ದೊಡ್ಡಬಳ್ಳಾಪುರ ನಗರದ ಲಯನ್ಸ್ ಕ್ಲಬ್ ಆಫ್ ದೊಡ್ಡಬಳ್ಳಾಪುರ ಆರ್.ಎಲ್.ಜಾಲಪ್ಪ ಇನ್ಸ್‌ಟಿಟ್ಯೂಷನ್ಸ್‌ಗೆ 2024-25ನೇ ಸಾಲಿನ ಅತ್ಯುತ್ತಮ ಲಯನ್ಸ್ ಸಂಸ್ಥೆ ಪುರಸ್ಕಾರ ಲಭಿಸಿದೆ ಎಂದು ಕ್ಲಬ್‌ನ ನಿರ್ಗಮಿತ ಅಧ್ಯಕ್ಷ ಜೆ.ಆರ್.ರಾಕೇಶ್ ಹೇಳಿದರು.
ಇಲ್ಲಿನ ಆರ್.ಎಲ್.ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
ಲಯನ್ಸ್ ಜಿಲ್ಲೆ 317ಎಫ್ ವ್ಯಾಪ್ತಿಯ 88 ಲಯನ್ಸ್ ಸಂಸ್ಥೆಗಳ ಪೈಕಿ ಸೇವಾ ಹಾಗೂ ಆಡಳಿತಾತ್ಮಕ ಕಾರ್‍ಯಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಕ್ಲಬ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, 23 ಮಹತ್ವದ ಪಾರಿತೋಷಕಗಳನ್ನು ಪಡೆದಿದೆ. ಕಳೆದ 4 ವರ್ಷಗಳ ಹಿಂದೆಯಷ್ಟೇ ಸ್ಥಾಪನೆಯಾದ ಈ ಸಂಸ್ಥೆ ಸತತ 4ನೇ ಬಾರಿಯೂ ಅತ್ಯುತ್ತಮ ಲಯನ್ಸ್ ಕ್ಲಬ್ ಪುರಸ್ಕಾರ ಪಡೆಯುತ್ತಿರುವುದು ಮಹತ್ವದ ಸಾಧನೆಯಾಗಿದೆ. ಈ ಹಂತದಲ್ಲಿ ಶ್ರೀ ದೇವರಾಜ ಅರಸ್ ಶಿಕ್ಷಣ ಸಂಸ್ಥೆಯ ಸಹಕಾರವೂ ಪ್ರಮುಖವಾದದ್ದು. ಮಹತ್ವದ ಸಾಧನೆಯಲ್ಲಿ ಶ್ರಮಿಸಿದ ಎಲ್ಲರೂ ಅಭಿನಂದನಾರ್ಹರು ಎಂದು ತಿಳಿಸಿದರು.
ಲಯನ್ಸ್ ಜಿಇಟಿ ಸಂಯೋಜಕ ಎಂ.ಆರ್.ಶ್ರೀನಿವಾಸ್ ಮಾತನಾಡಿ, ಸತತ 4ನೇ ಬಾರಿಗೆ ಅತ್ಯುತ್ತಮ ಕ್ಲಬ್ ಪುರಸ್ಕಾರಕ್ಕೆ ಪಾತ್ರವಾಗಿರುವುದು ಸಂಸ್ಥೆಯ ಹೆಗ್ಗಳಿಕೆಯಾಗಿದೆ. ನಂಬರ್ 1 ಉತ್ತಮ ಕ್ಲಬ್ ಪುರಸ್ಕಾರ, ಉತ್ತಮ ಅಧ್ಯಕ್ಷ, ಖಜಾಂಚಿ ಪ್ಲಾಟಿನಂ ಪುರಸ್ಕಾರ, ಉತ್ತಮ ಕಾರ್ಯದರ್ಶಿ ಡೈಮಂಡ್ ಪುರಸ್ಕಾರ ಸೇರಿದಂತೆ ಜಿಇಟಿ ಸಂಯೋಜಕ, ಡಿಸಿ ಮಧುಮೇಹ, ಮಧುಮೇಹ ತಪಾಸಣೆ, ದೃಷ್ಟಿ ತಪಾಸಣೆ-ಚಿಕಿತ್ಸೆ, ಹಸಿವು ನಿವಾರಣೆ, ಕ್ಲಬ್ ವಿಸ್ತರಣೆ, ಮಾನವೀಯ ಸೇವೆ, ಸ್ಕಾಪ್‌ಬುಕ್, ಕ್ವೆಸ್ಟ್ ವಿಭಾಗಗಳಲ್ಲಿ ಪ್ಲಾಟಿನಂ, ದಂತ ತಪಾಸಣೆ, ಪರಿಸರ, ಫೂಟ್‌ಪಲ್ಸ್ ಥೆರಪಿಯಲ್ಲಿ ಡೈಮಂಡ್, ಇಮೇಜ್ ಬಿಲ್ಡಿಂಗ್, ಸ್ವಚ್ಛಭಾರತ್ ಅಭಿಯಾನ, ಆರೋಗ್ಯ ಶಿಬಿರಗಳು, ಯುವ ಸಬಲೀಕರಣ, ರಕ್ತದಾನ ವಿಭಾಗಗಳಲ್ಲಿ ಸುವರ್ಣ ಹಾಗೂ ಪಶುವೈದ್ಯಕೀಯ ವಿಭಾಗದಲ್ಲಿ ಬೆಳ್ಳಿ ಪುರಸ್ಕಾರಗಳನ್ನು ಸಂಸ್ಥೆ ಪಡೆದಿದೆ ಎಂದು ವಿವರಿಸಿದರು.
ಕ್ಲಬ್‌ನ ನಿಯೋಜಿತ ಅಧ್ಯಕ್ಷ ಪ್ರೊ.ರವಿಕಿರಣ್.ಕೆ.ಆರ್ ಮಾತನಾಡಿ, ಪ್ರಸಕ್ತ ವರ್ಷದಲ್ಲಿ ಸುಮಾರು 8 ಲಕ್ಷಕ್ಕೂ ಅಧಿಕ ಫಲಾನುಭವಿಗಳನ್ನು ಕ್ಲಬ್‌ನ ಸೇವಾ ಕಾರ್ಯಗಳ ಮೂಲಕ ತಲುಪಲಾಗಿದೆ. ಪ್ರಸಕ್ತ ಅವಧಿಯಲ್ಲಿ ಜೆ.ಆರ್.ರಾಕೇಶ್ ಅವರ ನೇತೃತ್ವದಲ್ಲಿ ನಡೆಸಿದ ಸೇವಾ ಕಾರ್ಯಗಳು ಗಣನೀಯ. ಮಧುಮೇಹ ವಿಶೇಷ ಕ್ಲಬ್ ಆಗಿ ನೊಂದಾಯಿತವಾಗಿರುವ ಸಂಸ್ಥೆಯಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಹಲವು ಸೇವಾ ಕಾರ್ಯಗಳು ನಡೆಯುತ್ತಿವೆ. ಆರ್.ಎಲ್.ಜಾಲಪ್ಪ ಆಸ್ಪತ್ರೆಯ ಸಹಯೋಗದಲ್ಲೂ ಮಹತ್ವದ ಯೋಜನೆಗಳು ಅನುಷ್ಠಾನಗೊಂಡಿವೆ. ಜಿಲ್ಲೆ 317ಎಫ್‌ನ ಹಲವು ಮುಖಂಡರ ಮಾರ್ಗದರ್ಶನವೂ ಗಣನೀಯ ಎಂದು ತಿಳಿಸಿದರು.
*ಜಿಲ್ಲಾ ರಾಜ್ಯಪಾಲರಿಂದ ಪುರಸ್ಕಾರ:*
ಬೆಂಗಳೂರಿನ ಹೆಬ್ಬಾಳ ಬಳಿಯ ಯುಎಎಸ್ ಕ್ಯಾಂಪಸ್ ಸಭಾಂಗಣದಲ್ಲಿ ನಡೆದ ಜಿಲ್ಲೆ317ಎಫ್‌ನ 2024-25ನೇ ಸಾಲಿನ ಪುರಸ್ಕಾರ ಪ್ರದಾನ, ಅಭಿನಂದನಾ ಕಾರ್‍ಯಕ್ರಮದಲ್ಲಿ ಜಿಲ್ಲಾ ರಾಜ್ಯಪಾಲ ಸಿ.ಎಂ.ನಾರಾಯಣಸ್ವಾಮಿ, ಅತ್ಯುತ್ತಮ ಲಯನ್ಸ್ ಕ್ಲಬ್ ಬ್ಯಾನರ್ ಅನ್ನು ಸಂಸ್ಥೆಯ ಅಧ್ಯಕ್ಷರಿಗೆ ಹಸ್ತಾಂತರಿಸಿದರು. ಇದೇ ವೇಳೆ ವಿವಿಧ 23 ಪಾರಿತೋಷಕಗಳನ್ನು ಪ್ರದಾನ ಮಾಡಲಾಯಿತು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಶ್ರೀದೇವರಾಜ್ ಅರಸ್ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಜೆ.ರಾಜೇಂದ್ರ, ಲಯನ್ಸ್ ಜಿಲ್ಲಾ ಮಧುಮೇಹ ಸಂಯೋಜಕ ಎಲ್.ಎನ್.ಪ್ರದೀಪ್‌ಕುಮಾರ್, ಲಯನ್ಸ್ ಕಾರ್ಯದರ್ಶಿ ಕೆ.ಸಿ.ನಾಗರಾಜ್, ಖಜಾಂಚಿ ಎಸ್.ರವಿಕುಮಾರ್, ನಿಕಟಪೂರ್ವ ಅಧ್ಯಕ್ಷ ಡಾ.ಎಂ.ಶ್ರೀನಿವಾಸರೆಡ್ಡಿ, ಆರ್‌ಎಲ್‌ಜೆಐಟಿ ಪ್ರಾಂಶುಪಾಲ ಡಾ.ವಿಜಯ್‌ಕಾರ್ತಿಕ್, ಲಯನ್ಸ್ ಉಪಾಧ್ಯಕ್ಷ ಮುನಿರಾಮೇಗೌಡ, ನಿಯೋಜಿತ ಕಾರ್ಯದರ್ಶಿ ಸುಮಾ ಪ್ರಸನ್ನ, ಮುಕೇಶ್, ಪದಾಧಿಕಾರಿಗಳಾದ ವರದರಾಜು, ವೀಣಾ, ಬಾಬುಸಾಬಿ, ಜಿಯಾವುಲ್ಲಾಖಾನ್, ಅರುಂಧತಿ, ಲಕ್ಷ್ಮಿಶ್ರೀನಿವಾಸ್, ಪ್ರಸನ್ನಕುಮಾರ್, ಹರ್ಷ, ಮಂಜುನಾಥ್, ಕಾವ್ಯ, ಮಂಜುಳಾ, ರೋಜಾ, ವೆಂಕಟೇಶ್, ರಮೇಶ್, ರಾಘವೇಂದ್ರಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.
ಜಗತ್ತು ದಿನದಿಂದ ದಿನಕ್ಕೆ ವೇಗವಾಗಿ ಬದಲಾಗುತ್ತಿದ್ದು, ಹೆಚ್ಚುತ್ತಿರುವ ಸ್ಪರ್ಧೆಯನ್ನು ಎದುರಿಸುವ ಸಾಮರ್ಥ್ಯವನ್ನು ಮಕ್ಕಳಲ್ಲಿ ಬೆಳೆಸಲು ಪೋಷಕರು ಹಾಗೂ ಶಿಕ್ಷಕರು ಒಟ್ಟಾಗಿ…
ಭಾರತೀಯರ ಆಹಾರ ವೈವಿಧ್ಯತೆ..... ರುಚಿ - ತೃಪ್ತಿ - ಸಮಾನತೆ..... ಅಡುಗೆ ಅನುಭವದ ಮೂಸೆಯೊಳಗೆ ಬೆಳೆದು ಬರುವ ವಿಜ್ಞಾನವೆಂಬ ಕಲೆ....…
2026-27 ಸಾಲಿಗೆ ಕೈಮಗ್ಗ ಮತ್ತು ಜವಳಿ ಇಲಾಖೆ ವತಿಯಿಂದ ಎಲೆಕ್ಟ್ರಾನಿಕ್ ಜಕಾರ್ಡ್ ಖರೀದಿ ಯೋಜನೆಯಡಿ ಸಹಾಯಧನಕ್ಕಾಗಿ ಅರ್ಹ ಫಲಾನುಭವಿಗಳಿಂದ ಅರ್ಜಿಗಳನ್ನ…
ದೊಡ್ಡಬಳ್ಳಾಪುರ: ನೆಲಮಂಗಲ–ದೊಡ್ಡಬಳ್ಳಾಪುರ ಮುಖ್ಯ ರಸ್ತೆಯ ಕೊಡಿಪಾಳ್ಯ ಸಮೀಪ ಕ್ಯಾಂಟರ್‌ವೊಂದು ಪಲ್ಟಿಯಾಗಿ ಬಿದ್ದ ಘಟನೆ ನಡೆದಿದ್ದು, ಅದೃಷ್ಟವಶಾತ್ ಭಾರೀ ಅನಾಹುತ ತಪ್ಪಿದೆ.…
ಬೆಂಗಳೂರು ಗ್ರಾಮಾಂತರ: ಮೊಬೈಲ್ ಫೋನ್ ಕಳೆದುಹೋಗುವುದು ಅಥವಾ ಕಳ್ಳತನವಾಗುವುದು ಇಂದಿನ ಡಿಜಿಟಲ್ ಯುಗದಲ್ಲಿ ಆತಂಕದ ಸಂಗತಿಯಾಗಿದೆ. ಮೊಬೈಲ್ ಕೇವಲ ಸಂಪರ್ಕ…
ವಿರೋಧ ಪಕ್ಷದ ನಾಯಕನಾಗಿ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು. ಅದನ್ನು ಬಿಟ್ಟು ಎಸ್‌ಐಆರ್‌ನಲ್ಲಿ ನಡೆದಿರುವ ಅಕ್ರಮಗಳ ಪರ ಮಾತನಾಡುವವರಿಗೆ ಯಾವ ಮರ್ಯಾದೆ ಇದೆ…