ಜಾತ್ರೆಯಲ್ಲಿ ವೃದ್ಧೆ ಕೊರಳಲ್ಲಿದ್ದ 5 ಲಕ್ಷಕ್ಕೂ ಹೆಚ್ಚು ಬೆಲೆ ಬಾಳುವ ಸುಮಾರು 50 ಗ್ರಾಂ ತೂಕದ ಮಾಂಗಲ್ಯ ಸರವನ್ನು ವೃದ್ಧೆಗೆ ಅರಿವಿಲ್ಲದೇ ಖದೀಮರು ಕದ್ದೊಯ್ದಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬೆಳವಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಮಲ್ಲೋಹಳ್ಳಿ ಗ್ರಾಮದಲ್ಲಿ ನಡೆದ ಶ್ರೀ ರಂಗನಾಥ ಸ್ವಾಮಿ 87ನೇ ಬ್ರಹ್ಮರಥೋತ್ಸವದಲ್ಲಿ ನಡೆದಿದೆ.
ಏ.13ರಂದು ಮಧುರೆ ಹೋಬಳಿಯ ಮಲ್ಲೋಹಳ್ಳಿ ಗ್ರಾಮದಲ್ಲಿ ಶ್ರೀ ರಂಗನಾಥ ಸ್ವಾಮಿಯ 87ನೇ ಬ್ರಹ್ಮರಥೋತ್ಸವ ಏರ್ಪಡಿಸಲಾಗಿತ್ತು. ಈ ಬ್ರಹ್ಮರಥೋತ್ಸವ ನಿಮಿತ್ತ ದೂರುದಾರರಾದ ಲಕ್ಷೀದೇವಿ ಅವರು ನೆಲಮಂಗಲದಿಂದ ತಮ್ಮ ತವರು ಮನೆ ಇಸ್ತೂರು ಗ್ರಾಮಕ್ಕೆ ಬಂದು ಮಲ್ಲೋಹಳ್ಳಿ ಗ್ರಾಮದಲ್ಲಿ ನಡೆಯುತ್ತಿದ್ದ ಬ್ರಹ್ಮರಥೋತ್ಸವಕ್ಕೆ ಮಕ್ಕಳು ಸಮೇತ ತಾಯಿ ರಂಗಮ್ಮ ಜೊತೆ ಹೋಗಿದ್ದರು.
ದೂರುದಾರರಾದ ಲಕ್ಷ್ಮೀದೇವಿ ಅವರು ತಮ್ಮ ತಾಯಿ 71 ವರ್ಷದ ವಯಸ್ಸಿನ ರಂಗಮ್ಮಗೆ 2012ರಲ್ಲಿ ನೆಲಮಂಗಲ ಟೌನ್ ನಲ್ಲಿರುವ ಗಿರವಿ ಅಂಗಡಿಯೊಂದರಲ್ಲಿ 1.45 ಲಕ್ಷ ಮೌಲ್ಯದ ಒಟ್ಟು 50 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರ ಮತ್ತು ಒಂದು ಚಿನ್ನದ ಕಾಸನ್ನು ಮಾಡಿಸಿ ಕೊಟ್ಟಿದ್ದರು.
ಬ್ರಹ್ಮರಥೋತ್ಸವದಲ್ಲಿ ರಥ ಎಳೆಯುವಾಗ ಆ ಜನಜಂಗುಳಿಯಲ್ಲಿ ಯಾರೋ ಖದೀಮರು ರಂಗಮ್ಮ ಕೊರಳಲ್ಲಿದ್ದ ಚಿನ್ನದ ಮಾಂಗಲ್ಯ ಸರವನ್ನು ಕದ್ದು ಪರಾರಿಯಾಗಿದ್ದಾರೆ.
ಅದೇ ದಿನ ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲು ಮಾಡಲಾಗಿರುತ್ತದೆ.
ದೊಡ್ಡಬೆಳವಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ..