ಜಿಲ್ಲಾ ಮಟ್ಟದ ಚೆಸ್ ಚಾಂಪಿಯನ್ ಶಿಪ್ ನಲ್ಲಿ ಪ್ರಥಮ‌ ಸ್ಥಾನ‌ ಪಡೆದ ತಾಲೂಕಿನ ಚೆಸ್ ಪ್ರತಿಭೆ ಸನ್ವಿತಾ ಎನ್

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ 9 ವರ್ಷದೊಳಗಿನ ಮಕ್ಕಳ ಚೆಸ್ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ದೊಡ್ಡಬಳ್ಳಾಪುರ ತಾಲೂಕಿನ ನ್ಯಾಷನಲ್ ಪ್ರೈಡ್ ಶಾಲೆಯಲ್ಲಿ ನಾಲ್ಕನೇ ತರಗತಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿನಿ ಸನ್ವಿತಾ‌ ಅವರು ಪ್ರಥಮ ಪಡೆದಿದ್ದಾರೆ.

ತಾಲೂಕಿನ ಸಾಸಲು ಹೋಬಳಿ ಪುಟ್ಟಲಿಂಗಯ್ಯನಪಾಳ್ಯ (ಲಿಂಗದವೀರನಹಳ್ಳಿ) ಗ್ರಾಮದ ನರಸಿಂಹಮೂರ್ತಿ ಹಾಗೂ ಜಯಶ್ರೀ ಕೆ.ಜೆ ದಂಪತಿಯ ಮಗಳಾದ ಸನ್ವಿತಾ ಎನ್ ಅವರು ಚೆಸ್ ಪಂದ್ಯಾವಳಿಯಲ್ಲಿ ಅಭೂತಪೂರ್ವ ಆಟವಾಡಿ ಪ್ರಥಮ ಸ್ಥಾನ ಪಡೆಯುವ ಮೂಲಕ ತಾಲೂಕಿಗೆ ಕೀರ್ತಿ ತಂದಿದ್ದಾರೆ.

ಚೆಸ್ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಪ್ರಥಮ‌ ಸ್ಥಾನ‌ ಪಡೆದ ಸನ್ವಿತಾ ಎನ್ ಅವರನ್ನು ಶಾಲಾ ಆಡಳಿತ ಮಂಡಳಿ ಹಾಗೂ ಗಣ್ಯರು ಅಭಿನಂದಿಸಿ ಪ್ರೋತ್ಸಾಹಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!