
ದೊಡ್ಡಬಳ್ಳಾಪುರ ತಾಲೂಕಿನ ಜಿಂಕೆಬಚ್ಚಹಳ್ಳಿ ಶ್ರೀವೀರಾಂಜನೇಯಸ್ವಾಮಿ ದೇವಾಲಯದಲ್ಲಿ ಕಳ್ಳತನವಾಗಿರುವ ಘಟನೆ ಇಂದು ಮುಂಜಾನೆ ಬೆಳಕಿಗೆ ಬಂದಿದೆ.
ನಿನ್ನೆ ದೇವಾಲಯದಲ್ಲಿ ಹನುಮಜಯಂತಿ ಪ್ರಯುಕ್ತ ವಿಶೇಷ ಪೂಜೆ ಕಾರ್ಯಕ್ರಮಗಳನ್ನು ತಡರಾತ್ರಿ ಒಂದು ಗಂಟೆಯವರೆಗೂ ನೆರವೇರಿಸಲಾಗಿತ್ತು. ಪೂಜೆ ಮುಗಿಸಿ ಎಲ್ಲರು ಮನೆಗಳಿಗೆ ತೆರಳಿದಾಗ ತಡರಾತ್ರಿ ಎರಡು ಗಂಟೆಯ ನಂತರ ಕಳ್ಳರ ಕೈಚಳಕ ನಡೆದಿರಬಹುದೆಂದು ಗ್ರಾಮಸ್ಥರು ಹೇಳುತ್ತಿದ್ದಾರೆ.

ಹುಂಡಿ ಹೊಡೆದಿರುವ ಕಳ್ಳರು ಹಣ ಮತ್ತು ಸಿಸಿ ಕ್ಯಾಮೆರಾದ ಡಿವಿಆರ್ ಗಳ ಸಮೇತ ಪರಾರಿಯಾಗಿದ್ದಾರೆ ಎಂದು ತಳಿದುಬಂದಿದೆ.
ಹುಂಡಿಯಲ್ಲಿ ಸುಮಾರು ಒಂದೂವರೆ ವರ್ಷದಿಂದ ಭಕ್ತರ ಕಾಣಿಕೆ ಹಣ ಇತ್ತು ಎಂದು ಸ್ಥಳೀಯರು ಹೇಳಿದ್ದಾರೆ.

ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.