ಜಿಲ್ಲಾ ಎಂಐಎಸ್ ಸಮಾಲೋಚಕರ ಹುದ್ದೆಗೆ ಅರ್ಜಿ ಆಹ್ವಾನ

ಬೆಂಗಳೂರು ಗ್ರಾಮಾಂತರ ಜಿಲ್ಲಾ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ವ್ಯಾಪ್ತಿಯ ಜಲ ಜೀವನ್ ಮಿಷನ್ ಯೋಜನೆಯಡಿ ಖಾಲಿ ಇರುವ ತಾತ್ಕಾಲಿಕ ಹುದ್ದೆ ಗುತ್ತಿಗೆ / ಹೊರಗುತ್ತಿಗೆ ಆಧಾರದ ಮೇಲೆ ಜಿಲ್ಲಾ ಎಂ.ಐ.ಎಸ್ ಸಮಾಲೋಚಕರನ್ನು ನೇಮಿಸಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ಮಾನ್ಯತೆ ಪಡೆದ ವಿಶ್ವ ವಿದ್ಯಾಲಯದ ಮೂಲಕ ಪದವಿ/ ಸ್ನಾತಕೋತ್ತರ ಪದವಿಯಾದ ಅಂಕಿ ಅಂಶ (Statistics) ಮತ್ತು ಗಣಕ ಯಂತ್ರ ವಿಜ್ಞಾನದ ವಿಷಯದಲ್ಲಿ ಉತ್ತೀರ್ಣರಾಗಿರಬೇಕು ಕನಿಷ್ಠ 3 ವರ್ಷ ಕೆಲಸ ನಿರ್ವಹಿಸಿದ ಅನುಭವವಿರಬೇಕು. ವಯಸ್ಸು 45 ವರ್ಷ ಮೀರಿರಬಾರದು. ದೂರ ಶಿಕ್ಷಣ ಮುಖಾಂತರ ಪಡೆದ ಅಭ್ಯರ್ಥಿ ಅರ್ಹರಿರುವುದಿಲ್ಲ. ತಾತ್ಕಾಲಿಕವಾಗಿ ಒಂದು ವರ್ಷದ ಅವಧಿಗೆ ನೇಮಿಸಿಕೊಳ್ಳಲಾಗುವುದು‌.

ಭರ್ತಿ ಮಾಡಿದ ಅರ್ಜಿಯನ್ನು 2023 ರ ಆಗಸ್ಟ್ 25 ರೊಳಗೆ ಇ-ಮೇಲ್ eerdwsd.bngrl@gmail.com ಗೆ ಅಥವಾ ಕಾರ್ಯಪಾಲಕ ಇಂಜಿನಿಯರ್ ರವರ ಕಚೇರಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ, ಜಿಲ್ಲಾಡಳಿತ ಭವನ, ಚಪ್ಪರದಕಲ್ಲು (ಬೀರಸಂದ್ರ), ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಇಲ್ಲಿಗೆ ಖುದ್ದಾಗಿ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಬೆಂಗಳೂರು ಗ್ರಾಮಾಂತರ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *