ಜು.28ಕ್ಕೆ ಬಗರ್ ಹುಕುಂ ಸಾಗುವಳಿದಾರರ ಸಭೆ: ನಗರದ ಪ್ರವಾಸಿ ಮಂದಿರದಲ್ಲಿ ಸಭೆ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಬಗರ್ ಹುಕುಂ ಸಾಗುವಳಿದಾರರ ಸಭೆ ಇದೇ ತಿಂಗಳ 28 ರಂದು ನಡೆಯಲಿದೆ ಎಂದು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಮುಖಂಡ ಕುಮಾರ್ ಸಮತಳ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅರ್ಜಿ ಸಲ್ಲಿಸಿ ಭೂಮಿ ಬರುತ್ತದೆಂದು ಸುಮ್ಮನೆ ಕುಳಿತರೆ ಭೂಮಿ-ವಸತಿ ಜಾಗಗಳು ತಾನೇ ತಾನಾಗಿ ಬರುವುದಿಲ್ಲ. ಈ ಹಿನ್ನೆಲೆಯಲ್ಲಿ ಭೂಮಿ-ವಸತಿ ವಂಚಿತರು ಭೂಮಿ ಪಡೆಯಲು ಏನುಮಾಡಬೇಕು? ಇದಕ್ಕಾಗಿ ಯಾವ ರೀತಿಯ ಹೋರಾಟ-ಕಾರ್ಯಕ್ರಮ ರೂಪಿಸಬೇಕೆಂದು ಚರ್ಚೆ ಮಾಡಿ ತೀರ್ಮಾನಿಸಬೇಕಾಗಿದೆ. ಆದ್ದರಿಂದ ಜು.28ರ ಶುಕ್ರವಾರ ದೊಡ್ಡಬಳ್ಳಾಪುರ ನಗರದ ಪ್ರವಾಸಿ ಮಂದಿರದಲ್ಲಿ ಬೆಳಿಗ್ಗೆ 10-30 ಕ್ಕೆ ಭೂಮಿ-ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಸಭೆ ಕರೆಯಲಾಗಿದ್ದು, ಈ ಸಭೆಯಲ್ಲಿ ರಾಜ್ಯ ಮುಖಂಡರುಗಳು ಹಾಗೂ ಭೂಮಿ ಮತ್ತು ವಸತಿಗಾಗಿ ಹೋರಾಟ ನಡೆಸುತ್ತಿರುವ ಸ್ಥಳೀಯ ಸಂಘಟನೆಗಳ ಮುಖಂಡರುಗಳು ಸಹ ಭಾಗವಹಿಸಲಿದ್ದಾರೆ. ಆದ್ದರಿಂದ ಭೂಮಿಗಾಗಿ ಫಾರಂ ನಂ. 50, 53, ಮತ್ತು 57 ರಲ್ಲಿ ಅರ್ಜಿ ಸಲ್ಲಿಸಿರುವ ಪ್ರತಿಯೊಬ್ಬರೂ ಮತ್ತು ವಸತಿಗಾಗಿ 94ಸಿ 94ಸಿಸಿ ಹಾಗೂ ಅರಣ್ಯ ಹಕ್ಕು ಕಾಯ್ದೆಯನ್ವಯ ಅರ್ಜಿ ಸಲ್ಲಿಸಿ ಭೂಮಿಯ ಸಮಸ್ಯೆಗಳನ್ನು ಎದುರಿಸುತ್ತಿರುವ ನೊಂದವರೆಲ್ಲರೂ ಈ ಸಭೆಯಲ್ಲಿ ಪಾಲ್ಗೊಳ್ಳಲು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯು ಈ ಮೂಲಕ ಮನವಿ ಮಾಡಿಕೊಳ್ಳುತ್ತದೆ.

ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಹಲವು ವರ್ಷಗಳಿಂದ ರಾಜ್ಯದ ಭೂಮಿ ಮತ್ತು ವಸತಿ ರಹಿತರ ಧ್ವನಿಯಾಗಿ ಹೋರಾಡುತ್ತಿದೆಯಲ್ಲದೆ ಈ ನಿಟ್ಟಿನಲ್ಲಿ ಸಮಿತಿಯು ಹಲವು ಮೂಲಭೂತ ಬದಲಾವಣೆಗಾಗಿ ಸರ್ಕಾರಗಳ ಮೇಲೆ ಹಲವು ರೀತಿಯ ಒತ್ತಾಯಗಳನ್ನು ಮಾಡುತ್ತಾ ಬರುತ್ತಿದೆ.

