ಕೃಷ್ಣಾರೆಡ್ಡಿ, ರಾಜಣ್ಣ, ಕೆ.ಎಸ್ ​ಮಂಜುನಾಥ್​ ಗೌಡ, ವೆಂಕಟಮುನಿಯಪ್ಪ, ವೈ ಸಂಪಂಗಿ, ಎಂ.ನಾರಾಯಣಸ್ವಾಮಿ, ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಕೆ.ಎನ್​.ವೇಣುಗೋಪಾಲ್​ ಮುಖಂಡರಾದ ಸಿಎಂಆರ್​ ಶ್ರೀನಾಥ್​, ಕೆ.ಚಂದ್ರಾರೆಡ್ಡಿ, ವಡಗೂರು ಹರೀಶ್​, ವಕ್ಕಲೇರಿ ರಾಮು, ಕಾಡೇನಹಳ್ಳಿ ನಾಗರಾಜ್​, ಗಾಯಿತ್ರಿ ಮುತ್ತಪ್ಪ ಮುಂತಾದವರು ಹಾಜರಿದ್ದರು.

Leave a Reply

Your email address will not be published. Required fields are marked *