
ಜಾತ್ರೆಯೊಂದರಲ್ಲಿ ವ್ಯಕ್ತಿಯ ಭೀಕರ ಕೊಲೆಯಾಗಿರುವ ಘಟನೆ ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಹಣ್ಣಿಕೇರಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಸಂಗನಗೌಡ ಪಾಟೀಲ್ (50) ಕೊಲೆಯಾದ ವ್ಯಕ್ತಿ.
ಕಳೆದ ಕೆಲ ವರ್ಷಗಳಿಂದ ಎರಡು ಕುಟುಂಬಗಳ ಮಧ್ಯೆ ವೈಷಮ್ಯವಿತ್ತು. ಸಂಗನಗೌಡನು ರಾಜಕೀಯ ವಿರೋಧಿಗಳ ಮನೆ ಮುಂದೆ ಕುಣಿಯುತ್ತಿದ್ದ. ಕುಣಿಬೇಡಾ ಮುಂದೆ ಹೋಗು ಎಂದು ಆರೋಪಿಗಳು ಹೇಳಿದ್ದರಂತೆ.
ಮೃತ ವ್ಯಕ್ತಿ ಮತ್ತು ಆರೋಪಿಗಳ ಮಧ್ಯೆ ವಾಗ್ವಾದ ಬಳಿಕ ಸಂಗನಗೌಡನ ಕೊಲೆಯಲ್ಲಿ ಅಂತ್ಯವಾಗಿದೆ.
ಕೊಲೆ ಮಾಡಲು ಸಜ್ಜು ಮಾಡಿಕ್ಕೊಂಡೆ ಆರೋಪಿಗಳು ಕುಳಿತಿದ್ದು, ಕುಡಗೋಲು, ಕೊಡಲಿ, ಚೈನ್, ಬಡಿಗೆ, ಕಬ್ಬಿನರಾಡ್ ನಿಂದು ಹೊಡೆದು ಕೊಲೆ ಮಾಡಲಾಗಿದೆ.
ಸಂಗನಗೌಡನನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ಯುವ ಮಾರ್ಗದಲ್ಲಿ ಸಾವನ್ನಪ್ಪಿದ್ದಾನೆ.
ಕೊಲೆಗೆ ಸಂಭಂದಿಸಿದಂತೆ 8 ಜನ ಆರೋಪಿಗಳ ಬಂಧನ
ದೇಮಪ್ಪ ಬಸಲಿಂಗಪ್ಪ ಬಳಗನ್ನವರ (49), ಮಂಜುನಾಥ ಮಾರುತಿ ಬಳಗನ್ನವರ (27), ರುದ್ರಪ್ಪ ಬಳಗನ್ನವರ (36), ವಿಜಯ ಬಳಗನ್ನವರ (26), ಸೂರಪ್ಪ ಬಳಗನ್ನವರ (56), ಸಿದ್ದಪ್ಪ ಬಸಪ್ಪ ಸಿಂಗಾಡಿ (21), ನಾಗರಾಜ ಬಳಗನ್ನವರ (26) ಹಾಗೂ ಬಸವಂತಪ್ಪ ಲಕ್ಷ್ಮಣ ಬಳಗನ್ನವರ (45) ಬಂಧಿತ ಆರೋಪಿಗಳು.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನೇಸರಗಿ ಠಾಣೆ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ..