Categories: Home

ಜೀವನದ ಪಯಣ ಅತ್ಯಂತ ದೀರ್ಘವೇ ….? ಅಥವಾ ಕಡಿಮೆ ಸಮಯದ್ದೇ..?

ಬದುಕೊಂದು ದೂರದ ಪಯಣ. ತುಂಬಾ ತುಂಬಾ ದೂರ ನಿರಂತರವಾಗಿ ನಡೆಯಬೇಕು ಮರೆಯಾಗುವ ಮುನ್ನ………………

Life is Short ,
Make it Sweet…………..

ಈ ಎರಡು ವಿಭಿನ್ನ ಹೇಳಿಕೆಗಳನ್ನು ಗಮನಿಸಿ.

ಒಂದು ಬದುಕನ್ನು ದೀರ್ಘ ಅವಧಿಯ ಹೋರಾಟ ಎಂದು ಹೇಳಿದರೆ ಮತ್ತೊಂದು ಬದುಕು ತುಂಬಾ ಚಿಕ್ಕ ಸಮಯದ್ದು ಎಂಬ ಅರ್ಥ ಕೊಡುತ್ತದೆ.

ಹಾಗಾದರೆ ಬದುಕು ದೀರ್ಘವೇ ಅಥವಾ ಕಡಿಮೆ ಸಮಯವೇ ?………

ಭಾರತದ ಈಗಿನ ಸರಾಸರಿ ಆಯಸ್ಸು ಅಧಿಕೃತವಾಗಿ ಸುಮಾರು 63/65 ರ ಆಸುಪಾಸಿನಲ್ಲಿ ಇದೆ. ಅದನ್ನು ಸುಮಾರು 75 ಎಂದು ಭಾವಿಸಿಕೊಳ್ಳೋಣ.

75 ವಯಸ್ಸು ಕೆಲವರಿಗೆ ದೀರ್ಘ ಮತ್ತೆ ಕೆಲವರಿಗೆ ಕಡಿಮೆ ಅದು ಅವರವರ ಜೀವನ ಶೈಲಿ ಮತ್ತು ಮನೋಭಾವ ಅವಲಂಬಿಸಿರುತ್ತದೆ ಎಂದು ಲೋಕಾಭಿರಾಮವಾಗಿ ಹೇಳಬಹುದು.

ಆದರೆ ವಾಸ್ತವ ಏನು. ನಾವು ಬದುಕನ್ನು ದೀರ್ಘವೆಂದು ಪರಿಗಣಿಸಬೇಕೆ ಅಥವಾ ಸಣ್ಣ ಅವಧಿ ಎಂದು ಭಾವಿಸಬೇಕೆ?

ನನ್ನ ದೃಷ್ಟಿಯಲ್ಲಿ ಬದುಕೊಂದು ದೀರ್ಘ ಪಯಣ. ಜೀವನದಲ್ಲಿ ನಮ್ಮ ಬಳಿ ತುಂಬಾ ತುಂಬಾ ಸಮಯವಿದೆ. ಹುಟ್ಟಿನಿಂದ ಸಾಯುವವರೆಗೆ ಸುಮಾರು ಮುಕ್ಕಾಲು ಶತಮಾನದಷ್ಟು ದೂರದ ಹಾದಿ ಇದೆ.

ನಮ್ಮ ಆಸೆ ಆಕಾಂಕ್ಷೆಗಳು, ಕನಸುಗಳು, ಸವಾಲುಗಳು, ಪ್ರಯೋಗಗಳು, ಸೋಲಿನ ಕುಸಿತ, ಗೆಲುವಿನ ಮೆಟ್ಟಿಲು…….. ಎಲ್ಲವನ್ನೂ ನಿಭಾಯಿಸಲು ಸಾಕಷ್ಟು ಸಮಯವಿರುತ್ತದೆ. ಹಣದ ಕೊರತೆ, ಪ್ರೇಮ ವೈಫಲ್ಯ, ಕೌಟುಂಬಿಕ ವಿಭಜನೆ, ನೈಸರ್ಗಿಕ ವಿಕೋಪ, ವ್ಯವಸ್ಥೆಯ ಶೋಷಣೆ, ನಿರಂತರ ಸೋಲು ಎಲ್ಲವನ್ನು ಎದುರಿಸಲು, ಅನುಭವಿಸಲು ಮತ್ತೆ ಕಟ್ಟಲು ನಮ್ಮ ಬಳಿ ಕಾಲವಿದೆ.

