ಕಳೆದ ಹಲವು ದಿನಗಳಿಂದ ಮಳೆ ಇಲ್ಲದೆ ಬಿಸಿಲಿನ ಬೇಗೆಗೆ ಬೆಂದಿದ್ದ ಭೂಮಿ. ನಗರದಲ್ಲಿ ಇಂದು ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಮಳೆ ಬಿದ್ದಿದ್ದರಿಂದ ಇಳೆ ಸ್ವಲ್ಪ ತಂಪಾಯಿತು. ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆ ರೈತರು ಬೆಳೆದಿದ್ದ ಬೆಳೆ ಮೊಳಕೆಯಲ್ಲೆ ಕಮರಿ ಹೋಗಿತ್ತು. ಪ್ರಾಣಿ ಪಕ್ಷಿಗಳು ನೀರಿಲ್ಲದೇ ಸೊರಗಿಹೋಗಿದ್ದವು. ಮಳೆರಾಯನ ಕೃಪೆಗಾಗಿ ತಾಲೂಕಿನ ಹಲವು ಗ್ರಾಮಗಳಲ್ಲಿ ಗ್ರಾಮೀಣ ಸೊಗಡಿನ ಪೂಜಾ ಕೈಂಕರ್ಯ ನಡೆಸಲಾಗಿತ್ತು. ಈ ಹಿನ್ನೆಲೆ ಜನರ ಪ್ರಾರ್ಥನೆ ಕರಗಿ ಇಳೆಗೆ ಬಂದ ಮಳೆ.