ಜುಲೈ 1ರಂದು ನಾಗರಿಕ ಬಂದೂಕು ತರಬೇತಿ ಶಿಬಿರ

ಜುಲೈ 1ರಂದು ದೊಡ್ಡಬಳ್ಳಾಪುರ ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ನಾಗರೀಕ ಬಂದೂಕು ತರಬೇತಿ ಶಿಬಿರವನ್ನು ನಡೆಸಲಾಗುತ್ತಿದೆ.

ಎಲ್ಲ ರೀತಿಯ ಶಸ್ತ್ರಾಸ್ತ್ರಗಳ ಬಳಕೆಯ ಬಗ್ಗೆ ತರಬೇತಿಯನ್ನು ನೀಡಲಾಗುತ್ತದೆ. ಬಂದೂಕು ತರಬೇತಿ ಪಡೆಯಲು ಇಚ್ಚಿಸುವವರಿಗೆ ಅರ್ಜಿಗಳನ್ನು ಠಾಣೆಯಲ್ಲಿಯೇ ವಿತರಿಸಲಾಗುತ್ತದೆ.

ಸಾರ್ವಜನಿಕರು ಸ್ವತಹ ಬಂದೂಕು ಲೈಸೆನ್ಸ್ ಪಡೆಯಲು ಹಾಗೂ ಬಂದೂಕು ಪರವಾನಗಿ ನವೀಕರಣ ಮಾಡಿಸಿಕೊಳ್ಳಲು ಇಚ್ಛಿಸುವವರು ಈ ತರಬೇತಿಯನ್ನು ಪಡೆದು ಸದುಪಯೋಗಪಡಿಸಿಕೊಳ್ಳಲು ಪೊಲೀಸ್ ಇಲಾಖೆ ಕೋರಿದೆ.

ನಿಬಂಧನೆಗಳು:-

 1. ಅಭ್ಯರ್ಥಿಯು ಭಾರತದ ಪ್ರಜೆಯಾಗಿರಬೇಕು.

 2. ಅಭ್ಯರ್ಥಿಯು 21 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು ಮತ್ತು ಆರೋಗ್ಯವಂತರಾಗಿರಬೇಕು.

 3. ಅಭ್ಯರ್ಥಿಗಳು ಯಾವುದೇ ಕ್ರಿಮಿನಲ್ ಹಿನ್ನೆಲೆ ಹೊಂದಿರಬಾರದು.

 4. ನಿಷೇಧಿತ ಶಸ್ತ್ರಾಸ್ತ್ರದೊಂದಿಗೆ ತರಬೇತಿ ನೀಡಲಾಗುವುದು.

 -: ಅರ್ಜಿಯೊಂದಿಗೆ ಸಲ್ಲಿಸಬೇಕಾದ ದಾಖಲೆಗಳು:-

 1. ಅರ್ಜಿಯೊಂದಿಗೆ ಅಭ್ಯರ್ಥಿಗಳ 03 ಭಾವಚಿತ್ರಗಳನ್ನು ಕಡ್ಡಾಯವಾಗಿ ಒದಗಿಸಬೇಕು ಅದರಲ್ಲಿ ಒಂದು ಭಾವಚಿತ್ರವನ್ನು ಅರ್ಜಿಗೆ ಅಂಟಿಸಬೇಕು.

 2. ಪ್ರಾಥಮಿಕ ವಿಚಾರಣೆ ನಡೆಸಿದ ನಂತರ ಅಂಚೆ ಕಚೇರಿಯಿಂದ ಅರ್ಜಿಯ ದೃಢೀಕರಣ.

 3. ವೈದ್ಯಕೀಯ ಪ್ರಮಾಣಪತ್ರ ಕಡ್ಡಾಯವಾಗಿದೆ.

 4. ಆಧಾರ್ ಕಾರ್ಡ್ ಪ್ರತಿಯನ್ನು ಕಡ್ಡಾಯವಾಗಿ ನೀಡುವುದು.

 ಮೇಲಿನ ನಿಗದಿತ ಷರತ್ತುಗಳು/ನಿಯಮಗಳನ್ನು ಪಾಲಿಸದಿದ್ದಲ್ಲಿ, ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುವುದು. ಭರ್ತಿ ಮಾಡಿದ ಅರ್ಜಿಗಳನ್ನು ಆಯಾ ಠಾಣೆಗಳಿಂದ ಸ್ವೀಕರಿಸಲು ಮತ್ತು ದಿನಾಂಕ:29/06/2024 ರೊಳಗೆ ಮಾಹಿತಿಯನ್ನು ಕಡ್ಡಾಯವಾಗಿ ಈ ಕಚೇರಿಗೆ ಸಲ್ಲಿಸಲು ಕೋರಲಾಗಿದೆ.  ತರಬೇತಿಯನ್ನು ದಿನಾಂಕ:01/07/2024 ರಿಂದ 07/07/2024 ರವರೆಗೆ ಆಯೋಜಿಸಲಾಗುವುದು.

Leave a Reply

Your email address will not be published. Required fields are marked *