ಕೋಲಾರ: ಕಾಯಕಯೋಗಿ ಬಸವಣ್ಣನ ಸದಾ ಕಾಲ ಸ್ವರಿಸುವ ಮೂಲಕ ಜಾತಿ ವ್ಯವಸ್ಥೆಯನ್ನು ಬುಡ ಸಮೇತ ಕೀಳುವ ಪ್ರತಿಜ್ಞೆ ಮಾಡಬೇಕೆಂದು ರೈತ ಸಂಘದ ರಾಜ್ಯ ಉಪಾದ್ಯಕ್ಷ ಕೆ.ನಾರಾಯಣಗೌಡ ಕೂಲಿ ಕಾರ್ಮಿಕರಿಗೆ ಬಸವಣ್ಣನ ಚರಿತ್ರೆಯ ಬಗ್ಗೆ ಮನವರಿಕೆ ಮಾಡಿದರು.
12ನೇ ಶತಮಾನದಲ್ಲಿ ಸಮಾಜದ ಅನಾಚಾರಗಳಿಗೆ ವಿರುದ್ದವಾಗಿ ವಚನ ಸಾಹಿತ್ಯದ ಮೂಲಕ ಉತ್ತರ ನೀಡಿದ್ದಂತಹ ಬಸವಣ್ಣ ಯಾವುದೇ ಒಂದು ದರ್ಮಕ್ಕೆ ಸೀಮಿತವಾದವರಲ್ಲ ಅವರು ಇಡೀ ಮಾನವ ಕುಲಕೋಟಿಗೆ ತಮ್ಮ ಭಕ್ತಿ ಪ್ರಧಾನ ವಚನಗಳಲ್ಲಿ ಸಮಾಜದ ಅಂಕು ದೊಂಕುಗಳನ್ನು ಅಂದಿನ ಕಾಲದ ಸಮಾಜದಲ್ಲಿದ್ದ ಮೇಲೂ ಕೀಳೂ ಡಂಭಾಚಾರ ಮೂಡನಂಬಿಕೆ ಮುಂತಾದವುಗಳ ವಿರುದ್ದ ದ್ವನಿ ಎತ್ತಿದ ಬಸವಣ್ಣನವರು ವಚನಗಳೆಂಬ ಹೊಸ ಸಾಹಿತ್ಯ ಹುಟ್ಟು ಹಾಕಿದ ಕಾಯಕ ಯೋಗಿ ಇವರ ವಚನಗಳನ್ನು ಪ್ರತಿಯೊಬ್ಬರು ಸ್ಮರಿಸಬೇಕೆಂದು ವಿಚಾರದ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದರು.
ಕೂಲಿ ಕಾರ್ಮಿಕ ಮಹಿಳೆ ಐತಾಂಡಹಳ್ಳಿ ಶೈಲಜ ಮಾತನಾಡಿ ಬಸವಣ್ಣನವರು ಭಕ್ತರೆಲ್ಲಾ ಒಂದೇ ಅವರಲ್ಲಿ ತಾರತಮ್ಯವಿಲ್ಲ ಎಲ್ಲರೂ ಸಮಾನರು ಎಂದು ಸಾರಿದರು ನಾವು ಮಾಡಿದ ಉದ್ಯೋಗಗಳು ಹಾಗೂ ರಾಜಕೀಯ ವ್ಯಕ್ತಿಗಳ ರಾಜಕಾರಣಕ್ಕೆ ಜಾತಿಗಳು ಸೃಷ್ಠಿಯಾದವೆ ಹೊರತು ಹುಟ್ಟಿನಿಂದ ಜಾತಿಯನ್ನು ಅರಸಾಬಾರದು ಕಾಸಿ ಕಮ್ಮಾರನಾದ ಬಿಸಿ ಮಡಿವಾಳಾದ ಹಾಸನಿಕ್ಕಿ ಸಾಲಿಗನಾದ ವೇದವ ಮೋದಿ ಅರನಾದ ಕರ್ಣನಲ್ಲಿ ಜನಸಿದವರುಂಟೆ ಜಗವದೊಳಗೆ ಎಂದು ಅರ್ಥ ಪೂರ್ಣವಾವಿ ವಚನ ನೀಡಿದ ವಿಶ್ವ ಗುರು ಬಸವಣ್ಣ ದೇವರ ಹೆಸರಿನಲ್ಲಿ ಪ್ರಾಣ ಬಲಿ ಮೌಡ್ಯಗಳ ಆಚರಣೆಗಳನ್ನು ಖಂಡಿಸಿ ಅರಿವೇ ಗುರುವೆಂದು ಸಾರಿದರು. ಮಡಕೆ ದೈವ ಮೊರ ದೈವ ಬೀದಿಯಲ್ಲಿ ಕಲ್ಲು ದೈವ ಹಣೆಗೆ ದೈವ ಮತ್ತಿತರ ದೇವರ ಹೆಸರಿನಲ್ಲಿ ನಡೆಯುತ್ತಿದ್ದ ಕಂದಾಚಾರವನ್ನು ತಿರಸ್ಕರಿಸಿದ ಬಸವಣ್ಣನವರ ವಚನಗಳನ್ನು ಪಠ್ಯಪುಸ್ತಕದಲ್ಲಿ ಅಳವಡಿಸುವ ಮುಖಾಂತರ ಕಂಪ್ಯೂಟರ್ ಯುಗದಿಂದ ಮತ್ತೆ ಯುವ ಪೀಳಿಗೆಯ ಭವಿಷ್ಯವನ್ನು ರಕ್ಷಣೆ ಮಾಡಬೇಕೆಂದು ಕಾರ್ಯಕ್ರಮದಲ್ಲಿ ಒತ್ತಾಯಿಸಿದರು.
ಕಾರ್ಯಕ್ರಮದಲ್ಲಿ ಮಹಿಳಾ ಜಿಲ್ಲಾದ್ಯಕ್ಷೆ ಎ.ನಳಿನಿಗೌಡ, ರತ್ನಮ್ಮ, ಸುನಿತಾ, ಶೋಭ, ರಾಧ, ಚೌಡಮ್ಮ, ಪುತ್ತೇರಿ ರಾಜು, ಗೀರೀಶ್ ಮುಂತಾದವರಿದ್ದರು.