ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಬಗರ್ ಹುಕುಂ ಸಾಗುವಳಿದಾರರ ಸಭೆ ಇದೇ ತಿಂಗಳ 28 ರಂದು ನಡೆಯಲಿದೆ ಎಂದು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಮುಖಂಡ ಕುಮಾರ್ ಸಮತಳ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರ್ಜಿ ಸಲ್ಲಿಸಿ ಭೂಮಿ ಬರುತ್ತದೆಂದು ಸುಮ್ಮನೆ ಕುಳಿತರೆ ಭೂಮಿ-ವಸತಿ ಜಾಗಗಳು ತಾನೇ ತಾನಾಗಿ ಬರುವುದಿಲ್ಲ. ಈ ಹಿನ್ನೆಲೆಯಲ್ಲಿ ಭೂಮಿ-ವಸತಿ ವಂಚಿತರು ಭೂಮಿ ಪಡೆಯಲು ಏನುಮಾಡಬೇಕು? ಇದಕ್ಕಾಗಿ ಯಾವ ರೀತಿಯ ಹೋರಾಟ-ಕಾರ್ಯಕ್ರಮ ರೂಪಿಸಬೇಕೆಂದು ಚರ್ಚೆ ಮಾಡಿ ತೀರ್ಮಾನಿಸಬೇಕಾಗಿದೆ. ಆದ್ದರಿಂದ ಜು.28ರ ಶುಕ್ರವಾರ ದೊಡ್ಡಬಳ್ಳಾಪುರ ನಗರದ ಪ್ರವಾಸಿ ಮಂದಿರದಲ್ಲಿ ಬೆಳಿಗ್ಗೆ 10-30 ಕ್ಕೆ ಭೂಮಿ-ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಸಭೆ ಕರೆಯಲಾಗಿದ್ದು, ಈ ಸಭೆಯಲ್ಲಿ ರಾಜ್ಯ ಮುಖಂಡರುಗಳು ಹಾಗೂ ಭೂಮಿ ಮತ್ತು ವಸತಿಗಾಗಿ ಹೋರಾಟ ನಡೆಸುತ್ತಿರುವ ಸ್ಥಳೀಯ ಸಂಘಟನೆಗಳ ಮುಖಂಡರುಗಳು ಸಹ ಭಾಗವಹಿಸಲಿದ್ದಾರೆ. ಆದ್ದರಿಂದ ಭೂಮಿಗಾಗಿ ಫಾರಂ ನಂ. 50, 53, ಮತ್ತು 57 ರಲ್ಲಿ ಅರ್ಜಿ ಸಲ್ಲಿಸಿರುವ ಪ್ರತಿಯೊಬ್ಬರೂ ಮತ್ತು ವಸತಿಗಾಗಿ 94ಸಿ 94ಸಿಸಿ ಹಾಗೂ ಅರಣ್ಯ ಹಕ್ಕು ಕಾಯ್ದೆಯನ್ವಯ ಅರ್ಜಿ ಸಲ್ಲಿಸಿ ಭೂಮಿಯ ಸಮಸ್ಯೆಗಳನ್ನು ಎದುರಿಸುತ್ತಿರುವ ನೊಂದವರೆಲ್ಲರೂ ಈ ಸಭೆಯಲ್ಲಿ ಪಾಲ್ಗೊಳ್ಳಲು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯು ಈ ಮೂಲಕ ಮನವಿ ಮಾಡಿಕೊಳ್ಳುತ್ತದೆ.
ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಹಲವು ವರ್ಷಗಳಿಂದ ರಾಜ್ಯದ ಭೂಮಿ ಮತ್ತು ವಸತಿ ರಹಿತರ ಧ್ವನಿಯಾಗಿ ಹೋರಾಡುತ್ತಿದೆಯಲ್ಲದೆ ಈ ನಿಟ್ಟಿನಲ್ಲಿ ಸಮಿತಿಯು ಹಲವು ಮೂಲಭೂತ ಬದಲಾವಣೆಗಾಗಿ ಸರ್ಕಾರಗಳ ಮೇಲೆ ಹಲವು ರೀತಿಯ ಒತ್ತಾಯಗಳನ್ನು ಮಾಡುತ್ತಾ ಬರುತ್ತಿದೆ.
ಈ ನೆಲದ “ಪ್ರತಿಯೊಂದು ಕುಟುಂಬಕ್ಕೆ ಗೌರವಯುತವಾಗಿ ಬದುಕಿ ಬಾಳಲು ಸ್ವಂತ ಮನೆ, ದುಡಿದು ಬದುಕಲು ಭೂಮಿ” ದೊರೆಯಬೇಕು ಎಂದು ನಮ್ಮ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾಗಿದ್ದ ಸ್ವಾತಂತ್ರ್ಯ ಸೇನಾನಿ ದಿವಂಗತ ಎಚ್.ಎಸ್.ದೊರೆಸ್ವಾಮಿಯವರು ಪ್ರತಿಪಾದಿಸಿದಂತೆ ಭೂಮಿ-ವಸತಿಯು ಎಲ್ಲಾ ಜಾತಿ ಜನರ ಹಕ್ಕೂ ಆಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕಳೆದ ಎರಡು-ಮೂರು ತಲೆ ಮಾರುಗಳಿಂದ ಸರ್ಕಾರಿ, ಗೋಮಾಳ, ಖರಾಬ್ ಇನ್ನಿತರೆ ಭೂಮಿಗಳನ್ನು ಹಸನುಗೊಳಿಸಿ ಬದುಕು ಸಾಗಿಸುತ್ತಿರುವ ಸಾವಿರಾರು ಕುಟುಂಬಗಳು ಫಾರಂ. 50, 53 ಹಾಗೂ 57 ರಲ್ಲಿ ಸರ್ಕಾರಕ್ಕೆ ಅರ್ಜಿಗಳನ್ನು ಸಲ್ಲಿಸಿ ಸಾಗುವಳಿ ಮಾಡುತ್ತಿರುವ ಭೂರಹಿತರಿಗೆ ಸರ್ಕಾರ ಭೂ ಮಂಜೂರಾತಿ ಮಾಡುತ್ತಿಲ್ಲ. ಇದಕ್ಕಾಗಿ ಡಿ.ಸಿ., ತಹಸೀಲ್ದಾರ್ ಕಚೇರಿ ಮತ್ತು ಶಾಸಕರ ಕಚೇರಿಗಳನ್ನು ಅಲೆದಲೆದು ಬಸವಳಿದಿದ್ದಾರೆ.
ಉಳುವವನೇ ಭೂಒಡೆಯ ಘೋಷಣೆಯಂತೆ ಸಾಮಾಜಿಕವಾಗಿ-ಆರ್ಥಿಕವಾಗಿ ಹಿಂದುಳಿದವರಿಗೆ ಭೂಮಿ ನೀಡದೆ ಸರ್ಕಾರಗಳು ಕಾರ್ಪೋರೇಟ್ ಖುಳಗಳಿಗೆ, ಉಳ್ಳವರಿಗೆ, ಟ್ರಸ್ಟ್ ಗಳಿಗೆ ಮತ್ತು ಜಾತಿವಾರು ಮಠಗಳಿಗೆ, ರಾಜಕಾರಣಿಗಳು ಮತ್ತು ಇವರ ಹಿಂಬಾಲಕರಿಗೆ ಹಾಗೂ ಹಣ ನೀಡಿದವರಿಗೆ ಭೂಮಿ-ವಸತಿ ಜಾಗಗಳು ಮಂಜೂರು ಮಾಡುತ್ತಿವೆ. ಆದರೆ ಇದಕ್ಕಾಗಿ ಅರ್ಜಿ ಸಲ್ಲಿಸಿ ಹಲವು ದಶಕಗಳು ಕಳೆದರೂ ನೆತ್ತಿಯ ಮೇಲೊಂದು ಸೂರು ಮತ್ತು ಉಳುಮೆ ಮಾಡುತ್ತಿರುವ ಭೂಮಿಗಳು ಬಡ ಜನರಿಗೆ ದೊರೆಯುತ್ತಿಲ್ಲ. ಶ್ರೀಮಂತರಿಗೆ ಭೂಮಿ ಕೊಡಲು ಯಾವುದೇ ಕಾನೂನು ತೊಡಕಿಲ್ಲದಿದ್ದರೂ ಬಡವರಿಗೆ ಭೂಮಿ-ವಸತಿ ನೀಡಲು ನೂರೆಂಟು ನೆಪಗಳನ್ನು ಸರ್ಕಾರ ಹೇಳುತ್ತಿದೆ.