ಈ ನೆಲದ “ಪ್ರತಿಯೊಂದು ಕುಟುಂಬಕ್ಕೆ ಗೌರವಯುತವಾಗಿ ಬದುಕಿ ಬಾಳಲು ಸ್ವಂತ ಮನೆ, ದುಡಿದು ಬದುಕಲು ಭೂಮಿ” ದೊರೆಯಬೇಕು ಎಂದು ನಮ್ಮ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾಗಿದ್ದ ಸ್ವಾತಂತ್ರ್ಯ ಸೇನಾನಿ ದಿವಂಗತ ಎಚ್.ಎಸ್.ದೊರೆಸ್ವಾಮಿಯವರು ಪ್ರತಿಪಾದಿಸಿದಂತೆ ಭೂಮಿ-ವಸತಿಯು ಎಲ್ಲಾ ಜಾತಿ ಜನರ ಹಕ್ಕೂ ಆಗಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕಳೆದ ಎರಡು-ಮೂರು ತಲೆ ಮಾರುಗಳಿಂದ ಸರ್ಕಾರಿ, ಗೋಮಾಳ, ಖರಾಬ್ ಇನ್ನಿತರೆ ಭೂಮಿಗಳನ್ನು ಹಸನುಗೊಳಿಸಿ ಬದುಕು ಸಾಗಿಸುತ್ತಿರುವ ಸಾವಿರಾರು ಕುಟುಂಬಗಳು ಫಾರಂ. 50, 53 ಹಾಗೂ 57 ರಲ್ಲಿ ಸರ್ಕಾರಕ್ಕೆ ಅರ್ಜಿಗಳನ್ನು ಸಲ್ಲಿಸಿ ಸಾಗುವಳಿ ಮಾಡುತ್ತಿರುವ ಭೂರಹಿತರಿಗೆ ಸರ್ಕಾರ ಭೂ ಮಂಜೂರಾತಿ ಮಾಡುತ್ತಿಲ್ಲ. ಇದಕ್ಕಾಗಿ ಡಿ.ಸಿ., ತಹಸೀಲ್ದಾರ್ ಕಚೇರಿ ಮತ್ತು ಶಾಸಕರ ಕಚೇರಿಗಳನ್ನು ಅಲೆದಲೆದು ಬಸವಳಿದಿದ್ದಾರೆ.

ಉಳುವವನೇ ಭೂಒಡೆಯ ಘೋಷಣೆಯಂತೆ ಸಾಮಾಜಿಕವಾಗಿ-ಆರ್ಥಿಕವಾಗಿ ಹಿಂದುಳಿದವರಿಗೆ ಭೂಮಿ ನೀಡದೆ ಸರ್ಕಾರಗಳು ಕಾರ್ಪೋರೇಟ್ ಖುಳಗಳಿಗೆ, ಉಳ್ಳವರಿಗೆ, ಟ್ರಸ್ಟ್ ಗಳಿಗೆ ಮತ್ತು ಜಾತಿವಾರು ಮಠಗಳಿಗೆ, ರಾಜಕಾರಣಿಗಳು ಮತ್ತು ಇವರ ಹಿಂಬಾಲಕರಿಗೆ ಹಾಗೂ ಹಣ ನೀಡಿದವರಿಗೆ ಭೂಮಿ-ವಸತಿ ಜಾಗಗಳು ಮಂಜೂರು‌ ಮಾಡುತ್ತಿವೆ. ಆದರೆ ಇದಕ್ಕಾಗಿ ಅರ್ಜಿ ಸಲ್ಲಿಸಿ ಹಲವು ದಶಕಗಳು ಕಳೆದರೂ ನೆತ್ತಿಯ ಮೇಲೊಂದು ಸೂರು ಮತ್ತು ಉಳುಮೆ ಮಾಡುತ್ತಿರುವ ಭೂಮಿಗಳು ಬಡ ಜನರಿಗೆ ದೊರೆಯುತ್ತಿಲ್ಲ. ಶ್ರೀಮಂತರಿಗೆ ಭೂಮಿ ಕೊಡಲು ಯಾವುದೇ ಕಾನೂನು ತೊಡಕಿಲ್ಲದಿದ್ದರೂ ಬಡವರಿಗೆ ಭೂಮಿ-ವಸತಿ ನೀಡಲು ನೂರೆಂಟು ನೆಪಗಳನ್ನು ಸರ್ಕಾರ ಹೇಳುತ್ತಿದೆ.

ಹೆಚ್ಚಿನ ಮಾಹಿತಿಗಾಗಿ:
ರಾಜುಸಣ್ಣಕ್ಕಿ-9986573503
ಗುರು- 9620824368
ರಮೇಶ್ ಸಂಕ್ರಾತಿ-8105705671 (ಸಾಸಲು) ರಮೇಶ್-9980768329 (ಮಧುರೆ),
ಗೂಳ್ಳ ಹನುಮಣ್ಣ-9902032101 (ತೂಬಗೆರೆ),
ಜೆ.ಮುನಿರಾಜು- 9620818767
ಚಿಕ್ಕಗಂಗಯ್ಯ- 9739681867
ಸತೀಶ್-8095282438
ಅನಿಲ್ ಕುಮಾರ್-9741901430
ಈ ಮೇಲ್ಕಂಡ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