ಇದಕ್ಕೆ ಪ್ರತಿಯಾಗಿ,
ಜೀವನದ ಕಾಲ ತುಂಬಾ ಕಡಿಮೆ ಇದೆ ಎಂದು ಭಾವಿಸಿದಲ್ಲಿ ನಮ್ಮ ಮೇಲೆ ಒತ್ತಡ ಹೆಚ್ಚಾಗುತ್ತದೆ. ಇರುವ ಸ್ವಲ್ಪ ಸಮಯದಲ್ಲಿ ಎಲ್ಲವನ್ನೂ ಮಾಡಲು ಹೋಗಿ ಬದುಕಿನ ಸ್ವಾರಸ್ಯವನ್ನೇ ಕಳೆದುಕೊಳ್ಳುತ್ತೇವೆ.

ಬೆಳಗಿನಿಂದ ರಾತ್ರಿಯವರೆಗೆ ವರ್ಷದ 365 ದಿನವೂ ಕೆಲಸದ ಒತ್ತಡಕ್ಕೆ ಸಿಲುಕಿ ನೆಮ್ಮದಿಗಾಗಿ ಹುಡುಕಾಡುವ ಸಾಧ್ಯತೆಯೇ ಹೆಚ್ಚು. ಮಧ್ಯಮ ವರ್ಗದವರಂತೂ ಸ್ವಂತ ಮನೆ, ಮಕ್ಕಳ ಶಿಕ್ಷಣ ಮತ್ತು ಮದುವೆ, ಕಾರು ಅದು ಇದು ಎಂದು ಇಡೀ ಜೀವನ ಅದಕ್ಕಾಗಿಯೇ ಮುಡುಪಿಡುತ್ತಾರೆ. ಭೌತಿಕ ವಸ್ತುಗಳ ಹುಡುಕಾಟವೇ ಜೀವನ ಎಂಬಂತಾಗಿದೆ.

ಅದರಲ್ಲೂ ಈ ಆಧುನಿಕ ವೇಗದ ಯುಗದಲ್ಲಿ ಸಮಯ ಸರಿಯುವುದೇ ತಿಳಿಯುವುದಿಲ್ಲ. ದಿನನಿತ್ಯದ ಒತ್ತಡದಲ್ಲಿ ತಿಂಗಳು – ವರ್ಷಗಳು ಬೇಗ ಬೇಗ ಸಾಗಿದಂತೆನಿಸುತ್ತದೆ.

ಅವಶ್ಯಕತೆಗಳು ಹೆಚ್ಚಾದಂತೆ,
ಆ ಅವಶ್ಯಕತೆಗಳೇ ಅನಿವಾರ್ಯಗಳಾಗಿ,
ಆ ಅನಿವಾರ್ಯಗಳೇ ಬದುಕಿನ ಭಾಗಗಳಾಗಿ,
ಆ ಭಾಗಗಳನ್ನು ಪೂರೈಸಿಕೊಳ್ಳುವುದೇ ಜೀವನದ ಉದ್ದೇಶಗಳಾಗಿ, ಆ ಉದ್ದೇಶಗಳಿಗಾಗಿಯೇ ಸಮಯವನ್ನು ಮೀಸಲಿಡಬೇಕಾಗಿರುವುದರಿಂದ ಜೀವನದ ಸಮಯ ತುಂಬಾ ಕಡಿಮೆಯಾಗಿದೆ ಎಂದು ಭಾಸವಾಗುತ್ತದೆ.
ನಾವುಗಳು ಅದರಲ್ಲಿಯೇ ಕಳೆದು ಹೋಗುತ್ತಿದ್ದೇವೆ.

