ಕೋಲಾರ: ಕುಡಿಯುವ ನೀರಿಗಾಗಿ 36 ಸಾವಿರ ಕೋಟಿ ವೆಚ್ಚದಲ್ಲಿ ಮಳೆಗಾಲದಲ್ಲಿ ಪಶ್ಚಿಮ ಘಟ್ಟಗಳಲ್ಲಿ ವ್ಯಥ್ಯವಾಗಿ ಸಮುದ್ರ ಸೇರುವ ನೀರನ್ನು ಬಯಲು ಸೀಮೆ ಜಿಲ್ಲೆಗಳಿಗೆ ಕುಡಿಯುವ ಎತ್ತಿನಹೊಳೆ ಯೋಜನೆ ನೀರು ಬಯಲುಸೀಮೆಗಳಿಗೆ ಹರಿಯುವ ಭರವಸೆ ಇದೆ ಎಂಬುದನ್ನು ಎರಡು ಜಿಲ್ಲೆಯ ಜನಪ್ರತಿನಿದಿಗಳು ಬಹಿರಂಗವಾಗಿ ಉತ್ತರ ನೀಡಬೇಕೆಂದು ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಪತ್ರಿಕಾ ಹೇಳಿಕೆ ಮುಖಾಂತರ ಒತ್ತಾಯಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ಯಾವುದೇ ನದಿ ನಾಲೆಗಳಿಲ್ಲದ ಕೋಲಾರ ಚಿಕ್ಕಬಳ್ಳಾಪುರ ಅವಳಿ ಜಿಲ್ಲೆಗಳಿಗೆ ಪ್ರಕೃತಿಯಲ್ಲಿ ದೊರೆಯುವ ಶುದ್ದ ನೀರಿನ ಯೋಜನೆಯಾದ ಎತ್ತಿನಹೊಳೆ ಮೊದಲನೇ ಹಂತದ ಜೀವ ಜಲ ಲೋಕಾರ್ಪಣೆ ಮಾಡಿರುವುದು ಸ್ವಾಗತಾರ್ಹ ವಿಚಾರ ಆದರೆ ಜಾತಕ ಪಕ್ಷಿಗಳಂತೆ ದಶಕಗಳ ಹಿಂದೆ ಪಶ್ಚಿಮ ಘಟ್ಟಗಳಲ್ಲಿ ಹರಿಯುವ ನದಿ ಕೊಳ್ಳಗಳನ್ನು ತಿರುಗಿಸಿ ಬಯಲು ಸೀಮೆಯ 7 ಜಿಲ್ಲೆಗಳಿಗೆ ನೀರು ನೀಡುತ್ತೇವೆಂದು 36 ಸಾವಿರ ಕೋಟಿ ವೆಚ್ಚದಲ್ಲಿ ಹರಿಯುತ್ತಿರುವ ಎತ್ತಿನಹೊಳೆ ನೀರು ಕೋಲಾರ ಜಿಲ್ಲೆಗೆ ಹರಿಯುತ್ತದೆಯೇ ಎಂಬುದು ಜನಪ್ರತಿನಿದಿಗಳಿಗೆ ಸರ್ಕಾರಕ್ಕೆ ಸಾರ್ವಜನಿಕರ ಪ್ರಶ್ನೆಯಾಗಿದೆ? ಜಿಲ್ಲೆಯ ಸ್ಥಳೀಯ ಜನಪ್ರತಿನಿಧಿ ಸರ್ಕಾರದ ಕಂದಾಯ ಮಂತ್ರಿಯಾಗಿರುವ ಕೃಷ್ಣ ಬೈರೇಗೌಡ ಕೋಲಾರ ಜಿಲ್ಲೆಗೆ ಎತ್ತಿನಹೊಳೆ ಹರಿಯುವುದು ಸಂಶಯ ಎಂದು ಹೇಳಿಕೆ ನೀಡಿರುವುದು ಸಮಂಜಸವೇ? ಮಾಹಿತಿಯಿಲ್ಲದೆ ಅವರು ಹೇಳಿಕೆ ನೀಡಿದ್ದಾರೆಯೇ ಎಂಬುದಕ್ಕೆ ಉತ್ತರ ಮುಂದೆ ಜನಪ್ರತಿನಿದಿಗಳು ನೀಡಬೇಕಾಗಿದೆ ಎಂದರು.
ಮುಂದಿನ 2027 ಕ್ಕೆ ಅಂತ್ಯಗೊಳ್ಳುವ ಎತ್ತಿನಹೊಳೆ ಯೋಜನೆ ಕೋಲಾರ ಜಿಲ್ಲೆಗೆ ಈಗಿಲಿನಿಂದಲೇ ಪೈಪ್ ಲೈನ್ ಅಳವಡಿಸಿ ಹರಿಸದೆ ಇದ್ದರೆ ನೀರಿನ ವಿಚಾರದಲ್ಲಿ ಬಯಲು ಸೀಮೆಗೆ ಚಂದಮಾಮ ತೋರಿಸಿ ಯಾಮಾರಿಸಲು ಮುಂದಾಗಿದೆ ನೀರು ಹರಿಯದೆ ಇದ್ದರೆ ಎರಡೂ ಜಿಲ್ಲೆಯ ಜನಪ್ರತಿನಿದಿಗಳು ರಾಜೀನಾಮೆ ನೀಡಿ ಉಗ್ರವಾದ ಹೋರಾಟಕ್ಕೆ ಸೈನಿಕರಂತೆ ಮುನ್ನುಗ್ಗಬೇಕು ಇಲ್ಲವಾದರೆ ಮತ ಕೊಟ್ಟಂತಹ ಜನರೇ ನಿಮ್ಮನ್ನು ಹಳ್ಳಿ ಹಳ್ಳಿಯಲ್ಲೂ ಚೀಮಾರಿ ಹಾಕುವ ಕಾಲ ದೂರವಿಲ್ಲ ಎಂದು ಎಚ್ಚರಿಕೆ ನೀಡಿದರು.
ಜಿಲ್ಲಾದ್ಯಕ್ಷ ಈಕಂಬಳ್ಳಿ ಮಂಜುನಾಥ್ ಮಾತನಾಡಿ, ಎತ್ತಿನಹೊಳೆ ಹರಿಯುವ ಜಿಲ್ಲೆಯ ಕೆರೆಗಳಿಗೆ ಆಯಾ ತಾಲ್ಲೂಕಿನ ಶಾಸಕರು ವಾರಕ್ಕೆ 2 ಕೆರೆಗೆ ಭೇಟಿ ನೀಡಿ ಕೆರೆ ರಾಜಕಾಲುವೆಗಳ ಒತ್ತುವರಿ ತೆರೆವುಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆಯ ಮೂಲಕ ಜವಾಬ್ದಾರಿಯನ್ನು ನಿರ್ವಹಿಸಬೇಕೆಂದು ಸಲಹೆ ನೀಡಿದರು.
ಪತ್ರಿಕಾ ಹೇಳಿಕೆ ನೀಡುವಾಗ ಮಂಗಸಂದ್ರ ತಿಮ್ಮಣ್ಣ, ಪುತ್ತೇರಿ ರಾಜು, ಮುಂತಾದವರಿದ್ದರು.