ಹೆಚ್ಚಿನ ಮಾಹಿತಿಗಾಗಿ:
ರಾಜುಸಣ್ಣಕ್ಕಿ-9986573503
ಗುರು- 9620824368
ರಮೇಶ್ ಸಂಕ್ರಾತಿ-8105705671 (ಸಾಸಲು) ರಮೇಶ್-9980768329 (ಮಧುರೆ),
ಗೂಳ್ಳ ಹನುಮಣ್ಣ-9902032101 (ತೂಬಗೆರೆ),
ಜೆ.ಮುನಿರಾಜು- 9620818767
ಚಿಕ್ಕಗಂಗಯ್ಯ- 9739681867
ಸತೀಶ್-8095282438
ಅನಿಲ್ ಕುಮಾರ್-9741901430
ಈ ಮೇಲ್ಕಂಡ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.
ದೊಡ್ಡಬಳ್ಳಾಪುರ: ವಿದ್ಯಾರ್ಥಿಗಳಲ್ಲಿ ಕ್ರೀಡಾ ಪ್ರತಿಭೆಯನ್ನು ಗುರುತಿಸಿ, ಅವರಿಗೆ ಉತ್ತಮ ತರಬೇತಿ ಹಾಗೂ ಅವಕಾಶ ಕಲ್ಪಿಸುವ ಉದ್ದೇಶದಿಂದ ನಗರದ ನ್ಯಾಷನಲ್ ಪ್ರೈಡ್…
ಪ್ರತಿಯೊಂದು ಮಗುವಿಗೂ ಶಿಕ್ಷಣ ದೊರೆಯಬೇಕು ಎಂಬ ಸರ್ಕಾರದ ಆಶಯದ ನಡುವೆಯೂ ನಾನಾ ಕಾರಣಗಳಿಂದ ಶಾಲೆಯಿಂದ ಹೊರಗುಳಿದಿರುವ ಹಾಗೂ ಶಾಲೆಗೆ…
ದೊಡ್ಡಬಳ್ಳಾಪುರ: ಪಾಕಿಸ್ತಾನಿ ಗ್ಯಾಂಗ್‌ಸ್ಟರ್‌ಗಳೊಂದಿಗೆ ಇನ್‌ಸ್ಟಾಗ್ರಾಂ ಮೂಲಕ ಸಂಪರ್ಕದಲ್ಲಿದ್ದ ಆರೋಪದ ಮೇರೆಗೆ ದೊಡ್ಡಬಳ್ಳಾಪುರ ನಗರ ಪೊಲೀಸರು ವ್ಯಕ್ತಿಯೊಬ್ಬನನ್ನು ಬಂಧಿಸಿದ್ದಾರೆ. ದೊಡ್ಡಬಳ್ಳಾಪುರ ನಗರದ…
ದೊಡ್ಡಬಳ್ಳಾಪುರ: ಶ್ರಾವಣ ಮಾಸದ ಶುಭ ಸಂದರ್ಭದಲ್ಲಿ ಆಚರಿಸಲಾಗುವ ವರಮಹಾಲಕ್ಷ್ಮಿ ಹಬ್ಬವನ್ನು ದೊಡ್ಡಬಳ್ಳಾಪುರ ತಾಲ್ಲೂಕಿನಾದ್ಯಂತ ಶುಕ್ರವಾರ ಭಕ್ತಿಭಾವ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.…
ದೊಡ್ಡಬಳ್ಳಾಪುರ: ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ತಾಲೂಕಿನ ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಘಾಟಿ ಸುಬ್ರಹ್ಮಣ್ಯ ದೇವಾಲಯದ ಆಡಳಿತ ಮಂಡಳಿ ವತಿಯಿಂದ…
ವರಮಹಾಲಕ್ಷ್ಮಿ ಹಬ್ಬ..... ಅವರವರ ನಂಬಿಕೆ, ಆಚರಣೆಗಳು ಅವರವರ ವೈಯಕ್ತಿಕ ಹಕ್ಕು ಮತ್ತು ಸ್ವಾತಂತ್ರ್ಯ. ಅದನ್ನು ಗೌರವಿಸುತ್ತಾ, ಅವರವರ ವಿವೇಚನೆಗೆ ಬಿಡುತ್ತಾ,....…