
ಲಾಯರ್ ಜಗದೀಶ್ ವಿರುದ್ದ ಶಾಸಕ ಎಸ್.ಆರ್.ವಿಶ್ವನಾಥ್ ಅಭಿಮಾನಿಗಳು ಕೆಂಡಾಮಂಡಲವಾಗಿದ್ದಾರೆ. ಲಾಯರ್ ಜಗದೀಶ್ ಭಾವಚಿತ್ರಕ್ಕೆ ಚಪ್ಪಲಿ, ಪೊರಕೆಯಿಂದ ಹೊಡೆದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಇನ್ನು ಜಗದೀಶ್ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಅಭಿಮಾನಿಗಳ ಕಿಡಿಕಾರಿದ್ದಾರೆ.
ಲಾಯರ್ ಜಗದೀಶ್ ಶಾಸಕ ವಿಶ್ವನಾಥ್ ವಿರುದ್ಧ ಪದೇ ಪದೇ ಆರೋಪ ಮಾಡ್ತಿರುವ ವಿಚಾರಕ್ಕೆ ವಿಶ್ವನಾಥ್ ಅಭಿಮಾನಿಗಳು ಜಗದೀಶ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.

ಏಕವಚನದಲ್ಲೇ ಜಗದೀಶ್ ವಿರುದ್ಧ ಯಲಹಂಕ ಜನತೆ ಕಿಡಿ ಕಾರಿದ್ದಾರೆ.
‘ಜಗ್ಗು ನಿನ್ ಸ್ವಲ್ಪ ತಗ್ಗು’ ಇಲ್ಲಾ ಅಂದ್ರೆ ‘ನಾವು ಬಗ್ಗುಸ್ತೀವಿ’ ಅಂತ ವಾರ್ನ್ ಕೂಡ ಮಾಡಿದ್ದಾರೆ.
ರಾಜಕೀಯದ ಬಗ್ಗೆ ಮಾತನಾಡಲಿ ಆದ್ರೆ ಶಾಸಕರ ಹೆಂಡತಿ, ಮಕ್ಕಳ ಬಗ್ಗೆ ಮಾತಡಬಾರದು. ಜಗದೀಶ್ ಗೆ ತಾಕತ್ತಿದ್ದರೆ ಕೇವಲ ಬಿಬಿಎಂಪಿ ಕರ್ಪೂರೇಟರ್ ಆಗಿ ಗೆಲ್ಲಲ್ಲಿ ಸಾಕು.. ಸುಖಾಸುಮ್ಮನೆ ಎಸ್ ಆರ್ ವಿಶ್ವನಾಥ್ ರವರಿಗೆ ಧಕ್ಕೆ ತರೋ ಕೆಲ್ಸ ಮಾಡ್ತಿದ್ದಾನೆ. ಈ ಕೂಡಲೇ ನಮ್ಮ ಶಾಸಕರ ವಿರುದ್ದ ಮಾತನಾಡೋದನ್ನ ನಿಲ್ಲಿಸಬೇಕು ಎಂದು ಅಭಿಮಾನಿಗಳು ಆಗ್ರಹಿಸಿದ್ದಾರೆ.

ಬೆಂಗಳೂರು ನಗರ ಜಿಲ್ಲೆ ಯಲಹಂಕದ ವೆಂಕಟಾಲಾ ಸರ್ಕಲ್ ಬಳಿ ಪ್ರತಿಭಟನೆ ನಡೆಸಿದ್ದಾರೆ.