Ramesh Babu

Journalist

Recent Posts

ನೊಂದವರ ನೋವಾ ನೋಯದವರೆತ್ತ ಬಲ್ಲರೋ……

ಸುಪ್ರಭಾತ.......... ಭಾರತೀಯ ಸಮಾಜ ಎಂಬುದು ಮಧ್ಯಮ ವರ್ಗದ ಸಂತೆ ಇದ್ದಂತೆ. ಇಲ್ಲಿ ಬಹುತೇಕ ಮಧ್ಯಮ ವರ್ಗದವರೇ ಅತಿ ಹೆಚ್ಚು ಮಧ್ಯಮ…

26 minutes ago

ಪ್ರತಿ ಮನೆಗೂ ಪೊಲೀಸರು ಭೇಟಿ ನೀಡಿ, ಸಮಸ್ಯೆಗಳನ್ನು ಆಲಿಸಿ, ಅಗತ್ಯ ಕ್ರಮ ಕೈಗೊಳ್ಳಲಾಗುವುದು- ಎಸ್ಪಿ ಸಿ.ಕೆ ಬಾಬಾ

ಪ್ರತಿ ಮನೆಗೂ ಪೊಲೀಸರು ಭೇಟಿ ನೀಡಿ, ಜನರ ಸಮಸ್ಯೆಗಳನ್ನು ಆಲಿಸಿ, ಅಗತ್ಯ ಕ್ರಮ ಕೈಗೊಳ್ಳಲಿದ್ದಾರೆ. ಇದರಿಂದಾಗಿ ಕಾನೂನಿಗೆ ಸಂಬಂಧಿತ ಸಮಸ್ಯೆಗಳ…

15 hours ago

ಗೊತ್ತಿರದ ವಿಷಯ ಕಲಿಯುವ ಕಡೆ ಗಮನ ಕೇಂದ್ರೀಕರಿಸಿ- ಡಾ. ಸೀಮಾ ಚೋಪ್ರಾ

"ನೀವು ಮಾಡುವ ಕೆಲಸವನ್ನು ಪ್ರೀತಿಸಿ. ನಿಮಗೆ ಗೊತ್ತಿಲ್ಲದ ವಿಷಯಗಳನ್ನು ಕಲಿಯುವ ಕಡೆಗೆ ಗಮನ ಕೇಂದ್ರೀಕರಿಸಿ ಮತ್ತು ಜೀವನಪರ್ಯಂತ ಕಲಿಯುತ್ತಲೇ ಇರಿ,…

15 hours ago

ಅಣ್ಣನ ಮೂವರು ಮಕ್ಕಳ ಮೇಲೆ ತಮ್ಮನಿಂದ ಕ್ರೂರವಾಗಿ ಹಲ್ಲೆ: ಇಬ್ಬರು ಮಕ್ಕಳು ಸ್ಥಳದಲ್ಲೇ ಸಾವು: ಒಬ್ಬ ಬಾಲಕ ಜೀವನ್ಮರಣ ಹೋರಾಟ

ಅಣ್ಣನ ಮೂವರು ಮಕ್ಕಳ ಮೇಲೆ ತಮ್ಮನೇ ಕ್ರೂರವಾಗಿ ಹಲ್ಲೆ ನಡೆಸಿರುವ ಘಟನೆ ಬೆಂಗಳೂರಿನ ಕಮ್ಮಸಂದ್ರದಲ್ಲಿ ನಡೆದಿದೆ. ಘಟನೆಯಲ್ಲಿ 9 ವರ್ಷದ…

23 hours ago

ನಟ ಪ್ರಥಮ್ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ ಆರೋಪ: ಹಲ್ಲೆ ಎಲ್ಲಿ ಆಯ್ತು…? ಘಟನೆ ಬಗ್ಗೆ ನಟ ಪ್ರಥಮ್ ಏನಂದ್ರು… ಗೊತ್ತಾ….? ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ….

ಜು.22ರ ಮಂಗಳವಾರ ದೊಡ್ಡಬಳ್ಳಾಪುರದ ರಾಮಯ್ಯನಪಾಳ್ಯ ಸಮೀಪವಿರುವ ಶ್ರೀ ಆದಿಶಕ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಪೂಜೆಗೆಂದು ಬಿಗ್ ಬಾಸ್ ವಿನ್ನರ್ ನಟ…

2 days ago

ಈ ವರ್ಷ ಕೇಂದ್ರ ಸರ್ಕಾರ ಸರಬರಾಜು ಮಾಡಿರುವ ರಸಗೊಬ್ಬರ ಸಾಕಾಗುತ್ತಿಲ್ಲ- ಸಿಎಂ ಸಿದ್ದರಾಮಯ್ಯ

ಹಿಂದುಳಿದವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಜಾತಿ ಸಮೀಕ್ಷೆ ಅನಿವಾರ್ಯವಾಗಿದ್ದು, ಈ ದಿಸೆಯಲ್ಲಿ ದೇಶದ ಪ್ರತಿ ನಾಗರಿಕನ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ,…

2 days ago