ಬದುಕನ್ನು ಒಂದು ನದಿಗೆ ಹೋಲಿಸಬಹುದು. ನದಿ ಹುಟ್ಟಿ ಸಮುದ್ರ ಸೇರುವವರೆಗೆ ದೀರ್ಘವಾಗಿ ಮತ್ತು ನಿರಂತರವಾಗಿ ಚಲಿಸುತ್ತಿರುತ್ತದೆ. ಆ ಹಾದಿಯಲ್ಲಿ ಕೆಲವೊಮ್ಮೆ ವಿಶಾಲವಾಗಿ, ಮತ್ತೆ ಕೆಲವು ಸಲ ಇಕ್ಕಟ್ಟಾದ ಜಾಗದಲ್ಲಿ, ಹಲವೊಮ್ಮೆ ರಭಸದಿಂದ, ಮತ್ತೆ ಪ್ರಶಾಂತತೆಯಿಂದ ಅನೇಕ ಎಡರು ತೊಡರುಗಳನ್ನು ಎದುರಿಸಿ ಸಾಗುತ್ತದೆ.

ಕೆಲವೊಮ್ಮೆ ಮನುಷ್ಯ ಪ್ರಾಣಿ ತನ್ನ ಸ್ವಾರ್ಥಕ್ಕಾಗಿ ಅಣೆಕಟ್ಟು ಕಟ್ಟಿ ಅದನ್ನು ಬಂಧಿಸುತ್ತಾನೆ. ಆಗಲೂ ನದಿ ಸಮುದ್ರ ಸೇರುವ ತವಕದಿಂದ ತನ್ನ ಸಮಯಕ್ಕೆ ಕಾಯುತ್ತದೆ ಅದು ಎಷ್ಟೇ ದೀರ್ಘ ಸಮಯವಾದರೂ…….

ಆದರೂ,
ಬದುಕನ್ನು ಹೀಗೆ ಎಂದು ನಿರ್ಧರಿಸುವುದು ಕಷ್ಟ. ಆದರೆ, ಜೀವನವನ್ನು ಆಗಾಗ ಪುನರ್ ವಿಮರ್ಶೆಗೆ ಒಳಪಡಿಸಿ ನೆಮ್ಮದಿಯ ಮಟ್ಟವನ್ನು ಹೆಚ್ಚಿಸಿಕೊಳ್ಳಲು ಸದಾ ಪ್ರಯತ್ನಿಸುತ್ತಿರಬೇಕು.

ಏಕೆಂದರೆ ಬದುಕೊಂದು ಸುದೀರ್ಘ ಪಯಣ ಅನಂತದೆಡೆಗೆ…….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ

ಲೇಖಕ- ವಿವೇಕಾನಂದ. ಎಚ್.ಕೆ

Ramesh Babu

Journalist

Recent Posts

ಮಳೆ, ಗಾಳಿ ಅವಾಂತರ: ರಸ್ತೆಗೆ ಅಡ್ಡಲಾಗಿ ಬಿದ್ದ ಬೃಹತ್ ಮರ: ಕುಂಟನಹಳ್ಳಿ, ಹುಸ್ಕೂರು ದಾರಿ ಬಂದ್

ನಿನ್ನೆ ರಾತ್ರಿ ಸುರಿದ ಮಳೆ, ಭೀಕರ ಗಾಳಿ ಅವಾಂತರದಿಂದಾಗಿ ತಾಲೂಕಿನಲ್ಲಿ ಅನೇಕ ಕಡೆ ವಿದ್ಯುತ್ ಕಂಬಗಳು, ಮರಗಳು, ಮನೆಗಳ ಮೇಲ್ಛಾವಣಿಗಳು,…

8 hours ago

ಆನ್‌ಲೈನ್ ಗೇಮ್ ನಿಷೇಧ: ‘ಆನ್‌ಲೈನ್ ಗೇಮಿಂಗ್ ಉತ್ತೇಜನ ಮತ್ತು ನಿಯಂತ್ರಣ ಕಾಯ್ದೆ 2025’ ಜಾರಿ: ಕಾಯ್ದೆ ಉಲ್ಲಂಘಿಸಿದರೆ ಭಾರೀ ದಂಡ ಮತ್ತು ಕಠಿಣ ಶಿಕ್ಷೆ ನಿಗದಿ

ದೇಶದಲ್ಲಿ ಅಣಬೆಗಳಂತೆ ಬೆಳೆಯುತ್ತಿರುವ ಆನ್‌ ಲೈನ್ ಜೂಜಾಟ ಮತ್ತು ಹಣದ ಆಟಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಹೊಸದಾಗಿ…

9 hours ago

ಹೊಸಕೋಟೆ ಹೊರವಲಯದ ನೂತನ ಚೆನ್ನೈ ಎಕ್ಸ್ಪ್ರೆಸ್ ಹೆದ್ದಾರಿಯಲ್ಲಿ ವ್ಹೀಲಿಂಗ್ ಹುಚ್ಚಾಟ: ವ್ಹೀಲಿಂಗ್ ಮಾಡಿ ಪುಂಡಾಟ ಮೆರೆದವರಿಗೆ ಖಾಕಿ ಪಾಠ

ಸಿಲಿಕಾನ್ ಸಿಟಿ ಹೊರವಲಯದಲ್ಲಿ ಯುವಕರಿಂದ ಡೆಡ್ಲಿ ವ್ಹೀಲಿಂಗ್ ನಡೆದಿದೆ.. ವ್ಹೀಲಿಂಗ್ ಮಾಡಿ ಪುಂಡಾಟ ಮೆರೆದವರಿಗೆ ಹೊಸಕೋಟೆ ಸಂಚಾರಿ ಪೊಲೀಸರು ಬಿಸಿ…

10 hours ago

ಬಿರುಗಾಳಿ ಸಹಿತ ಮಳೆ: ನೆಲ ಕಚ್ಚಿದ ಫಸಲಿಗೆ ಬಂದಿದ್ದ  ಬಾಳೆ ಬೆಳೆ: ಲಕ್ಷಾಂತರ ರೂ. ನಷ್ಟ: ಸಂಕಷ್ಟದಲ್ಲಿ ರೈತ

ರಾತ್ರಿ ತಾಲೂಕಿನಾದ್ಯಂತ ಬಿರುಗಾಳಿ ಸಹಿತ ಮಳೆಯಾಗಿದ್ದು, ಇದರಿಂದ ಹಲವು ಕಡೆ ವಿದ್ಯುತ್ ಕಂಬಗಳು, ಮರಗಳು ಧರೆಗುರುಳಿವೆ. ಅದರಂತೆ ದೊಡ್ಡಬಳ್ಳಾಪುರ ತಾಲೂಕಿನ…

12 hours ago

ಮಳೆ, ಗಾಳಿ ಅವಾಂತರ: ವಿದ್ಯುತ್ ತಂತಿ ಮೇಲೆ ಬಿದ್ದ ಮನೆಯ ಮೇಲ್ಛಾವಣಿಗೆ ಅಳವಡಿಸಿದ್ದ ಭಾರೀ ಗಾತ್ರದ ಝಿಂಕ್ ಅಲ್ಯೂಮಿನಿಯಮ್ ಶೀಟ್‌: ರಸ್ತೆಗೆ ಅಡ್ಡಲಾಗಿ ಬಿದ್ದ 7 ವಿದ್ಯುತ್ ಕಂಬಗಳು

ನಿನ್ನೆ ರಾತ್ರಿ ಭಾರೀ ಗಾಳಿ, ಮಳೆಗೆ ಮನೆಯ ಮೇಲ್ಛಾವಣಿಗೆ ಅಳವಡಿಸಿದ್ದ ಝಿಂಕ್ ಅಲ್ಯೂಮಿನಿಯಮ್ ಶೀಟ್‌ಗಳು ಹಾರಿ ವಿದ್ಯುತ್ ತಂತಿಗಳ ಮೇಲೆ…

13 hours ago

ಬಿರುಗಾಳಿ ಸಹಿತ ಜೋರು ಮಳೆ: ಧರೆಗುರುಳಿದ 2 ಟ್ರಾನ್ಸ್‌ಫಾರ್ಮರ್ (ವಿದ್ಯುತ್ ಪರಿವರ್ತಕ), 9 ವಿದ್ಯುತ್ ಕಂಬಗಳು: ತಪ್ಪಿದ ಭಾರೀ ಅನಾಹುತ

ಇಂದು ಸಂಜೆ ತಾಲೂಕಿನಾದ್ಯಂತ ಬಿರುಗಾಳಿ ಸಹಿತ ಜೋರು ಮಳೆಯಾಗಿದ್ದು, ಭಾರೀ ಮಳೆ ಅವಾಂತರದಿಂದಾಗಿ ಕೆಲವೆಡೆ ಅನಾಹುತಗಳು ಸಂಭವಿಸಿವೆ... ದೊಡ್ಡಬಳ್ಳಾಪುರ ತಾಲೂಕಿನ…

1 day ago