ಜಿಲ್ಲೆಯಲ್ಲಿ ಏ.20ರಂದು 33 ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ: ಜಿಲ್ಲಾಧಿಕಾರಿ ಆರ್ ಲತಾ

2023-ಕರ್ನಾಟಕ ರಾಜ್ಯ ವಿಧಾನಸಭಾ ಸಾರ್ವತ್ರಿಕ ಚುನಾವಣೆಗೆ ಏಪ್ರಿಲ್ 13 ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಆರನೆಯ ದಿನ ಹಾಗೂ ಕೊನೆಯ ದಿನವಾದ ಗುರುವಾರದಂದು ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ 33 ಅಭ್ಯರ್ಥಿಗಳಿಂದ ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಆರ್.ಲತಾ ಅವರು ಮಾಹಿತಿ ನೀಡಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ 178-ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ(ಒಟ್ಟು 13 ಅಭ್ಯರ್ಥಿಗಳು) ಎ.ಎ.ಪಿ. ಪಕ್ಷದ ಅಭ್ಯರ್ಥಿಯಾಗಿ ಪ್ರಶಾಂತ್ ಸುಬ್ರಮಣಿ, ಬಿ.ಎಸ್.ಪಿ ಪಕ್ಷದಿಂದ ಡಿ.ಎಂ ಲಕ್ಷ್ಮಿನಾರಾಯಣ, ಪಕ್ಷೇತರ ಅಭ್ಯರ್ಥಿಗಳಾಗಿ ಜಿ.ನಾರಾಯಣಸ್ವಾಮಿ, ಅನುಷ.ಪಿ.ಆರ್, ಈರೇಗೌಡ, ಅಂಬುಜ, ನವೀನ್ ಕುಮಾರ್.ಎಸ್.ಆರ್, ಜಿ.ಅಶೋಕ್, ಸುರೇಶ್.ಕೆ, ಟಿ.ನಾಗರಾಜು ಹಾಗೂ ಇತರೆ ಪಕ್ಷಗಳಿಂದ ಬಿ. ಸೊಣ್ಣಪ್ಪ, ಶರತ್ ಬಚ್ಚೇಗೌಡ, ರಮೇಶ ನಾಮಪತ್ರ ಸಲ್ಲಿಸಿದ್ದಾರೆ.

179-ದೇವನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ(ಒಟ್ಟು 07 ಅಭ್ಯರ್ಥಿಗಳು) ಜೆ.ಡಿ.ಎಸ್ ಪಕ್ಷದಿಂದ ನಾರಾಯಣ ಸ್ವಾಮಿ.ಎಲ್.ಎನ್, ಪಕ್ಷೇತರ ಅಭ್ಯರ್ಥಿಗಳಾಗಿ ನಾರಾಯಣಸ್ವಾಮಿ, ವಿ.ಮಂಜುನಾಥ್, ಕೆ.ಮುನಿಯಪ್ಪ, ನಿಸರ್ಗ.ವಿ, ಶಿವಪ್ಪ ಹಾಗೂ ಇತರೆ ಪಕ್ಷದಿಂದ ಡಾ. ಎಂ.ವೆಂಕಟಸ್ವಾಮಿ ನಾಮಪತ್ರ ಸಲ್ಲಿಸಿದ್ದಾರೆ.

180-ದೊಡ್ಡಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ(ಒಟ್ಟು 08 ಅಭ್ಯರ್ಥಿಗಳು) ಬಿ.ಎಸ್.ಪಿ ಪಕ್ಷದಿಂದ ಬಿ.ಎಲ್.ಪಿಳ್ಳಪ್ಪ, ಜೆ.ಡಿ.ಎಸ್ ಪಕ್ಷದಿಂದ ಬಿ.ಮುನೇಗೌಡ, ಬಿ.ಜೆ. ಪಿ ಪಕ್ಷದಿಂದ ಧೀರಜ್ ಮುನಿರಾಜ್, ಐ.ಎನ್. ಸಿ ಪಕ್ಷದಿಂದ ಟಿ.ವೆಂಕಟರಮಣಯ್ಯ, ಸ್ವತಂತ್ರ ಅಭ್ಯರ್ಥಿಗಳಾಗಿ ಆನಂದ್ಮೂರ್ತಿ ಜೆ, ಇಬ್ರಾಹಿಂ ಷರೀಫ್ ತೂಬಗೆರೆ ಶರೀಫ್, ಇತರೆ ಪಕ್ಷದಿಂದ ಬಿ.ಶಿವಶಂಕರ್, ಗಂಗಮ್ಮ.ಎಂ ನಾಮಪತ್ರ ಸಲ್ಲಿಸಿದ್ದಾರೆ.

181- ನೆಲಮಂಗಲ ವಿಧಾನಸಭಾ ಕ್ಷೇತ್ರದಲ್ಲಿ(ಒಟ್ಟು 05 ಅಭ್ಯರ್ಥಿಗಳು) ಬಿ.ಎಸ್.ಪಿ ಪಕ್ಷದಿಂದ ಬಿ.ಎಮ್.ಮಹದೇವ್, ಬಿ.ಜೆ.ಪಿ ಪಕ್ಷದಿಂದ ಸಪ್ತಗಿರಿ ಮೇಘಾವತ್ ಶಂಕರ್ ನಾಯಕ್, ಪಕ್ಷೇತರ ಅಭ್ಯರ್ಥಿಗಳಾಗಿ ಉಮಾದೇವಿ, ಶ್ರೀನಿವಾಸ್.ವಿ, ಅರುಣ್ ಕುಮಾರ್.ಬಿ ನಾಮಪತ್ರ ಸಲ್ಲಿಸಿದ್ದಾರೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

Leave a Reply

Your email address will not be published. Required fields are marked *