2023ರ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ, ಈಗಾಗಲೇ ಆಯಾ ಪಕ್ಷಗಳಿಂದ ಟಿಕೆಟ್ ಪಡೆದ ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸುತ್ತಿದ್ದಾರೆ.
ಏಪ್ರಿಲ್ 15ರ ಶನಿವಾರದಂದು ತಾಲೂಕಿನ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ ಜೆಡಿಎಸ್ ಅಭ್ಯರ್ಥಿ ಬಿ.ಮುನೇಗೌಡ, ಸತತವಾಗಿ ಮೂರು ಬಾರಿ ಸ್ಪರ್ಧಿಸಿ ಹ್ಯಾಟ್ರಿಕ್ ಸೋಲನ್ನ ಅನುಭವಿಸಿ, ನಾಲ್ಕನೇ ಬಾರಿಗೆ ಕ್ಷೇತ್ರದಲ್ಲಿ ಸ್ಪರ್ಧಿಸಿ ಗೆಲ್ಲಲೇಬೇಕು ಎಂದು ಪಣ ತೊಟ್ಟಿರುವ ಜೆಡಿಎಸ್ ಅಭ್ಯರ್ಥಿ ಬಿ.ಮುನೇಗೌಡ.
ಬಿ.ಮುನೇಗೌಡ ಸ್ಪರ್ಧೆಗೆ ಸ್ವಪಕ್ಷದಿಂದಲೇ ಅಪಸ್ವರ ಕೇಳಿ ಬಂದಿತ್ತು ವರಿಷ್ಠರು ಮಧ್ಯಸ್ಥಿಕೆ ವಹಿಸಿ ಭಿನ್ನಮತ ಶಮನ ಮಾಡಿ ಕೊನೆಗೆ ಮುನೇಗೌಡರಿಗೆ ಟಿಕೆಟ್ ನೀಡಿತು. ಒಂದು ಕಡೆ ಕ್ಷೇತ್ರದ ಮತದಾರರು ಅನುಕಂಪ ಆಧಾರದ ಮೇಲೆ ಮತ ನೀಡುತ್ತಾರೆ ಎಂದು ವರಿಷ್ಠರು ಗಮನಿಸಿ ಟಿಕೆಟ್ ನೀಡಿದ್ದಾರೆ ಎಂಬ ಕೂಗು ಸಹ ಕೇಳಿಬರುತ್ತಿದೆ. ಏನೇ ಆಗಲಿ ಈ ಬಾರಿ ಆದರೂ ಕ್ಷೇತ್ರದ ಜನತೆ ಬಿ.ಮುನೇಗೌಡರಿಗೆ ಆರ್ಶೀವಾದ ಮಾಡುತ್ತಾರಾ? ಎಂಬುದನ್ನು ಕಾದು ನೋಡಬೇಕಿದೆ.
ನಾಮಪತ್ರ ಸಲ್ಲಿಕೆ ವೇಳೆ ಮುನೇಗೌಡ ಪತ್ನಿ ಪದ್ಮಾವತಿ ಹಾಗೂ ಮಕ್ಕಳು ಉಪಸ್ಥಿತರಿದ್ದರು.