ಜಮೀನು ವಿಚಾರಕ್ಕೆ ಮಾವ ಹಾಗೂ ಬಾಮೈದನ ನಡುವೆ ಜಗಳವಾಗಿದ್ದು, ಜಗಳ ಬಾಮೈದನಿಂದ ಮಾವನ ಕೊಲೆಯಲ್ಲಿ ಅಂತ್ಯವಾಗಿದೆ.
ಈ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ದಬ್ಬಗುಂಟೆ ಗ್ರಾಮದಲ್ಲಿ ನಡೆದಿದೆ.
ತಲೆಗೆ ದೊಣ್ಣೆಯಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಲಾಗಿದೆ.
ಗೋವಿಂದಪ್ಪ (53) ಕೊಲೆಯಾದ ದುರ್ದೈವಿ. ಮಂಜುನಾಥ್ (40) ಕೊಲೆ ಮಾಡಿದ ಆರೋಪಿ ಎಂದು ಗುರುತಿಸಲಾಗಿದೆ.
ಆಗಾಗ್ಗೆ ಜಮೀನು ವಿಚಾರಕ್ಕೆ ಮಂಜುನಾಥ್ ಮತ್ತು ಗೋವಿಂದಪ್ಪ ನಡುವೆ ಜಗಳವಾಗುತ್ತಿತ್ತು ಎನ್ನಲಾಗಿದೆ.
ಕೊಲೆಯಾದ ಸ್ಥಳಕ್ಕೆ ಹೊಸಕೋಟೆ ಡಿವೈಎಸ್ಪಿ ಶಂಕರ್ ಗೌಡ ಅಣ್ಣ ಸಾಹೇಬ್ ಪಾಟೀಲ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಹೊಸಕೋಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ…