ಜಿಎಸ್ ಟಿ ಸ್ಲ್ಯಾಬ್ ಗಳ ಪರಿಷ್ಕರಣೆ: ದಿನಬಳಕೆ ವಸ್ತುಗಳನ್ನು ಕನಿಷ್ಠ ಅಥವಾ ಶೂನ್ಯ ತೆರಿಗೆ ವ್ಯಾಪ್ತಿಗೆ ತರಲು ತೀರ್ಮಾನ: ಯಾವೆಲ್ಲಾ ವಸ್ತುಗಳ ಬೆಲೆ ಇಳಿಕೆಯಾಗಿದೆ? ಇದು ಯಾವಾಗಿನಿಂದ ಜಾರಿಯಾಗಲಿದೆ? ಇಲ್ಲಿದೆ ಮಾಹಿತಿ ಓದಿ…

ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಮಂಡಳಿಯು ಸ್ಲ್ಯಾಬ್ ಗಳಲ್ಲಿ ಮಹತ್ವದ ಬದಲಾವಣೆಗೆ ಅನುಮೋದಿಸಿ ದೇಶದ ಜನತೆಗೆ ಸಿಹಿ ಸುದ್ದಿ ನೀಡಿದ್ದಾರೆ..

ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ 56ನೇ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಈ ಮಹತ್ವದ ತೆರಿಗೆ ಬದಲಾವಣೆಗಳಿಗೆ ಅನುಮೋದನೆ ನೀಡಲಾಗಿದೆ.

ಪ್ರಸ್ತುತ, ನಾಲ್ಕು GST ಸ್ಲ್ಯಾಬ್‌ಗಳಿದ್ದು, ಶೇ.5, ಶೇ.12, ಶೇ.18 ಮತ್ತು ಶೇ, 28 ರಷ್ಟು ತೆರಿಗೆ ವಿಧಿಸಲಾಗುತ್ತಿದೆ. ಶೇ. 12 ಮತ್ತು ಶೇ.28ರ ತೆರಿಗೆ ಸ್ಲ್ಯಾಬ್‌ಗಳನ್ನು ತೆಗೆದುಹಾಕಿ, ಕೇವಲ ಶೇ. 5 ಮತ್ತು ಶೇ. 18ರ ಎರಡು ಹಂತದ ತೆರಿಗೆ ರಚನೆಯನ್ನು ಜಾರಿಗೆ ತರಲು ಸಭೆ ಒಪ್ಪಿಗೆ ಸೂಚಿಸಿದ್ದು, ಇದು ಸೆಪ್ಟೆಂಬರ್ 22 ರಿಂದ ಜಾರಿಗೆ ಬರಲಿದೆ.

ಸಾಮಾನ್ಯ ಜನರು ಮತ್ತು ಮಧ್ಯಮ ವರ್ಗದವರು ಬಳಸುವ ವಸ್ತುಗಳ ಮೇಲೆ “ಸಂಪೂರ್ಣ ತೆರಿಗೆ ಕಡಿತ ಮಾಡಲಾಗಿದೆ” ಎಂದು ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.

ಕೂದಲಿನ ಎಣ್ಣೆ, ಸೋಪು, ಶಾಂಪೂಗಳು, ಹಲ್ಲುಜ್ಜುವ ಬ್ರಷ್‌ಗಳು, ಟೂತ್‌ಪೇಸ್ಟ್, ಸೈಕಲ್‌ಗಳು ಮತ್ತು ಅಡುಗೆ ಸಾಮಾನುಗಳ ಮೇಲಿನ ಜಿಎಸ್‌ಟಿಯನ್ನು ಶೇಕಡ 5ಕ್ಕೆ ಇಳಿಸಲಾಗಿದೆ.

ಪಾದರಕ್ಷೆ ಮತ್ತು ಉಡುಪುಗಳಿಗ ಮೇಲಿನ ಜಿಎಸ್‌ಟಿ ಇಳಿಕೆಗೆ ಮುಖ್ಯವಾಗಿ ಅನುಮೋದನೆ ನೀಡಲಾಗಿದೆ. 2,500 ವರೆಗಿನ ಬೆಲೆಯ ಪಾದರಕ್ಷೆಗಳು ಮತ್ತು ಸಿದ್ಧ ಉಡುಪುಗಳ ಮೇಲಿನ ತೆರಿಗೆಯನ್ನು ಶೇ. 5ಕ್ಕೆ ಇಳಿಸಲು ಜಿಎಸ್‌ಟಿ ಮಂಡಳಿಯು ಒಪ್ಪಿಗೆ ನೀಡಿದೆ. ಪ್ರಸ್ತುತ, 1,000 ರೂ.ವರೆಗಿನ ವಸ್ತುಗಳಿಗೆ ಶೇ. 5 ಮತ್ತು ಅದಕ್ಕಿಂತ ಹೆಚ್ಚಿನ ಬೆಲೆಯ ವಸ್ತುಗಳಿಗೆ ಶೇ. 12ರಷ್ಟು ತೆರಿಗೆ ವಿಧಿಸಲಾಗುತ್ತಿದೆ.

ಕಾರುಗಳ ಬೆಲೆಯಲ್ಲಿ ಭಾರಿ ಇಳಿಕೆ

ಜಿಎಸ್ ಟಿ ಸ್ಲ್ಯಾಬ್ ಗಳ ಪರಿಷ್ಕರಣೆಯಲ್ಲಿ ಕಾರುಗಳ ಮೇಲಿನ ಜಿಎಸ್ ಟಿಯನ್ನು ಶೇ. 28 ರಿಂದ ಶೇ. 18ಕ್ಕೆ ಇಳಿಸಲಾಗಿದ್ದು, ಹಬ್ಬದ ಅವಧಿಯಲ್ಲಿ ವಾಹನಗಳ ಬೆಲೆಯಲ್ಲಿ ಭಾರೀ ಕಡಿತವಾಗಲಿದೆ.

ವೈಯಕ್ತಿಕ ಆರೋಗ್ಯ ವಿಮೆ ಮತ್ತು ಜೀವ ವಿಮೆಗೆ ಸಂಪೂರ್ಣ ತೆರಿಗೆ ವಿನಾಯಿತಿ ಘೋಷಿಸಲಾಗಿದೆ. ಜನಸಾಮಾನ್ಯರ ಪಾಲಿಗೆ ದುಬಾರಿಯಾಗಿರುವ ವೈದ್ಯಕೀಯ ವಿಮೆಯನ್ನು ಎಲ್ಲರಿಗೂ ಕೈಗೆಟುಕುವಂತೆ ಮಾಡಲು ಸರಕಾರ ಉದ್ದೇಶಿಸಿದೆ.

ಇದರ ಜೊತೆಗೆ ಕಾನ್ಸರ್‌ ಔಷಧಿಗಳು ಸೇರಿದಂತೆ 33 ಜೀವರಕ್ಷಕ ಔಷಧಿಗಳಿಗೂ ಇನ್ನು ಮುಂದೆ ತೆರಿಗೆ ಇರುವುದಿಲ್ಲ ಎಂದು ನಿರ್ಮಲಾ ಸೀತಾರಾಮನ್‌ ಸ್ಪಷ್ಟಪಡಿಸಿದ್ದಾರೆ.

ಇದಲ್ಲದೆ ಎಲ್ಲಾ ರೀತಿಯ ಬ್ರೆಡ್‌, ಹಾಲಿನ ಉತ್ಪನ್ನಗಳಿಗೂ ಶೂನ್ಯ ತೆರಿಗೆ ವಿಧಿಸಲಾಗಿದೆ. ಅದೇ ರೀತಿ ಸಾದಾ ಚಪಾತಿಗಳು, ಪರೋಟ, ಕಾಕ್ರಾ, ರೋಟಿಗಳನ್ನೂ ಶೂನ್ಯ ತೆರಿಗೆ ವ್ಯಾಪ್ತಿಗೆ ತರಲಾಗಿದೆ.

ಯಾವುದು ದುಬಾರಿ?

ತಂಬಾಕು, ಪಾನ್‌ಮಸಾಲಾ, ಐಷಾರಾಮಿ ಕಾರುಗಳು ಶೇ. 40ರ ತೆರಿಗೆ ವ್ಯಾಪ್ತಿಯಲ್ಲಿ ಮುಂದುವರಿಯಲಿವೆ. ಖಾಸಗಿ ವಿಮಾನಗಳನ್ನೂ ಇದೇ ವ್ಯಾಪ್ತಿಯಲ್ಲಿ ಇರಿಸಲಾಗಿದೆ. ಯಾಚ್‌ಗಳು, ಖಾಸಗಿ ಐಷಾರಾಮಿ ಬೋಟ್‌ಗಳನ್ನೂ ಈ ವ್ಯಾಪ್ತಿಗೆ ತರಲಾಗಿದೆ.

ವಿಶೇಷ ಎಂದರೆ ಕೂಲ್‌ ಡ್ರಿಂಕ್ಸ್‌ಗಳನ್ನೂ ಶೇ. 40ರ ತೆರಿಗೆ ವ್ಯಾಪ್ತಿಯಲ್ಲಿ ಇರಿಸಲಾಗಿದೆ. ಇದರಿಂದ ತಂಪು ಪಾನೀಯಗಳ ದರ ಗಣನೀಯವಾಗಿ ಏರಿಕೆಯಾಗಲಿದೆ.

1.ದೈನಂದಿನ ಅಗತ್ಯ ವಸ್ತುಗಳು

* ಹೇರ್ ಆಯಿಲ್, ಶಾಂಪೂ, ಟೂತ್‌ಪೇಸ್ಟ್, ಸೋಪ್, ಟೂತ್ ಬ್ರಷ್, ಶೇವಿಂಗ್ ಕ್ರೀಮ್ ಹಳೆಯ ದರ18%, ಹೊಸ ದರ‌ 5% ಇರಲಿದೆ.

* ಬೆಣ್ಣೆ, ತುಪ್ಪ, ಚೀಸ್ ಮತ್ತು ಡೈರಿ ಸ್ಪ್ರೆಡ್‌ಗಳು ಹಳೆಯ ದರ 12%, ಹೊಸ ದರ‌ 5%

* ಪ್ಯಾಕೇಜ್ ಮಾಡಿದ ಕುರುಕಲು ತಿಂಡಿಗಳು ಹಳೆಯ ದರ 12% ಹೊಸ ದರ‌ 5%

*/ಪಾತ್ರೆಗಳು ಹಳೆಯ ದರ 12%, ಹೊಸ ದರ‌ 5%

* ಹಾಲುಣಿಸುವ ಬಾಟಲ್‌ಗಳು, ಮಕ್ಕಳಿಗಾಗಿ ನ್ಯಾಪ್‌ಕಿನ್‌ಗಳು ಮತ್ತು ಕ್ಲಿನಿಕಲ್ ಡೈಪರ್‌ಗಳು‌ ಹಳೆಯ ದರ 12%, ಹೊಸ ದರ‌ 5%

* ಹೊಲಿಗೆ ಯಂತ್ರಗಳು ಮತ್ತು ಬಿಡಿ ಭಾಗಗಳು ಹಳೆಯ ದರ 12%, ಹೊಸ ದರ‌ 5%

2. ರೈತರು ಮತ್ತು ಕೃಷಿಗೆ ಸಂಬಂಧಿಸಿದ ಉತ್ಪನ್ನಗಳು

ಟ್ರ್ಯಾಕ್ಟರ್ ಟೈರ್‌ಗಳು ಮತ್ತು ಬಿಡಿಭಾಗಗಳು ಹಳೆಯ ದರ 18%, ಹೊಸ ದರ‌ 5%

ಟ್ರ್ಯಾಕ್ಟರ್‌ಗಳು 12% to 5%

ನಿರ್ದಿಷ್ಟ ಜೈವಿಕ-ಕೀಟನಾಶಕಗಳು, ಸೂಕ್ಷ್ಮ-ಪೋಷಕಾಂಶಗಳು 12% to 5%

ಹನಿ ನೀರಾವರಿ ವ್ಯವಸ್ಥೆ ಮತ್ತು ಸ್ಪ್ರಿಂಕ್ಲರ್‌ಗಳು 12% to 5%

ಕೃಷಿ, ತೋಟಗಾರಿಕೆ ಅಥವಾ ಅರಣ್ಯ ಯಂತ್ರಗಳು 12% to 5%

3. ಆರೋಗ್ಯ ವಲಯದ ಉತ್ಪನ್ನಗಳು

ವೈಯಕ್ತಿಕ ಆರೋಗ್ಯ ಮತ್ತು ಜೀವ ವಿಮೆ 18% to ಇಲ್ಲ (Nil)

ಥರ್ಮಾಮೀಟರ್ 18% to 5%

ವೈದ್ಯಕೀಯ ದರ್ಜೆಯ ಆಮ್ಲಜನಕ 12% to 5%

ಎಲ್ಲಾ ಡಯಾಗ್ನೋಸ್ಟಿಕ್ ಕಿಟ್‌ಗಳು ಮತ್ತು ರೀಏಜೆಂಟ್ಸ್‌
12% to 5%

ಗ್ಲುಕೋಮೀಟರ್ ಮತ್ತು ಟೆಸ್ಟ್ ಸ್ಟ್ರಿಪ್‌ಗಳು 12% to 5%

ದೃಷ್ಟಿ ಸರಿಪಡಿಸುವ ಕನ್ನಡಕಗಳು 12% to 5%

4. ಕೈಗೆಟುಕುವ ದರದಲ್ಲಿ ಆಟೋಮೊಬೈಲ್‌ಗಳು

ಪೆಟ್ರೋಲ್ ಮತ್ತು ಹೈಬ್ರಿಡ್, ಎಲ್‌ಪಿಜಿ, ಸಿಎನ್‌ಜಿ ಕಾರುಗಳು (1200ಸಿಸಿ & 4 ಮೀಟರ್‌ ಮೀರದಂತೆ) 28% to 18%

ಡೀಸೆಲ್ ಮತ್ತು ಹೈಬ್ರಿಡ್ ಕಾರುಗಳು (1500ಸಿಸಿ & 4 ಮೀಟರ್‌ ಮೀರದಂತೆ) 28% to 18%

ತ್ರಿಚಕ್ರ ವಾಹನಗಳು 28% to 18%

ಮೋಟಾರ್ ಸೈಕಲ್‌ಗಳು (350ಸಿಸಿ ಮತ್ತು ಕೆಳಗೆ) 28% to 18%

ಸರಕು ಸಾಗಣೆ ವಾಹನಗಳು 28% to 18%

5. ಶೈಕ್ಷಣಿಕ ಉತ್ಪನ್ನಗಳು

ನಕ್ಷೆಗಳು, ಚಾರ್ಟ್‌ಗಳು ಮತ್ತು ಗ್ಲೋಬ್‌ಗಳು 12% to ಇಲ್ಲ (Nil)

ಪೆನ್ಸಿಲ್‌ಗಳು, ಶಾರ್ಪನರ್‌ಗಳು, ಕ್ರಯಾನ್‌ಗಳು ಮತ್ತು ಪೇಸ್ಟಲ್‌ಗಳು 12% to ಇಲ್ಲ (Nil)

ಅಭ್ಯಾಸ ಪುಸ್ತಕಗಳು ಮತ್ತು ನೋಟ್‌ಬುಕ್‌ಗಳು 12% to ಇಲ್ಲ (Nil)

ಎರೇಸರ್ (ಅಳಿಸುವ ರಬ್ಬರ್) 5% to ಇಲ್ಲ (Nil)

6. ಎಲೆಕ್ಟ್ರಾನಿಕ್ ಉಪಕರಣಗಳು

ಏರ್ ಕಂಡಿಷನರ್‌ಗಳು (ಎಸಿ) 28% to 18%

ಟೆಲಿವಿಷನ್ (32 ಇಂಚಿಗಿಂತ ಹೆಚ್ಚು) (ಎಲ್‌ಇಡಿ ಮತ್ತು ಎಲ್‌ಸಿಡಿ ಟಿವಿಗಳು ಸೇರಿದಂತೆ) 28% to 18%

ಮಾನಿಟರ್‌ಗಳು ಮತ್ತು ಪ್ರೊಜೆಕ್ಟರ್‌ಗಳು 28% to 18%

ಪಾತ್ರೆ ತೊಳೆಯುವ ಯಂತ್ರಗಳು (ಡಿಶ್‌ ವಾಷರ್‌ಗಳು) 28% to 18%

Leave a Reply

Your email address will not be published. Required fields are marked *

error: Content is protected !!