ಜಿ.ಟಿ.ಟಿ.ಸಿ ದೇವನಹಳ್ಳಿಯ ಕೇಂದ್ರದಲ್ಲಿ- ತಾಂತ್ರಿಕ ತರಬೇತಿಗೆ ಅಜಿ೯ ಆಹ್ವಾನ

ಸಕಾ೯ರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ(ಜಿ.ಟಿ.ಟಿ.ಸಿ) ದೇವನಹಳ್ಳಿಯಲ್ಲಿ, 2023-24 ನೇ ಸಾಲಿನ ಜಿ.ಟಿ.ಟಿ.ಸಿ.- ಟೊಯೊಟಾ ಸಹಯೋಗದಲ್ಲಿ ವೆಹಿಕಲ್‌ ಅಸೆಂಬ್ಲಿ ಫಿಟ್ಟರ್‌ ಕೌಶಲ್ಯಾಧರಿತ ತಾಂತ್ರಿಕ ತರಬೇತಿ ಕೋಸ್‌೯ ಆರಂಭವಾಗಿದ್ದು, 17 ರಿಂದ 21 ವಷ೯ ವಯೋಮಿತಿಯ 10 ನೇ ತರಗತಿ ಉತ್ತೀಣ೯ ಹಾಗೂ ಪಿ.ಯು.ಸಿ  ಉತ್ತೀಣ೯/ ಅನುತ್ತೀಣಾ೯ರಾದ ವಿದ್ಯಾಥಿ೯ಗಳು ಪ್ರವೇಶ ಪಡೆಯಬಹುದಾಗಿದೆ.

ಮೊದಲ 1ನೇ ವಷ೯ ಜಿ.ಟಿ.ಟಿ.ಸಿ ಕೇಂದ್ರದಲ್ಲಿ ತರಬೇತಿ ಪಡೆದು ನಂತರ 2 ವಷ೯ ಬೆಂಗಳೂರಿನ ಟೊಯೊಟಾ ಕಿಲೋ೯ಸ್ಕರ್‌ ಮೋಟಾರ್‌ ಲಿಮಿಟೆಡ್ ಕಂಪನಿಯಲ್ಲಿ ಮಾಸಿಕ ರೂ.13000 ದಿಂದ 15000 ಸ್ಟೈಫಂಡ್‌ ಸಹಿತ ಟ್ರಾನ್ಸ್ಪೋರ್ಟ್ ಹಾಗೂ ಕ್ಯಾಂಟೀನ್ ಸೌಲಭ್ಯದ ಜೊತೆ ತರಬೇತಿ ದೊರೆಯಲಿದೆ.

ಹೆಚ್ಚಿನ ಮಾಹಿತಿಗಾಗಿ ಜಿ.ಟಿ.ಟಿ.ಸಿ ಸಂಸ್ಥೆ ಚನ್ನರಾಯಪಟ್ಟಣ ಗ್ರಾಮ ಹಾಗೂ ಹೋಬಳಿ, ದೇವನಹಳ್ಳಿ ತಾಲ್ಲೂಕು ಈ ವಿಳಾಸಕ್ಕೆ ಭೇಟಿ ನೀಡಬಹುದು ಅಥವಾ ಮೊಬೈಲ್ ಸಂಖ್ಯೆ- 9036144417, 8147784392, 080-26607666 ನ್ನು ಸಂಪರ್ಕಿಸಬಹುದಾಗಿದೆ ಎಂದು ಸಂಸ್ಥೆಯ ಪ್ರಾಂಶುಪಾಲರಾದ ರವಿಚಂದ್ರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *